ಸುದ್ದಿಗಳು

ಹುರಿ ಮೀಸೆಯಲ್ಲಿ ಕಾಣಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!!!

ಮೊನ್ನೆ ರಕ್ಷಿತ್ ಶೆಟ್ಟಿ ಜನ್ಮದಿನಾಚರಣೆಯ ಪ್ರಯುಕ್ತ ಒಂದು ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದರಲ್ಲಿ ಅವರು ಹುರಿಮೀಸೆ ಬಿಟ್ಟುಕೊಂಡ ಫೋಸ್ ನೋಡಿ, ಬಹುಶಃ ಅವರು ಮತ್ತೆ ನಿರ್ದೇಶನದತ್ತ ಹೊರಳಿದ್ದಾರಾ ಎಂಬ ಪ್ರಶ್ನೆಯೂ ಸಹ ಹುಟ್ಟು ಹಾಕಿತು.ಹೌದು, ರಕ್ಷಿತ್ ಶೆಟ್ಟಿ ಹುರಿ ಮೀಸೆಯನ್ನು ಬಿಟ್ಟುಕೊಂಡ ಪೋಸ್ಟರ್ ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದೆ. ಈ ಚಿತ್ರವನ್ನು ಹೇಮಂತ್ ನಿರ್ಮಾಣ ಮಾಡಲಿದ್ದಾರೆ. ಅಂದ ಹಾಗೆ ಇವರು ಈ ಮೊದಲು ರಕ್ಷಿತ್ ನಿರ್ದೆಶನದ ಮೊದಲ ಚಿತ್ರ ‘ಉಳಿದವರು ಕಂಡಂತೆ’ ನಿರ್ಮಾಣ ಮಾಡಿದ್ದವರು.

ಇನ್ನು ಅಭಿಮಾನಿಗಳು ರಕ್ಷಿತ್ ಶೆಟ್ಟಿಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕಾಗಿ ಕಾಯುತ್ತಿದ್ದು, ಇದರೊಂದಿಗೆ ’777 ಚಾರ್ಲಿ’ ಸಹ ಬರಲಿದೆ. ಅಂದ ಹಾಗೆ ಶೆಟ್ರು ‘ಉಳಿದವರು ಕಂಡಂತೆ’ ಚಿತ್ರದಲ್ಲಿ ರೇಬನ್ ಗ್ಲಾಸ್, ಕುರುಚಲು ಗಡ್ಡ ಬಿಟ್ಟು ವಿಶಿಷ್ಟ ಮ್ಯಾನರಿಸಂ ಮೂಲಕ ಗಮನ ಸೆಳೆದಿದ್ದರು.

ಹೀಗಾಗಿ ಪ್ರೇಕ್ಷಕರು ‘ರಿಚ್ಚಿ’ಯ ಹೊಸ ಅವತಾರ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದರು. ಅದಕ್ಕೀಗ ಉತ್ತರವೆಂಬಂತೆ ಈ ಪೋಸ್ಟರ್ ಹೊರ ಬಂದಿದೆ. ಇದರಿಂದಾಗಿ ಮತ್ತೊಮ್ಮೆ ಖಡಕ್ ಪಾತ್ರದೊಂದಿಗೆ ಸಿಂಪಲ್ ಸ್ಟಾರ್ ಮರಳಿದ್ದಾರೆ ಎಂಬ ಸುದ್ದಿ ಹುಟ್ಟುಕೊಂಡಿದೆ. ಒಟ್ಟಿನಲ್ಲಿ ಕಡಲ ಕಿನಾರೆಯ ಮತ್ತೊಂದು ರೌಡಿಸಂ ಅಧ್ಯಾಯವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

‘ಮಾರ್ಲಾಮಿ’ ಚಿತ್ರಕ್ಕೆ ಚಾಲನೆ ನೀಡಿದ ಬಿಗ್ ಬಾಸ್ ಪ್ರಥಮ್

#rakshithshetty, #new, #look, #balkaninews #filmnews, #kannadasuddigalu

Tags