ಸುದ್ದಿಗಳು

ಐ ಯಾಮ್ ಜಸ್ಟ್ ಸ್ವೀಟ್ 54 ಎನ್ನುತ್ತಿದ್ದಾರೆ ‘ಎವರ್ ಗ್ರೀನ್ ಹೀರೋ’

ಎವರ್ ಗ್ರೀನ್ ಹೀರೋ’ ರಮೇಶ್ ಅರವಿಂದ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ನಿರ್ದೇಶಕ, ಉತ್ತಮ ನಿರೂಪಕರಾದ ಚಂದನವನದ ‘ಎವರ್ ​ಗ್ರೀನ್ ಹೀರೋ’ ರಮೇಶ್ ಅರವಿಂದ್​​​​ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಮೇಶ್ ಅವರು ಇಂದು 54ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

Image result for ramesh aravind

ಎವರ್​ಗ್ರೀನ್ ಹೀರೋ

ಸೆಪ್ಟೆಂಬರ್ 10 1964 ರಂದು ಗೋವಿಂದಾಚಾರಿ ಅರವಿಂದ್ ಹಾಗೂ ಸರೋಜಾ ಅರವಿಂದ್​​​​ ಪುತ್ರನಾಗಿ ತಮಿಳುನಾಡಿನ ಕುಂಭಕೋಣಂನಲ್ಲಿ ರಮೇಶ್​​​ ಜನಿಸಿದರು.  ಬೆಂಗಳೂರು ಯೂನಿವರ್ಸಿಟಿಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ರಮೇಶ್ ಅರವಿಂದ್ ಅವರನ್ನು 1986 ರಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ‘ಸುಂದರ ಸ್ವಪ್ನಗಳು’ ಸಿನಿಮಾ ಮೂಲಕ ಸಿನಿರಂಗಕ್ಕೆ ಪರಿಚಯಿಸಿದರು. ಈ ಸಿನಿಮಾವನ್ನು ಸ್ವತಃ ಬಾಲಚಂದರ್ ಅವರೇ ನಿರ್ದೇಶಿಸಿದ್ದರು. ಇವರು ಕೆಲವು ತೆಲುಗು, ಮಳಯಾಳಂ ಮತ್ತು ಹಿಂದಿ ಚಿತ್ರಗಳ ಸಹಿತ ಹೆಚ್ಚಿನದ್ದಾಗಿ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಉಳ್ಟಾ ಪಳ್ಟಾ, ಹೂಮಳೆ ಮತ್ತು ಅಮೃತವರ್ಶಿಣಿ ಚಿತ್ರಗಳಲ್ಲಿನ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ.
Related image

ಅತ್ಯುತ್ತಮ ನಟ

ಇವರು ಅತ್ಯುತ್ತಮ ನಟ ಪಾತ್ರಕ್ಕೆ ೨ ಫಿಲ್ಮ್ ಫೇರ್, ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಆಯ್ಕೆಯಾಗಿ ಮತ್ತು ನೇಮಕಗೊಂಡಿದ್ದಾರೆ.

‘ಕನ್ನಡ ಕೋಟ್ಯಾಧಿಪತಿ’, ‘ವೀಕೆಂಡ್ ವಿಥ್ ರಮೇಶ್’ ರಿಯಾಲಿಟಿ ಶೋ ಕಾರ್ಯಕ್ರಮ ನಡಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ನಟಿಸಿ ತಮ್ಮ ಅಭೂತಪೂರ್ವ ಅಭಿನಯದಿಂದ ಮತ್ತೊಮ್ಮೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಅವರು ‘ಇನ್ಸ್ ಪೆಕ್ಟರ್’ ವಿಕ್ರಮ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

Image result for ramesh aravind

Tags