ಸುದ್ದಿಗಳು

ರಕ್ಷಿತ್ ಗೆ ‘ಶ್ರೀಮದ್ರಮಾರಮಣ ಗೋವಿಂದಾ’ ಎಂದ ರಶ್ಮಿಕಾ…..

ಕಿರಿಕ್ ಹೀರೋಗೆ ಗೋವಿಂದ… ಗೋವಿಂದಾ… ಎಂದ ರಶ್ಮಿಕಾ

ಸತ್ಯವೆಂಬ ಬೆಕ್ಕು ಹೊರಬಿದ್ದಿದ್ದರೂ ಕಣ್ಣು ಮುಚ್ಚಿ ಕುಳಿತ ಚಮಕ್ ಹುಡುಗಿ..

ಭಾವೀ ಅತ್ತೆಯ ಕೈವಾಡ ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ಮುರಿಯಲು ಕಾರಣವೇ?

Image result for rakshith shetty

ರಶ್ಮಿಕಾ ಹಾಗೂ ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಕೊನೆಗೂ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ.  ಫೇಸ್ ಬುಕ್ ಗೆ ಮರಳಿ ಬಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.

“ಗೌರವಾನ್ವಿತ ಜನರಿಗೆ!

ಇತರ ವಿಷಯಗಳ ಮೇಲೆ ಕೇಂದ್ರೀಕರಿಸಲು ನಾನು ಸಾಮಾಜಿಕ ಮಾಧ್ಯಮದಿಂದ ದೂರವಿರುತ್ತೇನೆಂದು ಘೋಷಿಸಿದ್ದೇನೆ. ಆದರೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸುವ ಸಲುವಾಗಿ ನಾನು ಮರಳಿ ಬರಬೇಕಾಗಿ ಬಂತು. ಕಳೆದ ಎರಡು ದಿನಗಳಿಂದ ಏನೆಲ್ಲಾ ಆಗುತ್ತಿದೆ ಎಂದರೆ ಯಾವಮೂಲ ಕಾರಣಕ್ಕಾಗಿ ಓರ್ವ ವ್ಯಕ್ತಿ ಇನ್ನೊಬ್ಬರನ್ನು ಅಕ್ಷರಶಃ ಪ್ರೀತಿಸಿದ್ದನೋ, ಯಾವುದಕ್ಕಾಗಿ ಬದುಕಿದ್ದನೋ ಅದನ್ನೇ ದೋಚಿದಂತೆ ಆಗುತ್ತಿದೆ.

ನೀವು ಎಲ್ಲರೂ ರಶ್ಮಿಕ ಬಗ್ಗೆ ಅಭಿಪ್ರಾಯಗಳನ್ನು ರಚಿಸುತ್ತಲೇ ಇದ್ದೀರಿ. ನಾನು ನಿಮ್ಮಲ್ಲಿ ಯಾರನ್ನೂ ದೂರುವುದಿಲ್ಲ. ಏಕೆಂದರೆ ಅದನ್ನು ಹಾಗೆ ತೋರಿಸಲಾಗಿದೆ. ನಾವೆಲ್ಲರೂ ನೋಡುತ್ತೇವೆ ಮತ್ತು ಏನು ಹೇಳಲಾಗಿದೆ  ಅದನ್ನೇ ನಂಬುತ್ತೇವೆ. ಆದರೆ ಇದು ನಿಜವಲ್ಲ. ಮತ್ತೊಂದು ದೃಷ್ಟಿಕೋನದಿಂದ ಯೋಚಿಸದೆ ನಾವು ಹೆಚ್ಚಿನ ತೀರ್ಮಾನಕ್ಕೆ ಬಂದಿರುತ್ತೇವೆ. ನಾನು ಎರಡು ವರ್ಷಗಳಿಗೂ ಹೆಚ್ಚಿನ ಕಾಲ ರಶ್ಮಿಕಾಳನ್ನು ತಿಳಿದಿದ್ದೇನೆ ಮತ್ತು ನಾನು ನಿಮ್ಮೆಲ್ಲರಿಗಿಂತ ಆಕೆಯನ್ನು ಚೆನ್ನಾಗಿಬಲ್ಲೆ.

ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಅಂಶಗಳಿವೆ. ದಯವಿಟ್ಟು ಅವಳನ್ನು ಟೀಕಿಸುವುದನ್ನು ನಿಲ್ಲಿಸಿರಿ. ಅವಳು ಶಾಂತಿಯಿಂದ ಇರಲಿ. ಎಲ್ಲವೂ ಶೀಘ್ರದಲ್ಲೇ ತೀರ್ಮಾನಕ್ಕೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ನೀವು ಎಲ್ಲರೂ ನಮ್ಮೊಳಗಿರುವ ಸತ್ಯವನ್ನು ತಿಳಿಯುವಿರಿ. ದಯವಿಟ್ಟು ಯಾವುದೇ ಮಾಧ್ಯಮ ಸುದ್ದಿಗಳ ಹಿಂದೆ ಹೋಗಬೇಡಿ. ಯಾರೊಬ್ಬರೂ ನನ್ನಿಂದ ಅಥವಾ ರಶ್ಮೀಕಾಳಿಂದ ಮೊದಲು ಸರಿಯಾಗಿ ಮಾಹಿತಿಯನ್ನು ಹೊಂದಿಲ್ಲ. ತಮ್ಮ ಅವಶ್ಯಕತೆಗಾಗಿ ಅನೇಕರು ತಮ್ಮ ಸುದ್ದಿಗಳನ್ನು ರಚಿಸುತ್ತಿದ್ದಾರೆ.

ಈ ಪುಟವನ್ನು ಕೆಲವು ದಿನಗಳವರೆಗೆ  ಹೀಗೆ ಇಡುತ್ತೇನೆ. ಹಾಗಾಗಿ ಈ ಸಂದೇಶ ಎಲ್ಲರಿಗೂ ತಿಳಿಯುತ್ತದೆ. ನಿಜಕ್ಕೂ ಅಗತ್ಯವೆನಿಸಿದರೆ ನಾನು ಹಿಂತಿರುಗುತ್ತೇನೆ. ಈ ಹಿಂದೆ ಇದೇ ಸಾಮಾಜಿಕ  ಮಾಧ್ಯಮದಿಂದ ಹೊರ ನಡೆದಿದ್ದಕ್ಕೂ, ಇದ್ಯಾವುದಕ್ಕೂ ಸಂಬಂಧವಿಲ್ಲ. ಸಾಮಾಜಿಕ ಮಾಧ್ಯಮವು ಒಂದು ಚಟವಾಗುತ್ತಿರುವುದರಿಂದ  ಇದನ್ನು ಬಿಟ್ಟು ನಾನು ಕೆಲಸದಲ್ಲಿ  ಕೇಂದ್ರೀಕರಿಸಲು ಬಯಸುತ್ತೇನೆ

ರಿಗಾರ್ಡ್ಸ್”

ರಕ್ಷಿತ್ ಶೆಟ್ಟಿ

 

 

Tags

Related Articles