ಸುದ್ದಿಗಳು

ದಿವ್ಯಾಂಗ ಮಕ್ಕಳ ಜೊತೆ ಅರವಿಂದ್

ನಿಜವಾದ ಹೀರೋ ಗಳು ನೀವೇ

ಬೆಂಗಳೂರು,ಅ.11: ನಟ ರಮೇಶ್ ಅರವಿಂದ ಸದ್ಯ ದಿವ್ಯಾಂಗ ಮಕ್ಕಳ ಜೊತೆ ಕೊಂಚ ಸಮಯ ಕಳೆದಿದ್ದಾರೆ. ಹೌದು, ಯಾವಾಗಲೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕವೇ ಸಾಕಷ್ಟು ಹೆಸರು ಮಾಡಿದ ನಟ ರಮೇಶ ಅರವಿಂದ್ ಇಂದಿಗೂ ಹಸನ್ಮುಕಿ ನಾಯಕ ಅನ್ನೋದು ಗೊತ್ತಿರುವ ವಿಚಾರ. ಈಗಾಗಲೇ ಸದಾ ತಮ್ಮ ನಗುವಿನ ಮೂಲಕವೇ ಸೆಳೆಯುವ ಈ ನಟ ಇದೀಗ ದಿವ್ಯಾಂಗ ಮಕ್ಕಳ ಜೊತೆ ಯಲ್ಲಿ ಕಾಲ ಕಳೆದಿದ್ದಾರೆ.

ಟ್ರಸ್ಟ್ ಗೆ ರಮೇಶ್ ಭೇಟಿ

ಸಿದ್ದಾಪುರದ ಹಾಳದಕಟ್ಟದಲ್ಲಿರುವ ಮುರುಘ ರಾಜೇಂದ್ರ ದಿವ್ಯಾಂಗರ ಶಾಲೆಗೆ ಭೇಟಿ ನೀಡಿದ್ದ ರಮೇಶ್ ಅರವಿಂದ್ ಆಶಾಕಿರಣ ಟ್ರಸ್ಟ್ ಒಂದರ ೨೫ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಟ್ರಸ್ಟ್ ದಿವ್ಯಾಂಗ ಮಕ್ಕಳ ಟ್ರಸ್ಟ್ ಆಗಿದ್ದು, ಕಳೆದ ೨೫ ವರ್ಷಗಳ ಕಾಲ ದಿವ್ಯಾಂಗ ಮಕ್ಕಳನ್ನು ಸಲಹುತ್ತಿದೆ. ಈ ಟ್ರಸ್ಟ್ ಇದೀಗ ೨೫ ವರ್ಷ ಪೂರೈಸಿದ್ದು, ಇದಕ್ಕೆ ನಟ ರಮೇಶ್ ಅವರಿಂದ್ ಭಾಗಿಯಾಗಿದ್ದರು.

ನಿಜವಾದ ಹೀರೋ ಗಳು ನೀವೇ

ಅಲ್ಲಿನ ಸನ್ಮಾನ ಸ್ವೀಕರಿಸಿ ಮಾತನಾಡಿರುವ ರಮೇಶ್, ನಿಜವಾದ ಹೀರೋಗಳು ಅಂದರೆ ನೀವು, ನಿಮ್ಮದೇ ಆದ ಲೋಕದಲ್ಲಿ ನೀವು ಸಾಧನೆ ಮಾಡುತ್ತಿರಾ. ಇಂದಿನ ದಿನಗಳಲ್ಲಿ ಸಿನಿಮಾ ಯಶಸ್ವಿಯಾಗೋದೆ ಒಂದು ದೊಡ್ಡ ಸಾಹಸ. ಅದರಲ್ಲಿ ಈ ಟ್ರಸ್ಟ್‌ ೨೫ ವರ್ಷ ಪೂರೈಸಿದೆ ಅಂದರೆ ಅದು ದೊಡ್ಡ ಸಾಧನೆ. ನಿಜವಾದ ಹೀರೋಗಳು ನೀವೆ ಅಂತಾ ಹಾಡಿ ಹೊಗಳಿದ್ದಾರೆ.

 

View this post on Instagram

 

And this visually impaired boy taught me braille!!

A post shared by Ramesh Aravind (@ramesh.aravind.official) on

Tags