ಸುದ್ದಿಗಳು

ಅಂತಾರಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾ ‘ಗಂಧದ ಕುಡಿ’

ಬೆಂಗಳೂರು, ಮಾ.25:

ಗಂಧದ ಗುಡಿ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು‌ ಹೆಸರು ಮಾಡಿರೋ‌ ಸಿನಿಮಾ …ಈಗ‌ ಮತ್ತದೇ ರೀತಿಯಲ್ಲಿ ಗಂಧದ ಕುಡಿ ಎನ್ನುವ ಚಿತ್ರವೊಂದು ಸೆಟ್ಟೇರಿದ್ದು ತೆರೆಗೆ ಬರಲು‌ ಸಿದ್ದವಾಗಿದೆ …ಕಳೆದ ಒಂದು ವರ್ಷದ ಹಿಂದೆ ಚಿತ್ರೀಕರಣದ ವೇಳೆ ಎರ್ಮಾಸ್  ಫಾಲ್ಸ್ ಗೆ  ಜಾರಿ ಬಿದ್ದು ನಿರ್ದೇಶಕವೊಬ್ಬರು ಸಾವೀಗಿಡಾಗಿದ್ರು…ಅದೇ‌ ನಿರ್ದೇಶಕ  ಸಂತೋಷ್ ಕಟೀಲ್ ಕನಸಿನ ಕೂಸು  ‘ಗಂಧದ ಕುಡಿ’.

ಇದೇ ವಾರ ತೆರೆಗೆ ಬರಲಿದೆ ಸಿನಿಮಾ

ಕರ್ನಾಟಕ ರಾಜ್ಯದ  ಸಹ್ಯಾದ್ರಿ ಸಾಲು. ಪಶ್ಚಿಮ ಘಟ್ಟಗಳಲ್ಲಿ ಆಗ್ತಿರೋ ಅರಣ್ಯ ನಾಶವನ್ನೇ ಕಥಾಹಂದರವನ್ನಾಗಿಸಿಕೊಂಡಿರುವ  ಸಿನಿಮಾ ಗಂಧದ ಕುಡಿ. ಚಿತ್ರದ ಮೇಕಿಂಗ್ ಮತ್ತು ಟ್ರೈಲರ್ ನಿಂದಲೇ ಈಗಾಗಲೇ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರೋ ಕನ್ನಡ ಕುಡಿ ಚಿತ್ರ ಟ್ರೈಲರ್ ನಿಂದ್ಲೇ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.

ಗಂಧದಕುಡಿ ಚಿತ್ರ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್‍ಡಿಯಾಗೋ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕೌಟುಂಬಿಕ ಚಲನಚಿತ್ರ. ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಚಲನಚಿತ್ರ’, ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಪ್ರಸಾದ್ ಕೆ ಶೆಟ್ಟಿ ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ತಿಗಳನ್ನು ಪಡೆದಿದೆ. ಕಳೆದ ನವೆಂಬರ್ನಲ್ಲಿ ಮುಂಬೈಯಲ್ಲಿ ನಡೆದ ‘ಮೂನ್‍ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಚಿತ್ರ’, ‘ಅತ್ಯುತ್ತಮ ನಿರ್ದೆಶಕ’ ಪ್ರಶಸ್ತಿ ಸೇರಿದಂತೆ ಪ್ರಶಸ್ತಿಗಳ ಗೊಂಚಲನ್ನೇ ಬಾಚಿಕೊಂಡಿದೆ.

ಬಿಡುಗಡೆಗೂ ಮೊದಲೇ 21 ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರೋ  ಸಿನಿಮಾ ಗಂಧದಕುಡಿ ಚಿತ್ರ , 29ನೇ ತಾರೀಖು ರಾಜ್ಯದಾದ್ಯಂತ  ಬಿಡುಗಡೆಯಾಗ್ತಿದೆ. ಬಹಳಷ್ಟು ವಿಭಿನ್ನ ಹಾಗೂ ವಿಶೇಷ ವಿಚಾರಗಳಿಂದ ಕೂಡಿರೋ ಗಂಧದ ಕುಡಿ ಸಿನಿಮಾ ಕನ್ನಡ ಸಿನಿಪ್ರಿಯರನ್ನ ಸೆಳೆಯೋ ಸೂಚನೆ ಕೊಡ್ತಿದೆ.

ಮಲೆನಾಡ ಹುಡುಗಿಯ ಬಣ್ಣದ ಪಯಣ

#rameshbhatt #jyothirai #balkaninews #sandalwood #kannadamovies #gandhadakudikannadamovie

Tags