ಜೀವನ ಶೈಲಿಸಂಬಂಧಗಳುಸುದ್ದಿಗಳು

ಬಂದೇ ಬಿಡ್ತು ಸಹೋದರ ಸಹೋದರಿಯ ಭಾಂದವ್ಯವನ್ನು ಸಾರುವ “ರಾಖಿ ಹಬ್ಬ”

ಶ್ರಾವಣ ಮಾಸ ಶುರುವಾಯಿತೆಂದರೇ ಸಾಕು ಅಲ್ಲಿ ಹಬ್ಬಗಳ ಸುರಿಮಳೆ ಆರಂಭವಾಯಿತೆಂದೇ ಅರ್ಥ. ವರಮಹಾಲಕ್ಷ್ಮೀ, ಸ್ವಾತಂತ್ಯ ದಿನಾಚರಣೆ, ಕೃಷ್ಣಾಷ್ಟಮಿ ಗೌರಿ ಗಣೇಶ ಹೀಗೆ ಒಂದೊಂದರಂತೆ ಹಬ್ಬಗಳು ಸಾಲು ಸಾಲಾಗಿ ಬರತೊಡಗುತ್ತವೆ. ಈ ಹಬ್ಬಗಳಲ್ಲಿ ನಮಗೆಲ್ಲ ಅತೀ ಹೆಚ್ಚು ಸಂತೋಷವನ್ನುಂಟು ಮಾಡುವ ಹಬ್ಬ ರಾಖಿ ಹಬ್ಬ.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೂಡ ಅದ್ದೂರಿಯಾಗಿ ಆಚರಣೆ ಮಾಡುವ  ಈ ಹಬ್ಬ ಶ್ರಾವಣ ಮಾಸದ ಪೂರ್ಣಿಮೆಯ ದಿನದಂದು ಬರುವುದರ ಜೊತೆಗೆ ಆಗಸ್ಟ್ ತಿಂಗಳಿನಲ್ಲಿ  ಆಚರಣೆ ಮಾಡಲಾಗುತ್ತದೆ.Image result for raksha bandhanಅಣ್ಣ ತಂಗಿಯ ಬಾಂಧವ್ಯ

ಅಣ್ಣ ತಂಗಿಯ ಬಾಂಧವ್ಯವನ್ನು ಸಾರುವ ರಾಖಿ ಹಬ್ಬ ಈ ವರ್ಷ ಆಗಸ್ಟ್ 15 ರಂದು ಬಂದಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ಬಣ್ಣದ ಬಣ್ಣದ ರಾಖಿಗಳು ಹರಿದಾಡುತ್ತಿವೆ. ಅಣ್ಣ ತಂಗಿಯ ಪವಿತ್ರ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ಮುಂಜಾನೆಯೇ ಎದ್ದು, ದೇವರ ಮುಂದೆ ಕುಳಿತು ಸಹೋದರ ದೀರ್ಘಾಯುಷ್ಯವಾಗಿ ಹಾಗೂ ಆರೋಗ್ಯದಿಂದ ಇರಲಿ ಎನ್ನುವ ಮೂಲಕ ಸಹೋದರಿ ಮುಂಗೈಗೆ ಬಣ್ಣದ ರಾಖಿಯನ್ನು ಕಟ್ಟಿ ಆರತಿ ಮಾಡಿ ಸಿಹಿ ತಿನಿಸುತ್ತಾಳೆ.Image result for raksha bandhanಈ ಹಬ್ಬದಂದು ಸಹೋದರ, ಸಹೋದರಿಗೆ ಯಾವುದೇ ಕಷ್ಟದಲ್ಲಿದರೂ ಸರಿ ನಾನು ನಿನ್ನನ್ನು  ಕಾಪಾಡುತ್ತೇನೆ ಎಂಬ ಭರವಸೆಯೊಂದಿಗೆ ಕಟ್ಟಿಸಿಕೊಳ್ಳುತ್ತಾನೆ ಹಾಗೂ ಯಾವುದೇ ದುಷ್ಟ ಶಕ್ತಿಗಳನ್ನು ತನ್ನ ಸಹೋದರನ ಬಳಿ ಸುಳಿಯದಂತೆ ಎನ್ನುವ ಸಹೋದರಿ ತನ್ನ ಅಣ್ಣನಿಗೆ ರಕ್ಷಾ ಕವಚವಾಗಿ ರಾಖಿಯನ್ನು ಕಟ್ಟುತ್ತಾಳೆ. ಇಷ್ಟೇ ಅಲ್ಲದೇ ಅಣ್ಣ ತಂಗಿಗೆ ಉಡುಗೊರೆಯಾಗಿ ಬಟ್ಟೆ, ಹಣ, ಚಿನ್ನದ ವಸ್ತುಗಳು ಹಾಗೂ ಇನ್ನೇತರ ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.Image result for raksha bandhanಬಣ್ಣ ಬಣ್ಣದ ರಾಖಿ

ಇದೀಗ ಮಾರುಕಟ್ಟೆಯಲ್ಲಿ ಬಗೆ ಬಗೆಯ ರಾಖಿಗಳು ಸೌಂಡ್ ಮಾಡುತ್ತಿದ್ದು, ಒಂದು ರೂಪಾಯಿಯಿಂದ  ಹಿಡಿದು ಲಕ್ಷ ರೂಪಾಯಿಗಳವರೆಗೂ ಕಲರ್ ಕಲರ್ ರಾಖಿ ದೊರೆಯುತ್ತದೆ. ಅದರಲ್ಲೂ ಪರ್ಲ್ ರಾಖಿ, ಮೊಟಿಫ್ ರಾಖಿ, ಕುಂದನ್ ರಾಖಿ, ಟಾಕಿಂಗ್ ರಾಖಿ ಹಾಗೂ ಇನ್ನೂ ಬಗೆ ಬಗೆಯ ರಾಖಿಗಳು ಸಿಗುತ್ತದೆ.

ಇದರ ಜೊತೆಗೆ ಮಕ್ಕಳಿಗೆಂದೇ ಕಾರ್ಟೂನ್ ರಾಕಿಗಳು ಸಹ ದೊರೆಯುತ್ತವೆ. ಇನ್ನೂ ಹೆಚ್ಚೆಂದರೇ ನಮ್ಮ ಸಹೋದರನ ಕೈಯಲ್ಲಿ ಸದಾಕಾಲ ತಾವು ಕಟ್ಟಿರುವ ರಾಖಿ ಇರಬೇಕೆಂದು ಬಯಸುವವವರು ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಿದ ಓಂ, ಸ್ವಸ್ತಿಕ್, ಗಣೇಶ, ಲಕ್ಷ್ಮೀ ರೀತಿಯ ರಾಖಿಗಳನ್ನು ಕಟ್ಟುತ್ತಾರೆ.

Image result for raksha bandhanಕಾಲೇಜು ವಿದ್ಯಾರ್ಥಿಗಳ ಪರದಾಟ

ಇದರ ಜೊತೆಗೆ ‘ರಕ್ಷಾ ಬಂಧನ’ ಬಂದರೇ ಸಾಕು ಕಾಲೇಜುಗಳಲ್ಲಿ ಹುಡುಗರು ಮಾರು ದೂರ ಹೋಗುತ್ತಾರೆ. ತಮ್ಮ ಪ್ರೀತಿ ಪಾತ್ರರೂ ಎಲ್ಲಿ ಬಂದು ನಮಗೆ ರಾಖಿ ಕಟ್ಟುತ್ತಾರೆ ಎಂಬ ಭಯದಿಂದ ಪಡ್ಡೆ ಹುಡುಗರು ಓಡಿ ಹೋಗುವುದನ್ನು ನಾವು ಕಾಣಬಹುದು.Image result for raksha bandhanಪರಸ್ಪರ ಗೌರವ ನೀಡುವಿಕೆ

“ರಕ್ಷಾ ಬಂಧನ್” ಎನ್ನುವ ಹೆಸರೇ ಸೂಚಿಸುವಂತೆ ಇದು “ರಕ್ಷಣೆಯನ್ನು ನೀಡುವ ಬಂಧನ” ವಾಗಿದೆ. ಆಗೀನ ಕಾಲದಲ್ಲಿ ಸಹೋದರ ಸಹೋದರಿ  ಪ್ರೀತ ಪಾತ್ರದಿಂದ ವಿಶ್ವಾಸದಿಂದ ಪರಸ್ಪರ ಗೌರವ ನೀಡುತ್ತಿದ್ದರು. ಆದರೆ ಈಗೀನ ಕಾಲದಲ್ಲಿ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ತಮ್ಮ ಪ್ರೀತಿ ಪಾತ್ರರಿಗೆ ಸಮಯ ನೀಡದಂತೆ ಆಗಿದೆ.  ವಾಸ್ತವದಲ್ಲಿ ರಾಖಿ ಕಟ್ಟಿದ ನಂತರವೇ ಜವಾಬ್ದಾರಿ ಹೆಚ್ಚುವುದು ಮಾತ್ರ ಈಗಿನವರಿಗೆ ತಿಳಿಯುತ್ತಿಲ್ಲ. ಆದ ಕಾರಣ ಸಹೋದರ ಹಾಗೂ ಸಹೋದರಿ ಪರಸ್ಪರ ಗೌರವವನ್ನು ನೀಡಿ, ಪ್ರೀತಿಯಿಂದ ನಡೆದುಕೊಳ್ಳುವಂತಾಗಲಿ.

Image result for raksha bandhanಸಿನಿಮಾಗಳ ವಿಚಾರವಾಗಿ ಬಂದರೇ, ಸಹೋದರ ಸಹೋದರಿಯ ಬಂಧವನ್ನು ಸಾರುವ ಸಿನಿಮಾಗಳು ಬಹಳಷ್ಟು ಸಂಖ್ಯೆಯಲ್ಲಿ ಬಂದಿವೆ. ‘ಅಣ್ಣ ತಂಗಿ’, ‘ತವರಿಗೆ ಬಾ ತಂಗಿ’, ‘ತವರಿನ ತೊಟ್ಟಿಲು’, ‘ದೇವರು ಕೊಟ್ಟ ತಂಗಿ’, ‘ವರ್ಷ’, ‘ಹೃದಯವಂತ’ ಹೀಗೆ ಬಹಳಷ್ಟು ಕಥೆಗಳನ್ನು ಬಂದಿದ್ದು, ಅಣ್ಣ ತಂಗಿ ಒಬ್ಬನೊಬ್ಬರ ನಡುವಿನ ಪ್ರೀತಿ, ಕಾಳಜಿ, ನಂಬಿಕೆ, ವಿಶ್ವಾಸ, ಸಾರಾಂಶವನ್ನು ಈ ಚಿತ್ರಗಳು ನೀಡುತ್ತವೆ. ಇವೆಲ್ಲವುಗಳನ್ನು ನಾವು 3 ಗಂಟೆ ಮನರಂಜನೆಗಾಗಿ ನೋಡದೇ ಜೀವನದಲ್ಲಿ ಅಳವಡಿಸಿಕೊಳ್ಳಿ ಎನ್ನುವುದೇ ಇದರ ಸಾರಾಂಶವಾಗಿದೆ.

ಈ ಮೂಲಕ ಈ ವರ್ಷದ ನಿಮ್ಮ ‘ರಕ್ಷಾ ಬಂಧನ’ ಸಂತೋಷವಾಗಿರಲಿ ಎಂದು ನಮ್ಮ ಬಾಲ್ಕನಿ ನ್ಯೂಸ್ ಹಾರೈಸುತ್ತದೆ.Image result for raksha bandhan

ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್

#rakshabandhan #rakshabandhanspecial #rakshabandhanevent #brotherandsister

Tags