ಸುದ್ದಿಗಳು

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ಪೋಟೋ ವೈರಲ್

ಬೆಂಗಳೂರು, ಏ.15:

‘ಕಿರಿಕ್ ಪಾರ್ಟಿ’ ಚಿತ್ರಗಳ ನಂತರ ರಕ್ಷಿತ್ ಶೆಟ್ಟಿ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದುವೇ ‘ಅವನೇ ಶ್ರೀಮನ್ನಾನಾರಾಯಣ’ ಹಾಗೂ ‘777 ಚಾರ್ಲಿ’. ಇದೀಗ ಬಹುತೇಕ ಈ ಎರಡು ಚಿತ್ರಗಳ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಾರ್ಲಿ 777 ಚಿತ್ರದ ಪೋಟೋವೊಂದು ವೈರಲ್ ಆಗಿದೆ. ಈಗಾಗಲೇ ಶೇಕಡ 70 ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿದೆ ಚಿತ್ರತಂಡ. ಕಳೆದ ಕೆಲ ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿ ಗಮನಸೆಳೆದಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್ ಮತ್ತು ನಾಯಿಯ ಪೋಟೋ ವೈರಲ್ ಆಗಿದ್ದು, ಚಿತ್ರದ  ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಚಿತ್ರದ ಬಗ್ಗೆ

ಚಿತ್ರದ ಬಗ್ಗೆ ಹೇಳುವುದಾದರೆ, ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಿರಣ್ ರಾಜ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.  ‘ಪರಂವಾ ಸ್ಟುಡಿಯೋ’ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇನ್ನೂ ಉಳಿದಂತೆ  ‘777 ಚಾರ್ಲಿ’ ಸಿನಿಮಾದಲ್ಲಿ ನಾಯಕನ ಪಯಣ ಶ್ವಾನದೊಂದಿಗೆ ಸಾಗುತ್ತದೆ. ಇಡೀ ಚಿತ್ರವು ಕರ್ನಾಟಕದಿಂದ ಕಾಶ್ಮೀರದ ತನಕ ಸಾಗುವ  ಪಯಣದಲ್ಲಿ ನಾಯಕನೊಂದಿಗೆ ಆ ಶ್ವಾನವೂ ಇರಲಿದೆ. ಇದರಿಂದ ಪ್ರಾಣಿ ಹಾಗೂ ಮನುಷ್ಯನ ಗಾಢ ಸಂಬಂಧಧ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದಾಗಿದೆ.

Image may contain: 1 person, smiling, outdoor

‘ದರ್ಬಾರ್’ ಚಿತ್ರದ ಪೋಸ್ಟರ್ ಕಾಪಿ.!!?!!

#balkaninews #sandalwood #kannadamovies #rakshithshetty #rakshithshettymovies #kiranraj

Tags