ಸುದ್ದಿಗಳು

ಜಪಾನ್ ನಲ್ಲೂ ಮಗಧೀರ.. ಚಿತ್ರ ಪ್ರೇಮಿಗಳಿಗೆ ನನ್ನ ಧನ್ಯವಾದ ಎಂದ ರಾಮ್ ಚರಣ್

ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ನಾನು ಅಭಾರಿ

ಹೈದರಾಬಾದ್,ಸೆ.11: ನಿರ್ದೇಶಕ  ರಾಜಮೌಳಿ ಬತ್ತಳಿಕೆಯಲ್ಲಿ ಮೂಡಿಬಂದ ‘ಮಗಧೀರ’ ಚಿತ್ರದಲ್ಲಿ ರಾಮ್ ಚರಣ್ ಹೀರೋ  ಆಗಿ ನಟಿಸಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದ್ದೇ ತಡ ಈ  ಸಿನಿಮಾ ಅವರ  ಕೇರಿಯರ್ ಗೆ ಬಿಗ್ ಬ್ರೇಕ್ ಕೊಟ್ಟಿತ್ತು. ರಾಜ್ ಮೌಳಿ ತಂದೆ ವಿಜಯೇಂದ್ರ ಪ್ರಸಾದ್  ‘ಮಗಧೀರ’ ಚಿತ್ರಕ್ಕೆ ಕಥೆ ಬರೆದಿದ್ದರು. ಇನ್ನು  350 ಮಿಲಿಯನ್ ಹೈ ಬಜೆಟ್ ನಲ್ಲಿ ನಿರ್ಮಣವಾದ ಈ ಚಿತ್ರ 1.5 ಬಿಲಿಯನ್ ಕಲೆಕ್ಷನ್ ಮಾಡಿ, ಟಾಲಿವುಡ್ ಇಂಡಸ್ಟ್ರಿ  ಹಿಟ್ ಸಿನಿಮಾಗಳಲ್ಲಿ ಇದು ಒಂದಾಗಿದೆ. ಸಿನಿಮಾ ಎಷ್ಟೇ ಹಳೆಯದಾಗಲಿ ಮಗಧೀರ ಸಿನಿಮಾ ಮಾತ್ರ ಎಲ್ಲರ ಅಚ್ಚುಮೆಚ್ಚಿನ ಸಿನಿಮಾ.. 2009 ರಲ್ಲಿ ಬಿಡುಗಡೆಯಾದ ತೆಲುಗಿನ ಮಗಧೀರ ಸಿನಿಮಾ ಇತ್ತೀಚೆಗೆ ಜಪಾನಿನಲ್ಲಿ ‘ಮಗಧೀರ’ ಸಿನಿಮಾ ಜಪಾನಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು.

ಜಪಾನಿನಲ್ಲೂ ಮಗಧೀರ ಹವಾ..

‘ಮಗಧೀರ’ ಬಿಡುಗಡೆಯಾದಾಗ ಜಪಾನ್ ಸಬ್​​ಟೈಟಲ್​​ನೊಂದಿಗೆ ಬಿಡುಗಡೆಯಾಗಿತ್ತು. ಆದರೆ ಈಗ ಜಪಾನ್ ಭಾಷೆಯಲ್ಲೇ ಡಬ್ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಿದ್ದು ಪ್ರೇಕ್ಷಕರಿಂದ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗಿದೆ. 10 ದಿನಗಳಲ್ಲೇ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಕೂಡಾ ಜಪಾನಿನಲ್ಲಿ ಈ ಹಿಂದೆ ಬಿಡುಗಡೆಯಾಗಿತ್ತು.

ಜಪಾನಿನಲ್ಲಿ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ಮನ್ನಣೆ ನೋಡಿ ರಾಮ್​ ಚರಣ್ ತೇಜ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ‘ಜಪಾನ್ ಚಿತ್ರ ಪ್ರೇಮಿಗಳಿಗೆ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ನಾನು ಅಭಾರಿ. ಮರೆಯಲಾರದ ಇಂತದೊಂದು ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ರಾಜಮೌಳಿ ಅವರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ. ಸಿನಿಮಾ ಬಿಡುಗಡೆಯಾಗಿ 10 ವರ್ಷಗಳು ತುಂಬುತ್ತಿವೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ರಾಮ್​ಚರಣ್ ತಮ್ಮ  ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ.

Tags