ಸುದ್ದಿಗಳು

ಟೀಕೆಗಳ ನಡುವೆಯೂ ಜಾಲಿ ಮೂಡ್ ನಲ್ಲಿರುವ ಚೆರ್ರಿ

ಹೈದ್ರಾಬಾದ್, ಜ.14: ನಟ ರಾಮ್ ಚರಣ್ ತೇಜಾ ಅವರು ಪ್ರತಿಭಾವಂತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅಭಿನಯದ ‘ವಿನಯ ವಿಧೇಯ ರಾಮ’ ಶೇಕಡಾ 100 ಕ್ಕೆ 100ರಷ್ಟು ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ ಹೆಚ್ಚಾಗಿದ್ದು. ಅದರಲ್ಲಿ ‘ರಂಗಸ್ಥಳಂ’ ಚಿತ್ರ ನೋಡಿದ ಬಳಿಕ, ರಾಮ್ ಚರಣ್ ಅಭಿಮಾನಿಗಳಂತೂ ವಿವಿಆರ್ ಚಿತ್ರ ಬಿಡುಗಡೆಗೆ ಒಂಟಿಕಾಲಲ್ಲಿ ನಿಂತಿದ್ದರು. ನಮ್ಮ ನೆಚ್ಚಿನ ಹಿರೋನ ತೆರೆ ಮೇಲೆ ನೋಡುವ ಹಂಬಲದಲ್ಲಿದ್ದ ಪ್ರೇಕ್ಷಕ, ಚಿತ್ರ ಬಿಡುಗಡೆಯಾಗಿ ಥಿಯೇಟರ್ ಗೆ ಹೋಗಿವಾಪಾಸ್ ಬರುತ್ತಿದ್ದಂತೆ ಮುಖದ ತುಂಬೆಲ್ಲಾ ನಿರ್ದೇಶಕರ ಮೇಲೆ ಕೋಪ.

ಚಿತ್ರದಲ್ಲಿ ಕಥೆಯೂ ಉತ್ತಮವಾಗಿಲ್ಲ. ರಾಮ್ ಚರಣ್ ರಂತಹ ಹಿರೋನ ಯಾವ ರೀತಿ ಬಳಸಬಹುದಾಗಿತ್ತು. ಇಷ್ಟಾದರೂ ಇಲ್ಲಿ ನಟನೆಗೆ ಸ್ಕೋಪ್ ಇಲ್ಲ. ಇಂತಹ ಚಿತ್ರವನ್ನು ಯಾಕಪ್ಪಾ ರಾಮ್ ಚರಣ್ ಒಪ್ಪಿಕೊಂಡರು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ನಿರ್ದೇಶಕ ಬೋಯಪತಿ ಅವರು ಬಳಸಿರುವ ವಿಜ್ಞಾನಕ್ಕೆ ವಿರುದ್ಧವಾದ, ವಿಜ್ಞಾನದಲ್ಲೇ ಇರದ ಕೆಲವೊಂದು ಸ್ಟಂಟ್ ಗಳನ್ನು ಬಳಸಿರುವುದಕ್ಕೆ ಆಕ್ರೋಶಕೊಂಡು, ಮೆಮ್ಸ್ ಗಳ ಮೂಲಕ ಗೇಲಿ ಮಾಡುತ್ತಿದ್ದಾರೆ. ಇದೇನೆ ಇರಲಿ ಭಾರತದಾದ್ಯಂತ ವಿವಿಆರ್ ಚಿತ್ರಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ರಾಮ್ ಚರಣ್ ತೇಜಾ ಮಾತ್ರ ಮಂಜಿನ ನಡುವೆ ಮಜಾ ಮಾಡುತ್ತಿದ್ದಾರೆ.

ಟೀಕೆಗಳಿಂದ ದೂರ ಉಳಿದ ಬ್ರೂಸ್ಲಿ

ಅಂದಹಾಗೆ ರಾಮ್ ಚರಣ್ ತೇಜಾ ಸದ್ಯಕ್ಕೆ ಮಂಜಿನ ನಡುವೆ ಗೆಳೆಯರೊಂದಿಗೆ ಮಜಾ ಮಾಡುತ್ತಿದ್ದಾರೆ. ಚಿತ್ರ ಸೋತು ಸುಣ್ಣವಾಗಿ, ಟ್ರೋಲ್ ಗಳ ಮೇಲೆ ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ,. ಇದರಿಂದ ದೂರವೇ ಉಳಿದಿರುವ ನಟ ,  ತಮ್ಮ ಗೆಳೆಯ ಅಖಿಲ್ ಅಕ್ಕಿನೇನಿ ಹಾಗೂ ಇನ್ನಿತರರೊಂದಿಗೆ  ಸ್ನೋ ಮೌಂಟೇನ್ ನಲ್ಲಿ ಮಜಾ ಮಾಡುತ್ತಿದ್ದಾರೆ. ಅಂದಹಾಗೆ ರಾಮ್ ಚರಣ್ ಅವರ ಪತ್ನಿ ಉಪಾಸನ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿವಿಆರ್ ಚಿತ್ರದ ಟ್ರೋಲ್ ನಿಂದ ತಲೆಬಿಸಿಮಾಡಿಕೊಂಡಿದ್ದ ರಾಮ್ ಚರಣ್ ಇದೀಗ ಸ್ನೋ ಸಿಟಿಯಲ್ಲಿ ತಂಪು ಮಾಡಿಕೊಳ್ಳಲು ಹೋಗಿರಬಹುದು ಎನ್ನುತ್ತಿದ್ದಾರೆ ಕೆಲವರು ನೆಟ್ಟಿಗರು.

 

View this post on Instagram

 

BOYS WILL BE BOYS !???? #ramcharan @akkineniakhil Hope they aren’t practising any action scenes there ????

A post shared by Upasana Kamineni Konidela (@upasanakaminenikonidela) on

#ramcharan #upasanakaminenikonidela #ramcharanmovies #ramcharanvinayavidheyarama #balkaninews

Tags