ಸುದ್ದಿಗಳು

ಶ್ರೀರೆಡ್ಡಿಯನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ ವರ್ಮಾ!

ಟಾಲಿವುಡ್ ನಲ್ಲಿ ಕ್ಯಾಸ್ಟಿಂಗ್ ಕೌಚ್ ವಿಚಾರವಾಗಿ ಕೆಲದಿನಗಳಿಂದ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎನ್ನುವುದು ತಿಳಿದ ವಿಷಯ. ಅದರಲ್ಲೂ ನಟಿ ಶ್ರೀರೆಡ್ಡಿಯವರು  ಮಡಿವಂತಿಕೆಯನ್ನು ಮೀರಿ ಅತಿಯಾದ ಆರೋಪದೊಂದಿಗೆ ತನ್ನ ನಿಲುವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ತನಗಾದ ಅನ್ಯಾಯಕ್ಕೆ ನ್ಯಾಯ ಕೋರುವುದರೊಂದಿಗೆ ಕ್ಯಾಸ್ಟಿಂಗ್ ಕೌಚ್ ವಿರುದ್ದ ಇತರರು ನಾಚಿಕೆ ಪಟ್ಟುಕೊಳ್ಳುವ ರೀತಿಯಲ್ಲಿ ಹೋರಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಇದರ ಹಿನ್ನೆಲೆಯಲ್ಲಿ ಟಾಲಿವುಡ್ ನ ಅನೇಕ ಸಿನಿ ಪ್ರಮುಖರು ಅವರ ನಡೆಯನ್ನು ಖಂಡಿಸುತ್ತಿದ್ದಾರೆ. ಹಾಗೆಯೇ ಇನ್ನು ಕೆಲವರು ಇವರ ಈ ನಡೆಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ತಿಳಿಸಲಾಗಿದೆ.

ಭಾರತ ಕಂಡ ಅದ್ಬುತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕ್ಯಾಸ್ಟಿಂಗ್ ಕೌಚ್ ಕುರಿತಾದ ನಟಿ ಶ್ರೀರೆಡ್ಡಿಯವರ ಈ ನಡೆಯನ್ನು ನೋಡಿ  ಟ್ವಿಟ್ಟರ್ ಮೂಲಕ ಪ್ರಶಂಸೆಯ ಮಳೆಯನ್ನು ಸುರಿಸಿದ್ದಾರೆ. ನಟಿ ಶ್ರೀರೆಡ್ಡಿಯವರ ನಿಜಾಯಿತಿಯನ್ನು ಹೆದರಿಸಲಾಗದೇ ಚಿತ್ರರಂಗದ ಕೆಲ ಗಂಡಸರು ಹೆದರಿ ಹಿಂದೆ ಸರಿದಿದ್ದಾರೆ ಇನ್ನು ಕೆಲವರು ಅವರನ್ನು ಅಪಖ್ಯಾತಿಗೆ ಗುರಿ ಮಾಡಿದ್ದಾರೆ. ಮತ್ತು ಇವರ ಕುರಿತು ಅತರೇಖದಿಂದ ಮಾತನಾಡಿದ ಕೆಲ ನಟಿಯರು ಇವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಎಂದು ವರ್ಮಾ ವ್ಯಾಖ್ಯಾನಿಸಿದ್ದಾರೆ.

ನೀತಿ ನಿಜಾಯಿತಿ ಹೊಂದಿರುವ ಮಹಿಳೆಯರು ಶ್ರೀ ಸ್ತೀ ಶಕ್ತಿಯನ್ನು(ಶ್ರೀರೆಡ್ಡಿಯವರನ್ನು ಸ್ತ್ರೀ ಶಕ್ತಿ ಎಂದು ಹೋಲಿಸಲಾಗಿದೆ) ಬೆಂಬಲಿಸುತ್ತಾರೆ ಎಂದು ಟ್ವಿಟ್ಟಿಸಿದ್ದಾರೆ. ಶ್ರೀರೆಡ್ಡಿ ಈ ಹಿಂದೆ ನೀಡಿದ ಹೇಳಿಕೆ ಹಾಗು ಸಂದರ್ಶನಗಳಿಗೆ ಸಂಭಂದಿಸಿದಂತೆ ಮತ್ತು ಅವರು ಬಳಸಿರುವ ಭಾಷೆಯನ್ನು ಗುರುತಿಸಿ ಕೆಲವರು ನಟಿ ಶ್ರೀರೆಡ್ಡಿ ಕೇವಲ ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಬಿಟ್ಟಿ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರ ಕುರಿತು ವರ್ಮಾ ದೇಶ ಕಂಡ ಅದ್ಬುತ ವ್ಯಕ್ತಿಯನ್ನು ಉದಾಹರಣೆಯಾಗಿಟ್ಟು ಭಾರತದ ಇತಿಹಾಸವನ್ನು ನೆನಪಿಸಿದ್ದಾರೆ.

ಇತಿಹಾಸ ಪೂರ್ವದಲ್ಲಿ ಅಶೋಕ ಚಕ್ರವರ್ತಿ ಸಹ ತಮ್ಮ ಪ್ರಾರಂಭ ದಿನಗಳಲ್ಲಿ ಹಲವಾರು ಜನರನ್ನು ದಾರುಣವಾಗಿ ಕೊಂದಿದ್ದರು ನಂತರ ಮಾನವೀಯ ನೆಲೆಗಟ್ಟಿನಲ್ಲಿ ತಮ್ಮ ಮಾನಸಿಕ ಪರಿವರ್ತನೆಯಿಂದ ದೇಶಕ್ಕೆ ಹಾಗು ಶೋಷಿತರಿಗೆ ಅದ್ಬುತವಾದ ಕೊಡುಗೆಗಳನ್ನು ನೀಡಿರುವುದನ್ನು ಗಮನದಲ್ಲಿಟ್ಟುಕೊಂಡು ನಟಿ ಶ್ರೀರೆಡ್ಡಿಯವರ ನಡೆಯನ್ನು ಈ ದಿಕ್ಕಿನಲ್ಲಿ ಯೋಚಿಸಿ ಅವರನ್ನು ಬೆಂಬಲಿಸಿ ಎಂದು ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.

Tags