ಸುದ್ದಿಗಳು

‘ಪುರಾವೆ’.. ಹುಡುಕುವುದರಲ್ಲಿ ತಲ್ಲೀನರಾದ ರಕ್ಷಾ..!!!

ಮೋಡಿ ಮಾಡುತ್ತಿರುವ ಚಿತ್ರದ ಟ್ರೈಲರ್

ಬೆಂಗಳೂರು.ಮೇ.15: ಜೆ.ಕೆ ನಟಿಸಿದ್ದ ‘ಮೇ 1’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ರಕ್ಷಾ ಸೋಮಶೇಖರ್. ಈಗಾಗಲೇ ಇವರು ಹಲವಾರು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ಇವರು ನಟಿಸಿರುವ ‘ಪುರಾವೆ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಅಂದ ಹಾಗೆ ‘ಪುರಾವೆ’ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಕಥಾ ಹಂದರವನ್ನು ಒಳಗೊಂಡಿದ್ದು, ನಿರಂತ್ ನಾಯಕನಟರಾಗಿ ನಟಿಸಿದ್ದಾರೆ. ಇನ್ನು ನಾಯಕಿ ರಕ್ಷಾಗೆ ಇಲ್ಲಿ ವಿಭಿನ್ನ ಪಾತ್ರವಿದ್ದು, ಚಿತ್ರದ ಕುರಿತಂತೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ರಕ್ಷಾರದ್ದು ಡಾಕ್ಟರ್ ಪಾತ್ರವಾಗಿದ್ದು, ‘ಇಂತಹ ಕಥೆಗಾಗಿ ತುಂಬ ದಿನಗಳಿಂದ ಹುಡುಕಾಟದಲ್ಲಿದ್ದೆ. ಕೊನೆಗೂ ಅದನ್ನು ‘ಪುರಾವೆ’ ಮೂಲಕ ಈಡೇರಿಸಿಕೊಂಡಿದ್ದೇನೆ. ಸಮಾಜದಲ್ಲಿ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಬಾಲಕಿಯರಮೇಲೆ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇಂಥ ವಿಷಯವನ್ನು ಆಯ್ದುಕೊಂಡು, ಆ ಪ್ರಕರಣ ಭೇದಿಸುವ ಮತ್ತು ಪೋಷಕರಿಗೆ ನ್ಯಾಯ ದೊರಕಿಸಿ ಕೊಡುವ ಕಥೆ ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ.

ಯಾವುದೋ ಪುಟ್ಟ ಹುಡುಗಿಯ ರೇಪ್ ಅಂಡ್ ಮರ್ಡರ್‌ ನನ್ನು ಹುಡುಕುತ್ತಾ ಹೊರಡುವ ಕಥೆ. ಕಥೆಯಲ್ಲಿ ಆಗುವ ತಿರುವುಗಳು, ಆ ಆರೋಪಿ ಯಾರು ಎಂಬುದನ್ನು ಕಂಡುಹಿಡಿಯಲು ಹೊರಟಾಗ ನಡೆಯುವ ಘಟನೆಗಳು, ಹೀಗೆ ಎಲ್ಲವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಇನ್ನು ಈ ಚಿತ್ರವು ವಿನೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು,  ಸಿನಿಮಾಗೆ ಬಂಡವಾಳ ಮಾಡಿದ್ದಾರೆ ಕೃಷ್ಣ ಮೂರ್ತಿ. ಉಳಿದಂತೆ ನಿರಂತ್, ರಕ್ಷಾ ಸೋಮಶೇಖರ್ ಸೇರಿದಂತೆ ಹಲವಾರು ಮಂದಿಯ ತಾರಾಗಣವಿದೆ.

‘ಅದ್ದೂರಿ-2’ ಚಿತ್ರಕ್ಕೆ ಉಪೇಂದ್ರ ಅಣ್ಣನ ಮಗ ನಿರಂಜನ್ ಹೀರೋ..!!

#rakshasomashekhar, #acted, #purave, #movie, #balkaninews #filmnews, #kannadasuddigalu, #may1st

Tags

Related Articles