ಸುದ್ದಿಗಳು

ರಾಮ್ ಚರಣ್ ಗಿದೆ ಈ ಹವ್ಯಾಸ…!

ಹೈದ್ರಾಬಾದ್, ಜ.12: ಮೆಘಾ ಕುಟುಂಬದ ಕುಡಿ ರಾಮ್ ಚರಣ್ ತೇಜಾ ಸಿನಿಮಾರಂಗಕ್ಕೆ ಪ್ರವೇಶಿಸುವಾಗ ಅವರ ಬಗ್ಗೆ ಅಷ್ಟೊಂದು ನಿರೀಕ್ಷೆಗಳಿರಲಿಲ್ಲ. ಆರಂಭದ ದಿನಗಳಲ್ಲಿ ಅವರ ನಟನೆಯೂ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ. ಆದರೆ ಜನರ ಟೀಕೆಗಳಿಗೆ ರಾಮ್ ಚರಣ್ ತಲೆಕೆಡಿಸಿಕೊಳ್ಳಲಿಲ್ಲ ಬದಲಿಗೆ ಎಲ್ಲವನ್ನೂ ಚಾಲೆಂಜ್ ಆಗಿ ತೆಗೆದುಕೊಂಡು ಮುನ್ನುಗ್ಗಿದರು. ಇಂದು ತೆಲುಗು ಇಂಡಸ್ಟ್ರೀಯಲ್ಲಿ ರಾಮ್ ಚರಣ್ ಅಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ.

‘ರಂಗಸ್ಥಳಂ’ ಚಿತ್ರದಲ್ಲಿನ ಚಿಟ್ಟಿಬಾಬು ಮಾತ್ರ ಸಿನಿರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದ ಚಿತ್ರ. ಇನ್ನೂ ರಾಮ್ ಚರಣ್ ವೈವಾಹಿಕ ಜೀವನಕ್ಕೆ ಕಾಲಿಡುವ ಮುಂಚೆ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಿದ್ದರಂತೆ. ಆಂಗ್ರಿಯಂಗ್ ಮ್ಯಾನ್ ನಂತೆ ವರ್ತಿಸುತ್ತಿದ್ದ ಇವರು ವಿವಾಹದ ನಂತರ ಸಂಪೂರ್ಣ ಬದಲಾಗಿದ್ದಾರಂತೆ. ಉಪಾಸನ ಇವರ ಜೀವನಕ್ಕೆ ಬಂದ ಬಳಿಕ ಚಿಟ್ಟಿ ಬಾಬು ಬದುಕಲ್ಲಿ ಬಹಳಷ್ಟು ಬದಲಾವಣೆಯಾಗಿದೆಯಂತೆ. ಇವರ ಈ ಬದಲಾವಣೆಯಿಂದ ಇದೀಗ ಸಿನಿಮಾ ಇಂಡಸ್ಟ್ರೀಯಲ್ಲಿ  ಸಾವಿರಾರು ಜನರ ಹೃದಯ ಗೆಲ್ಲುವಲ್ಲಿ ಚೆರ್ರಿ ಯಶಸ್ವಿಯಾಗಿದ್ದಾರೆ. ಇದರ ನಡುವೆ ಯಾರಿಗೂ ಗೊತ್ತಿಲ್ಲದ ಮತ್ತೊಂದು ಸಿಕ್ರೀಟ್ ಇದೀಗ ಹೊರಬಂದಿದ್ದು, ರಾಮ್ ಚರಣ್ ಗಿರುವ ಹವ್ಯಾಸವೊಂದು ಇದೀಗ ಚರ್ಚೆಯಾಗುತ್ತಿದೆ.

ಪಾಕೆಟ್ ಮನಿ ನೀಡುತ್ತಾರಂತೆ ರಾಮ್ ಚರಣ್

ರಾಮ್ ಚರಣ್ ಅವರದ್ದು ವಿಶಾಲ ಹೃದಯವಂತೆ. ತಮ್ಮೊಂದಿಗೆ ಕೆಲಸ ಮಾಡುವವರಿಗೆ ಸಂಬಂಳದ ಜೊತೆಗೆ ಪಾಕೆಟ್ ಮನಿ ನೀಡುವ ಹವ್ಯಾಸವನ್ನು ರಾಮ್ ಚರಣ್ ಹೊಂದಿದ್ದಾರಂತೆ. ಚಿತ್ರೀಕರಣದ ಸೆಟ್ ನಲ್ಲಿ ತಮ್ಮೊಂದಿಗೆ ಕೆಲಸ ಮಾಡುವ ಹುಡುಗರಿಗೆ ರಾಮ್ ಚರಣ್ ಪಾಕೆಟ್ ಮನಿ ನೀಡುತ್ತಾರಂತೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ರಾಮ್ ಚರಣ್, ಹೌದು ಸಿನಿಮಾ ಸೆಟ್ ನಲ್ಲಿ ಕೆಲಸ ಮಾಡುವ ಹುಡುಗರಿಗೆ ಕಡಿಮೆ ವೇತನವಿರುತ್ತದೆ. ಅವರದ್ದು ಅತೀ ಚಿಕ್ಕ ಬದುಕು. ಶೂಟಿಂಗ್ ನಲ್ಲಿ ಅವರು ಸಿಕ್ಕಾಪಟ್ಟೆ ಡೆಡಿಕೇಟೆಡ್ ಆಗಿ ಕೆಲಸ ಮಾಡುತ್ತಾರೆ. ಖುಷಿಯಿಂದ ಕೆಲಸ ಮುಗಿಸುತ್ತಾರೆ. ಹೀಗಾಗಿ ನಾನು ಪಾಕೆಟ್ ಮನಿ ನೀಡುತ್ತೇನೆ ಎಂದಿದ್ದಾರೆ ರಾಮ್ ಚರಣ್. ಅದೇನೆ ಇರಲಿ. ರಾಮ್ ಚರಣ್ ಅವರ ಈ ಒಂದು ಗುಣದಿಂದಾಗಿ, ಸೆಟ್ ನಲ್ಲಿ ರಾಮ್ ಚರಣ್ ಜೊತೆಗೆ ಕೆಲಸ ಮಾಡಲು ಹುಡುಗರು ನಾ ಮುಂದು ತಾ ಮುಂದು ಎಂದು ಮುಂದೆ ಬರುತ್ತಾರಂತೆ.

#ramcharan #ramcharanmovies

Tags