ಸುದ್ದಿಗಳು

ಚರಣ್ ರನ್ನು ಪ್ರಶ್ನಿಸಿದ್ರಾ ಚಿರು?

ಹೈದರಾಬಾದ್,ಫೆ.10: ಸಾಮಾನ್ಯವಾಗಿ ಯಶಸ್ಸು ಸಿಕ್ಕಿದರೆ ಅದರ ಫುಲ್ ಕ್ರಿಡಿಟ್ ತಮಗೆ ತೆಗೆದುಕೊಳ್ಳುವ ಜನ, ಸೋಲುಂಟಾಗ ಬೇರೆಯವರೆಡೆಗೆ ಕೈ ತೋರಿಸುವುದು ಸಹಜ. ಇದು ಹೆಚ್ಚಾಗಿ ಸಿನಿಮಾ ಇಂಡಸ್ಟ್ರೀಯಲ್ಲಿ ಕಾಣಸಿಗುವ ವಿಚಾರ. ಇದೀಗ ಬೋಯಪತಿ ಶ್ರೀನು ಅವರ ವಿನಯ ವಿಧೇಯ ರಾಮ ಚಿತ್ರದ ಸೋಲಿನ ನಂತರ, ರಾಮ್ ಚರಣ್ ಅಭಿಮಾನಿಗಳು ನಿರಾಸರಾದರೆ, ಚಿತ್ರದ ಸೋಲು ಅಚ್ಚರಿಯನ್ನುಂಟುಮಾಡಿದೆ. ಈ ನಡುವೆ ರಾಮ್ ಚರಣ್ ಚಿತ್ರದ ವಿತರಕರಿಗೆ ಉಂಟಾಗಿರುವ ನಷ್ಟಭರಿಸಲು ಮುಂದಾಗಿದ್ದು, ತನ್ನ ಕೈಯಿಂದಲೇ 5 ಕೋಟಿರೂಪಾಯಿಯನ್ನು ರಾಮ್ ಚರಣ್ ನೀಡಿದ್ದಾರಂತೆ.ಉಳಿದ 10 ಕೋಟಿ ರೂಪಾಯಿಯನ್ನು ನಿರ್ಮಾಪಕ ಡಿವಿವಿ ಧಾನಯ್ಯ ಮತ್ತು  ನಿರ್ದೇಶಕ ಬೋಯಪತಿ ಶ್ರೀನು ನೀಡಬೇಕಾಗಿದೆ.

Related image

 ಸಿನಿಮಾ ಬ್ಯುಸಿನೆಸ್ ನಲ್ಲಿ ಮೂಗು ತೂರಿಸದಂತೆ ತಂದೆಯ ಸೂಚನೆ!

ಚಿತ್ರದ ಸೋಲಿನ ಬಗ್ಗೆ ತಲೆಕೆಡಿಸಿಕೊಂಡಿರುವ ರಾಮ್ ಚರಣ್, ವಿತರಕರಿಗೆ ಆಗಿರುವ ನಷ್ಟವನ್ನು ಭರಿಸಲು ಮುಂದಾಗಿರುವುದು ಸುದ್ದಿಯಾಗುತ್ತಿದ್ದಂತೆ. ಇದೀಗ ಅವರ ತಂದೆ ಚಿರಂಜೀವಿ ಮಗನಿಗೆ ಬುದ್ದಿ ಹೇಳಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಚಿತ್ರದ ಬ್ಯುಸಿನೆಸ್ ನಲ್ಲಿ ಯಾಕೆ ಸುಖಾಸುಮ್ಮನೆ ಮೂಗು ತೂರಿಸುತ್ತಿದ್ದೀಯಾ ಎಂಬ ಪ್ರಶ್ನೆಯನ್ನು ತಂದೆ ಮಗನಿಗೆ ಕೇಳಿದ್ದಾರೆ ಎನ್ನಲಾಗಿದೆ. ವಿತರಕರ ಪೈಕಿ ಕೆಲವರು ರಾಮ್ ಚರಣ್ ಅವರ ಗೆಳೆಯರೇ ಆಗಿದ್ದು ಹೀಗಾಗಿ ನಷ್ಟಭರಿಸಲು ರಾಮ್ ಚರಣ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರಾಮ್ ಚರಣ್ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ 5 ಕೋಟಿರೂಪಾಯಿ ನಷ್ಟ ಭರಿಸುವಂತೆ ಸೂಚಿಸಿದ್ದಾರೆ. ಆದರೆ ನಿರ್ದೇಶಕ ಬೋಯಪತಿ ಮಾತ್ರ ತಾನು ನಷ್ಟಭರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಇದು ಮೇಘಾಕುಟುಂಬದ ಆಕ್ರೋಶಕ್ಕೂ ಕಾರಣವಾಗಿದೆ. ಈ ನಡುವೆ ಬೋಯಪತಿ ಅವರಿಗೆ ಮನವರಿಕೆ ಮಾಡಿಕೊಡುವಂತೆ ತನ್ನ ಅಂಕಲ್ ಅಲ್ಲೂ ಅರವಿಂದ್ ಬಳಿ ರಾಮ ಚರಣ್ ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸರೈನಾಡು ಚಿತ್ರ ಗೆದ್ದ ಬಳಿಕ ಇದೀಗ ಅಲ್ಲೂ ಅರವಿಂದ್ ಹಾಗೂ ಬೋಯಪತಿ ಮತ್ತೊಂದು ಚಿತ್ರಕ್ಕೆ ಸಹಿಹಾಕಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡಿರುವ ಚೆರಿ, ಬೋಯಪತಿ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲು ಅಲ್ಲೂ ಅರವಿಂದ್ ಮೊರೆ ಹೋಗಿದ್ದಾರಂತೆ. ಆದರೆ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಚಿರಂಜೀವಿ, ಸಿನಿಮಾ ವ್ಯವಹಾರದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದೀಯಾ ಎಂದು ಪ್ರಶ್ನೆಸಿದ್ದಾರೆ ಎನ್ನಲಾಗುತ್ತಿದೆ.

Tags