ಸುದ್ದಿಗಳು

ವಿವಿಆರ್ ಎಫೆಕ್ಟ್: ಭಯಗೊಂಡಿದ್ದಾರಂತೆ ನಟ ಮಹೇಶ್ ಬಾಬು..!

ಹೈದ್ರಾಬಾದ್, ಜ.14: ಬೋಯಪತಿ ಶ್ರೀನು ಅವರ ನಿರ್ದೇಶನದ ಬಹುನಿರೀಕ್ಷಿತ , ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿರುವ ‘ವಿನಯ ವಿಧೇಯ ರಾಮ’ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೊಯಪತಿ ಹಾಗೂ ನಟ ರಾಮ್ ಚರಣ್ ಮೇಲಿಟ್ಟಿದ್ದ ಭರವಸೆ ಹುಸಿಯಾಗಿದೆ ಎನ್ನುತ್ತಿದ್ದಾರೆ ಚಿತ್ರ ನೋಡಿದ ಪ್ರೇಕ್ಷಕರು. ಅಂದಹಾಗೆ ವರ್ಷದಿಂದ ಭಾರಿ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರದಲ್ಲಿ ಹುರುಳೇ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಚಿತ್ರದಲ್ಲಿ ನಟನೆಗೆ ಸ್ಕೋಪ್ ಇಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಚಿತ್ರಕತೆ ಉತ್ತಮವಾಗಿಲ್ಲ ಎನ್ನುತ್ತಿದ್ದಾರೆ.

ನಿರ್ದೇಶಕರು ಎಲ್ಲೋ ಏನೋ ಎಡವಿದ್ದಾರೆ ಎಂಬುದು ಚಿತ್ರನೋಡಿದ ಎಲ್ಲರಿಗೂ ಸಹಜವಾಗಿಯೇ ತಿಳಿದರೆ, ರಾಮ್ ಚರಣ್ ತೇಜಾ ಇಂತಹ ಚಿತ್ರಕಥೆಯನ್ನು ಯಾಕೆ ಓಕೆ ಮಾಡಿದರೂ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಅದೇನೆ ಇರಲಿ ಚಿತ್ರ ಬಿಡುಗಡೆಯಾಗಿದ್ದು ಆಯ್ತು ಬಾಕ್ಸ್ ಅಫೀಸ್ ನಲ್ಲಿ ಮಕಾಡೆ ಮಲಗುವ ಎಲ್ಲಾ ಲಕ್ಷಣಗಳು ಕಂಡಿದ್ದು ಆಯ್ತು. ಈ ನಡುವೆ ಬೋಯಪತಿ ಅವರ ಮುಂದಿನ ಚಿತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದ್ದು, ಇದೀಗ ಮಹೇಶ್ ಬಾಬುಗೆ ಬೊಯಪತಿ ಜೊತೆಗೆ ಕೆಲಸ ಮಾಡಲು ಭಯಶುರುವಾಗಿದೆಯಂತೆ.ಮಹೇಶ್ ಅಭಿಮಾನಿಗಳಲ್ಲಿ ಆತಂಕ

ಬೋಯಪತಿ  ಶ್ರೀನು ಅವರು ಈಗಾಗಲೇ ಚಿತ್ರಕತೆಯೊಂದನ್ನು ಸಿದ್ದಪಡಿಸಿಕೊಂಡು ಅದನ್ನು ಮೆಘಾಸ್ಟಾರ್ ಚಿರಂಜೀವಿ ಅವರಿಗೆ ವಿವರಿಸಲು ಸಿದ್ದರಾಗಿದ್ದಾರಂತೆ. ಆದರೆ ಚಿರಂಜೀವಿ ಸದ್ಯಕ್ಕೆ ಸೈರಾ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದಾದ  ಬಳಿಕ ಕೊರಟಾಲ ಶಿವ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರ ಪ್ರಾಜೆಕ್ಟ್ ಲೈನ್ ಅಪ್ ಆಗಿರುವುದರಿಂದ ಸದ್ಯಕ್ಕೆ ಬೋಯಪತಿಗೆ ಕಾಲ್ ಶೀಟ್ ಸಿಗುವುದು ಕಷ್ಟವಾಗಿದೆ. ಹೀಗಾಗಿ ಬೇರೆ ದಾರಿಕಾಣದೆ ನಿರ್ದೇಶಕರು ಮಹೇಶ್ ಬಾಬು ಅವರ ಮನೆಬಾಗಿಲಿಗೆ ಎಡತಾಗಿದ್ದಾರಂತೆ. ಆದರೆ ಬೊಯಪತಿ ಅವರೊಂದಿಗೆ ಮಹೇಶ್ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಮಹೇಶ್ ಅಭಿಮಾನಿಗಳ ಆತಂಕಕಕ್ಕೆ ಕಾರಣವಾಗಿದೆಯಂತೆ.

ಕೌಟುಂಬಿಕ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಗಮನ ಸೆಳೆಯುವ ಮಹೇಶ್ ಬಾಬು ವಿವಿಆರ್ ನಂತಹ ಆಕ್ಷನ್ ಚಿತ್ರಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ ಎಂಬುದು ನಮೆಗೆಲ್ಲ ತಿಳಿದ ವಿಚಾರವೇ. ಇಷ್ಟರ ನಡುವೆಯೂ ಮಹೇಶ್ ಬಾಬು ಒಂದು ವೇಳೆ ಬೊಯಪತಿ ಶ್ರೀನು ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಎಂಬ ಆತಂಕ ಅಭಿಮಾನಿಗಳಿಗಿದೆಯಂತೆ. ಅದೇನೆ ಇರಲಿ ಸದ್ಯಕ್ಕೆ ಮಹೇಶ್ ಬಾಬು ಅವರು ಮಹರ್ಷಿ ಚಿತ್ರದಲ್ಲಿ ಬ್ಯುಸಿಯಾಗಿದ್ದು ಚಿತ್ರ ಸೂಪರ್ ಹಿಟ್ ಆಗುವ ಲಕ್ಷಣಗಳು ಗೋಚರಿಸುತ್ತಿದೆ.

#ramcharan #boyapathisrinu #tollywood #ramcharanandmaheshbabu #balkaninews

Tags