ಸುದ್ದಿಗಳು

ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್’

‘ಬದ್ಮಾಶ್’ ನಿರ್ದೇಶಕರ ಸಿನಿಮಾ

ಬೆಂಗಳೂರು.ಮಾ.24: ಚಂದನವನದಲ್ಲೀಗ ಡಿಟೆಕ್ಟಿವ್ ಕಥಾಹಂದರಗಳ ಸಿನಿಮಾಗಳು ಶುರುವಾಗುತ್ತಿವೆ. ಕಳೆದೆರಡು ತಿಂಗಳ ಹಿಂದೆಯಷ್ಟೇ ತೆರೆ ಕಂಡಿದ್ದ ‘ಬೆಲ್ ಬಾಟಂ’ ಎಲ್ಲರಿಗೂ ಇಷ್ಟವಾಗಿತ್ತು. ಈಗ ಸದ್ದಿಲ್ಲದೇ ಮತ್ತೊಂದು ಸಿನಿಮಾ ಶುರುವಾಗಿದೆ, ಅದುದೇ ‘ಶಿವಾಜಿ ಸುರತ್ಕಲ್’.

ಹೌದು, ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ ಈಗ ಡಿಟೆಕ್ಟಿವ್ ಆಗಿದ್ದಾರೆ. ಈ ಹಿಂದೆ ‘ಬದ್ಮಾಶ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸ್ ಈಗ ‘ಶಿವಾಜಿ ಸುರತ್ಕಲ್’ ಎಂಬ ಹೆಸರಿನ ಪತ್ತೇದಾರಿ ಕಥೆಯಾಧಾರಿತ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ ಕೇಶ್ ಆಫ್ ರಣಗಿರಿ ರಹಸ್ಯ’ ಎಂಬ ಟ್ಯಾಗ್ ಲೈನ್ ಇದೆ.

ಸದ್ಯ ಚಿತ್ರದ ಫಸ್ಟ್ ಲುಕ್ ಅನ್ನು ರಮೇಶ್ ತಮ್ಮ ಟ್ಚಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ನೋಡುಗರಿಂದ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. ವಿಶೇಷವೆಂದರೆ, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಅದರಲ್ಲಿ ರಮೇಶ್ ಮತ್ತು ರಾಧಿಕಾ ಪಾಲ್ಗೊಂಡಿದ್ದಾರೆ. ಸದ್ಯ ಶುರುವಾಗುತ್ತಿರುವ ಎರಡನೇ ಹಂತದ ಶೂಟಿಂಗ್ ನಲ್ಲಿ ಆರೋಹಿ ಪಾಲ್ಗೊಳ್ಳುತ್ತಿದ್ದಾರೆ.

ಬರುವ ಮಾರ್ಚ್ 25 ರಿಂದ ಚಿತ್ರದ ಚಿತ್ರೀಕರಣವು ಮಡಿಕೇರಿಯಲ್ಲಿ ಶುರುವಾಗುತ್ತಿದೆ. ಇಷ್ಟು ದಿನಗಳ ಕಾಲ ನಿರ್ದೇಶನ ಅಂತ ಓಡಾಡುತ್ತಿದ್ದ ರಮೇಶ್ ಈಗ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಲ್ಲಿ ರಮೇಶ್ ನಿಭಾಯಿಸುತ್ತಿರುವ ಪಾತ್ರದ ಹೆಸರೇ ಶಿವಾಜಿ ಸುರತ್ಕಲ್. ಕಥಾನಾಯಕ ಓರ್ವ ತನಿಖಾಧಿಕಾರಿ. ಅವನು ಪ್ರಕರಣಗಳನ್ನು ಭೇದಿಸುವ ರೀತಿಯೇ ವಿಭಿನ್ನವಾಗಿರುತ್ತದೆ. ರಾಧಿಕಾ ಚೇತನ್ ಇಲ್ಲಿ ರಮೇಶ್ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ‘ರಣಗಿರಿ’ ಎಂಬ ಕಾಲ್ಪನಿಕ ಊರಿನಲ್ಲಿ ಇರುವ ಹಲವು ರಹಸ್ಯಗಳನ್ನು ಶಿವಾಜಿ ಹೇಗೆ ಬಯಲು ಮಾಡುತ್ತಾನೆ ಎಂಬುದೇ ಕಥೆಯ ಸಾರಾಂಶ’ ಎಂದು ಮಾಹಿತಿ ನೀಡುತ್ತಾರೆ ಚಿತ್ರತಂಡದವರು.

ನೋಡುಗರ ಗಮನ ಸೆಳೆದ ‘ಮೂಕವಿಸ್ಮಿತ’ ಟ್ರೈಲರ್

#ramesh, #shivajisuratkala, #balkaninews #radhikachethan, #filmnews, #kannadasuddiagalu., #aksahsrivatsa, #arohi

Tags