ಸುದ್ದಿಗಳು

ಮಿಖಾ ಸಿಂಗ್ ಬಂಧನ- ವೈರಲ್ ಆಯ್ತು ರಾಖಿ ಸಾವಂತ್ ಹೇಳಿಕೆಯ ವಿಡಿಯೋ!!

ಮಿಖಾ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೊಂದು ವಿಡಿಯೋ...

 ಮುಂಬೈ,ಡಿ.9: ಬ್ರೆಜಿಲ್ ಮೂಲದ ಹದಿಹರೆಯದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಬಾಲಿವುಡ್ ಗಾಯಕ ಮಿಖಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಆರೋಪ ಮಿಖಾ ಸಿಂಗ್ ಮೇಲಿದೆ. ಈ ನಡುವೆ ಮಿಖಾ ಬಂಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ರಾಖಿ ಸಾವಂತ್, ತಾನು ನಿನ್ನನ್ನು ದುಬೈ ಜೈಲಿನಿಂದ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು, ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

 ಜೋರಾಗಿ ಅಳುತ್ತಾ ರಾಖಿ ಹೇಳಿದ್ದೇನು ಗೊತ್ತಾ?

ನಿಮಗೆಲ್ಲಾ ಗೊತ್ತಿರುವಂತೆ ರಾಖಿ ಸಾವಂತ್ ಪದೇ ಪದೇ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೆಲದಿನಗಳ ಹಿಂದೆ ಬೆತ್ತಲೆ ಮದುವೆಯಾಗುತ್ತೇನೆ ಎಂದು ಹೇಳಿ ಬಳಿಕ ಹುಡುಗನಿಗೆ ಕೈ ಕೊಟ್ಟರು. ಇನ್ನೂ ಮಿಖಾ ಸಿಂಗ್ ತನಗೆ ಬಲವಂತವಾಗಿ ಮುತ್ತು ನೀಡಿದ್ದರೂ ಎಂದು ಈ ಹಿಂದೆ ಆರೋಪ ಮಾಡಿದ್ದರು. ಇದೀಗ ಅದೇ ಮಿಖಾ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ ರಾಖಿ.

Image result for rakhi sawant images

ಬ್ರೆಜಿಲ್ ಮಾಡೆಲ್ ಗೆ ಅಶ್ಲೀಲ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ರಾಖಿ  ಸಾವಂತ್ ಅಪ್ ಲೋಡ್ ಮಾಡಿದ್ದು, ವಿಡಿಯೋದಲ್ಲಿ ನಟಿ ಜೋರಾಗಿ ಅಳುತ್ತಾ, ಮಿಖಾ ವರ್ತನೆಯನ್ನು ಖಂಡಿಸಿದ್ದಲ್ಲದೆ, ತಾನು ಕೂಡಲೇ ದುಬೈಗೆ ತೆರಳಿ, ನಿನ್ನನ್ನು ಜೈಲಿನಿಂದ ಹೊರಗೆ ಕರೆತರುತ್ತೇನೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ ಕೂಡ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಮಿಖಾ ಸಿಂಗ್ ದುಬೈಗೆ ತೆರಳಿದ್ದು, ಈ ಸಂದರ್ಭದಲ್ಲಿ 17ರ ಹರೆಯದ ಬ್ರೆಜಿಲ್ ಮಾಡೆಲ್ ಗೆ ಅಶ್ಲೀಲ ಫೋಟೋಗಳನ್ನು ರವಾನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾಡೆಲ್ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ಮಿಖಾ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಿಖಾ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿರುವ ರಾಖಿ, ನಾನೀಗ ಕೊಂಚ ನೆಮ್ಮದಿಯಾಗಿದ್ದನೆ ಎಂದಿದ್ದಾರೆ…

Image result for mikha singh singer

Tags