ಸುದ್ದಿಗಳು

‘ನಾರಾಯಣ’ನ ಅವತಾರದ ನಂತರ ‘ಪುಣ್ಯಕೋಟಿ’ಯಾಗಲು ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

‘ಉಳಿದವರು ಕಂಡಂತೆ’ ಚಿತ್ರದ ಬಳಿಕ ಮತ್ತೆ ಆ್ಯಕ್ಷನ್ ಕಟ್ ಹೇಳಲಿರುವ ರಕ್ಷಿತ್ ಶೆಟ್ಟಿ

ಬೆಂಗಳೂರು.ಏ.20: ನಟ ರಕ್ಷಿತ್ ಶೆಟ್ಟಿ ಸದ್ಯ ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘777 ಚಾರ್ಲಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳು ತೆರೆಗೆ ಬರುವ ಮುನ್ನವೇ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಪುನಃ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದು, ‘ಉಳಿದವರು ಕಂಡಂತೆ’ ಚಿತ್ರದಂತೆಯೇ ಇದೊಂದು ಸಹ ಪ್ರಯೋಗಾತ್ಮಕ ಸಿನಿಮಾವಾಗಿದೆ. ಚಿತ್ರಕ್ಕೆ ‘ಪುಣ್ಯಕೋಟಿ’ ಎಂದು ಹೆಸರಿಟ್ಟಿದ್ದು, ಹೆಸರಿಗೆ ತಕ್ಕಂತೆ ಇದೊಂದು ಜಾನಪದ ಕಥೆಯನ್ನು ಒಳಗೊಂಡಿದೆ.

ಈ ಚಿತ್ರದಲ್ಲಿ ರಕ್ಷಿತ್ ಅವರು ಹಸು ಮತ್ತು ಹಸಿದ ಹುಲಿಯನ್ನು ವ್ಯಕ್ತಿಗಳಿಗೆ ಹೋಲಿಸಿ ಕಥೆಯನ್ನು ಮಾಡಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಚಿತ್ರಕ್ಕೆ ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ಹಾಗೂ ಸಿನಿಮೆಟ್ರೋಗ್ರಾಫರ್ ಕರ್ಮ್ ಚಾವ್ಲಾಈ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ‘ಉಳಿದವರು ಕಂಡಂತೆ’. ವಿಭಿನ್ನ ಕತೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಅವರು ಈ ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ಪುಣ್ಯಕೋಟಿ’.

‘ಉಳಿದವರು ಕಂಡಂತೆ’ ನಂತರ ಅಭಿನಯದಲ್ಲಿ ತೊಡಗಿಕೊಂಡಿದ್ದ ಸಿಂಪಲ್ ಸ್ಟಾರ್ ಅನೇಕ ವರ್ಷಗಳ ಬಳಿಕ ‘ಪುಣ್ಯಕೋಟಿ’ ಮತ್ತೆ ನಿರ್ದೇಶನಕ್ಕೆ ಇಳಿದಿರುವುದು ಚಿತ್ರಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇನ್ನು ‘ಕಿರಿಕ್ ಪಾರ್ಟಿ’ ಚಿತ್ರದ ನಂತರ ಸಿಂಪಲ್ ಸ್ಟಾರ್ ಅಭಿನಯದ ಸಿನಿಮಾಗಳು ರಿಲೀಸ್ ಆಗಿಲ್ಲ. ಸುಮಾರು ಮೂರು ವರ್ಷಗಳಿಂದ ರಕ್ಷಿತ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಜೋಡೆತ್ತುಗಳಿಗೆ ಮುಂದಿದೆ ಮಾರಿ ಹಬ್ಬ : ಸಿ.ಎಂ ಕುಮಾರಸ್ವಾಮಿ

#rakshithshetty, #punyakoti, #filmnews, #balkaninews #ulidavarukandanthe, #kannadasuddigalu

Tags