ಸುದ್ದಿಗಳು

ದಯವಿಟ್ಟು ಇದನ್ನು ಗೂಗಲ್ ಮಾಡಬೇಡಿ ಅಂದ್ರು ಈ ನಟ

ಹೈದ್ರಾಬಾದ್, ಫೆ.08:

ಪೂರಿ ಜಗನ್ನಾಥ್ ಒಬ್ಬ ಫನ್ ಲವ್ವಿಂಗ್ ವ್ಯಕ್ತಿ. ಅವರು ಎಲ್ಲೇ ಹೋಗಲಿ ಎಲ್ಲೇ ಇರಲಿ ಅವರ ಸುತ್ತಮುತ್ತ ಇರೋರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ನಿರ್ದೇಶಕ ಎಂಬ ಹಮ್ಮುಬಿಮ್ಮು ಬಿಟ್ಟು ಸಾಮಾನ್ಯನಂತೆ ಇರುವ ಇವರು ತಮ್ಮ ಚಿತ್ರತಂಡದೊಂದಿಗೆ ಆತ್ಮೀಯವಾಗಿ ಇರುತ್ತಾರೆ. ಅದೆಷ್ಟೋ ಜನ ಪೂರಿ ಜೊತೆ ಕೆಲಸ ಮಾಡಲು ಉತ್ಸುಕರಾಗಿ ನಾ ಮುಂದು ತಾ ಮುಂದು ಎನ್ನುತ್ತಾರೆ.

ಅವರೊಂದಿಗೆ ಕೆಲಸ ಮಾಡುವುದು ಪಿಕ್  ನಿಕ್ ಗೆ ಹೋಗುವ ಅನುಭವ ನೀಡುತ್ತದೆ ಎನ್ನುತ್ತಾರೆ ಹಲವು ಮಂದಿ. ಚಿತ್ರೀಕರಣದ ಸ್ಥಳದಲ್ಲಿ ಪೂರಿ ಜಗನ್ನಾಥ್ ಸಿಕ್ಕಾಪಟ್ಟೆ ಕಂಫರ್ಟೆಬಲ್ ವಾತಾವರಣವನ್ನು ನಿರ್ಮಿಸುತ್ತಾರೆ ಎಂಬುದು ಇದಕ್ಕೆ ಕಾರಣ. ಅವರೊಂದಿಗೆ ಕೆಲಸ ಮಾಡಿದ ಅದೆಷ್ಟೋ ಮಂದಿ ನಟರು, ಪೂರಿ ಜಗನ್ನಾಥ್ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡಿ ತಮ್ಮ ಖುಷಿ ವ್ಯಕ್ತಪಡಿಸಿದ್ದನ್ನು ನಾವು ಈಗಾಗಲೇ ಹಲವು ಬಾರಿ ನೋಡಿದ್ದೇವೆ. ಇದೀಗ ನಟ ರಾಮ್ ನೀಡಿರುವ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಗೂಗಲ್ ಆಗುತ್ತಿದೆಯಂತೆ.

ವಿಶ್ವದ ಅತ್ಯಂತ ದುಬಾರಿ ಕಾಫಿ

ಇತ್ತೀಚೆಗೆ ನಟ ರಾಮ್ , ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜಗನ್ನಾಥ್ ಅವರೊಂದಿಗೆ ಕಳೆದ ಅತ್ಯಂತ ಸಂತಸದ ಸಂದರ್ಭವನ್ನು ದುಬಾರಿ ಗಿಪ್ಟ್ ಮೂಲಕ ಹಂಚಿಕೊಂಡಿದ್ದಾರೆ ರಾಮ್. ಅಂದಹಾಗೆ ರಾಮ್ ನಿರ್ದೇಶಕರಿಗೆ ವಿಶ್ವದ ಅತ್ಯಂತ ದುಬಾರಿ ಕಾಫಿ ಪ್ಯಾಕ್ ಅನ್ನು ಗಿಪ್ಟ್ ಮಾಡಿದ್ದಾರಂತೆ. ರಾಮ್ ನೀಡಿದ ಗಿಪ್ಟ್ ಬಗ್ಗೆ ಹಂಚಿಕೊಂಡಿರುವ ಪೂರಿ, Mera #ismartshankar , @Ramsayz gifted me the most expensive coffee in the world KOPI LUWAK. Pl google about it, u ll go mad. I’m sipping it now.”

ಈ ರೀತಿ ಟ್ಟೀಟ್ ಮಾಡಿದ್ದಾರೆ. ನನ್ನ ಈಸ್ಮಾರ್ಟ್ ಶಂಕರ್, ವಿಶ್ವದ ಅತೀ ದುಬಾರಿ ಕಾಫಿ ಕೊಪಿ ಲುವಾಕ್ ಅನ್ನು ರಾಮ್ ನನಗೆ ಉಡುಗೊರೆಯಾಗಿ ನೀಡಿದ್ದು, ದಯವಿಟ್ಟು ಇದರ ಬಗ್ಗೆ ತಿಳಿಯಲು ಗೂಗಲ್ ಮಾಡಿ, ನೀವು ಹುಚ್ಚರಾಗುತ್ತೀರಾ, ನಾನು ಸದ್ಯಕ್ಕೆ ಅದರ ಸವಿ ಸವಿಯುತ್ತಿದ್ದೇನೆ ಎಂದವರು ಹೇಳಿದ್ದಾರೆ. ನೆಟ್ಟಿಗರು ಈ ಕಾಫಿಯ ಕುರಿತಂತೆ ಗೂಗಲ್ ಮಾಡುತ್ತಿದ್ದರೆ, ನಟ ರಾಮ್ , ದಯವಿಟ್ಟು ಗೂಗಲ್ ಮಾಡಬೇಡಿ ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ. ಇನ್ನೂ ಚಿತ್ರದ ಸಹನಿರ್ಮಾಪಕಿ ಚರ್ಮೆ ಕೌರ್, ಬೇಸರ ವ್ಯಕ್ತಪಡಿಸಿ ನನ್ನನ್ನು ಕಾಫಿಗೆ ಆಫರ್ ಮಾಡಿಲ್ಲ ಎಂದಿದ್ದಾರೆ. ಈ ಕುರಿತಂತೆ ಅವರು Shit shit shit.”ಎಂದು ಟ್ವೀಟ್ ಮಾಡಿದ್ದಾರೆ.

ನಟಿ ತಾಪ್ಸಿ ಕೊಟ್ಟ ಉತ್ತರಕ್ಕೆ ತಲೆಕೆರ್ಕೊಂಡು, ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ರು ಜನ!!

#tollywood #purijagan #purijagantwitter #purijaganandramcharan #ramcharanmovies #balkaninews

Tags