ಸುದ್ದಿಗಳು

ರಮೇಶ್ ಅರವಿಂದ್ ಮನೆಯಲ್ಲಿ ದೀಪಾವಳಿ ಹಬ್ಬ ಹೇಗಿತ್ತು ಗೊತ್ತೇ?

ನಿಮ್ಮ ಜೀವನದಲ್ಲಿ ಬೆಳಕು ಹೀಗೇ ಇರಲಿ

ಬೆಂಗಳೂರು,ನ.07: ಚಂದನವನದಲ್ಲಿ ಸಿನಿತಾರೆಯರ ಮನೆಯಲ್ಲಂತೂ ದೀಪಾವಳಿ ಹಬ್ಬ ಜೋರಾಗಿಯೇ ಆಚರಿಸಿ ಸಂಭ್ರಮಿಸುತ್ತಿದ್ದಾರೆ.. ಈಗಾಗಲೇ ದರ್ಶನ್​​, ಸುದೀಪ್​​, ಜಗ್ಗೇಶ್​, ಪುನೀತ್​​ ರಾಜ್​​ ಕುಮಾರ್​​ ಸೇರಿದಂತೆ ಹಲವಾರು ತಾರೆಯರು ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು , ಇದೀಗ ಚಂದನವನದ “ ತ್ಯಾಗರಾಜ” ​​ ರಮೇಶ್​​ ಅರವಿಂದ್ ಕೂಡ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ರಮೇಶ್ ಟ್ವೀಟ್

‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು . ನಿಮ್ಮ ಜೀವನದಲ್ಲಿ ಬೆಳಕು ಹೀಗೇ ಇರಲಿ ‘ಎಂದು ತಮ್ಮ ಟ್ವಿಟ್ಟರ್​​ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಇನ್ನು ರಮೇಶ್ ಅರವಿಂದ್ ಸದ್ಯ ನಿರ್ದೇಶನದತ್ತ ತಮ್ಮ ಚಿತ್ತವನ್ನು ಕೇಂದ್ರೀಕರಿಸಿದ್ದಾರೆ.. ‘ಬಟರ್ ಫ್ಲೈ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ…

‘ಬಟರ್ ಫ್ಲೈ’
ಪಾರುಲ್ ಯಾದವ್ ಚಿತ್ರದ ನಾಯಕಿ. ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ಕೆಲಸ ಮಾಡಿದ್ದಾರೆ
‘ಬಟರ್ ಫ್ಲೈ’ ಹಿಂದಿಯ ‘ಕ್ವೀನ್’ ಚಿತ್ರದ ರೀಮೇಕ್ ಆಗಿದ್ದು, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದಾರೆ

Tags