ಸುದ್ದಿಗಳು

ರಕ್ಷಿತ್-ರಶ್ಮಿಕಾ ಬ್ರೇಕಪ್! ಕುಟುಂಬಸ್ಥರು ಹೇಳುವುದಾದರೇನು?

ಪ್ರಣಯ ಪಕ್ಷಿಗಳು ದೂರ.. ದೂರ..

ಬೆಂಗಳೂರು,ಸೆ.10 : ‘ಕಿರಿಕ್ ಪಾರ್ಟಿ’ ಚಿತ್ರದಿಂದ ಚಂದನವನಕ್ಕೆ ಕಾಲಿಟ್ಟ ಕಿರಿಕ್ ಬೆಡಗಿ ರೀಲ್ ಲೈಫ್ ನಲ್ಲೂ ಅಲ್ಲದೆ ರಿಯಲ್ ಲೈಫ್ ನಲ್ಲೂ ಒಂದಾಗಿದ್ದ ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಯಾವುದೇ ಗಾಸಿಪ್ ಸುದ್ದಿ ಬಂದರೂ ಈ ಜೋಡಿ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ಅಚಾನಕ್ ಆಗಿ ಏನಾಯ್ತೋ ಗೊತ್ತಿಲ್ಲ. ರಶ್ಮಿಕಾ-ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥವನ್ನು ನಿಲ್ಲಿಸಿರುವ ವದಂತಿಗಳು ಕೇಳಿ ಬಂದವು. ಈ ಜೋಡಿಗಳು ಸುಳ್ಳು ವರದಿಗಳನ್ನುತಳ್ಳಿ ಹಾಕಿದ್ದರು. ಇದೀಗ, ಈ ಪ್ರಣಯ ಹಕ್ಕಿಗಳು ನಿಜವಾಗಿ ದೂರವಾಗಿ ಬಿಟ್ಟಿದ್ದಾರೆ ಎಂದು ತೋರುತ್ತಿದೆ..

Image result for rashmika rakshith engagement

ಬೇಡಿಕೆಯ ನಟಿ

ಹೌದು, ಸದ್ಯ ಬಂದಿರುವ ಮಾಹಿತಿ ಪ್ರಕಾರ ಈ ಪ್ರಣಯ ಪಕ್ಷಿಗಳ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ಖಚಿತವಾಗಿದೆ.  ವೈಯಕ್ತಿಕ ವಿಚಾರವಾಗಿರುವುದರಿಂದ ದಯವಿಟ್ಟು ಈ ಬಗ್ಗೆ ಕೇಳಬೇಡಿ ಎಂದು ರಶ್ಮಿಕಾ ಕುಟುಂಬ ಹೇಳಿದೆ.

ರಶ್ಮಿಕಾ ಸದ್ಯ ಟಾಲಿವುಡ್  ಸಿನಿಮಾಗಳಲ್ಲಿ ಸಕ್ರಿಯಾರಾಗಿದ್ದು ಅತೀ ಬೇಡಿಕೆಯ ನಟಿಯೂ ಕೂಡ ಹೌದು. ‘ಚಲೋ’ ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ‘ಗೀತ ಗೋವಿಂದಂ’ ನಲ್ಲಿ  ವಿಜಯ ದೇವರಕೊಂಡ ಜೊತೆ ನಟಿಸಿ ಸೈ ಅನಿಸಿಕೊಂಡು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ಪ್ರಯಾಣ ಮುಂದುವರೆಯುತ್ತಿದೆ.

ಬೇಕಪ್ ಸುದ್ದಿ ನಿಜನಾ?

ಇದೀಗ ಇಬ್ಬರ ನಡುವೆ  ಬ್ರೇಕಪ್ ಸುದ್ದಿ ನಿಜ ಎಂದು ಕುಟುಂಬದ ಆಪ್ತ ಮೂಲಗಳು ಹೇಳುತ್ತಿವೆ. ಇದು ತೀರ ಖಾಸಗಿ ವಿಚಾರವಾಗಿದ್ದು ನಮಗೆ ಪ್ರೈವೆಸಿ ಕೊಡಿ ಎಂದ ರಶ್ಮಿಕಾ ಕುಟುಂಬ ಮನವಿ ಮಾಡಿದೆ.

Image result for rashmika

ಲಿಪ್ ಲಾಕ್ ಆವಾಂತರ

ಆದರೆ ಇನ್ನೊಂದೆಡೆ ಗೀತಗೋವಿಂದಂ’ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರೊಂದಿಗೆ ಲಿಪ್‌ಲಾಕ್ ಸೀನ್‌ ನಡೆಸಿದ್ದು, ವಿಪರೀತ ಸುದ್ದಿಯಾಗಿದ್ದು, ಅವರೊಂದಿಗೆ ರಶ್ಮಿಕಾ ಗಪ್ ಚುಪ್ ನಡೆಯುತ್ತಿದೆ ಎಂಬ ಮಾತುಗಳೂ ಕೇಳುತ್ತಿವೆ.

ಚಿತ್ರದಲ್ಲಿ ಬ್ಯುಸಿ

ರಶ್ಮಿಕಾ ಸದ್ಯ ತೆಲುಗಿನ ನಾಗಾರ್ಜುನ ನಾನಿ ಜೊತೆ ತೆಲುಗಿನ  ‘ದೇವದಾಸ್’ ಸಿನಿಮಾದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಯಾಗಬೇಕಿದೆ. ಇನ್ನು ವಿಜಯ್ ದೇವರಕೊಂಡ ಜೊತೆ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲೂ ಕಾಣಿಸಲಿದ್ದಾರೆ. ಜೂನಿಯರ್ ಎನ್ ಟಿ ಆರ್ ಜೊತೆಗೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಕನ್ನಡದಲ್ಲಿ ದರ್ಶನ್ ಜೊತೆ ಯಜಮಾನ ಸಿನಿಮಾದಲ್ಲಿಯೂ ಕೂಡ ರಶ್ಮಿಕಾ ನಟಿಸುತ್ತಿದ್ದಾರೆ.  ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧಾರ ಮಾಡಿದ್ದಾರೆ.

Related image

ಹೊಂದಾಣಿಕೆಯಿಲ್ಲ

ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.  ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತುಕತೆಯನ್ನು ನಡೆಸಲಾಗಿದೆ.

ನಟಿ ತನ್ನ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತಾಳೆ ಎಂದು ಅವರು ಮೂಲದಲ್ಲಿ ಸೇರಿಸಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ಕೆಲವು ಅತ್ಯಾಕರ್ಷಕ ಆಫರ್ ಗಳು ಬರುತ್ತಿವೆ ಮತ್ತು ಉದ್ಯಮಗಳೆರಡರಲ್ಲೂ ತನ್ನ ಸ್ಥಾನವನ್ನು ಸ್ಥಾಪಿಸಲು ಬಯಸಿದ್ದಾಳೆ” ಎಂದು ಮೂಲಗಳು ಹೇಳಿವೆ..

 

 

Tags