ಸುದ್ದಿಗಳು

ಬೆಂಗಳೂರಿಗೆ ಬಂದು ಪಾರ್ಟಿ ಕೊಡು ರಮ್ಯಾ !! ಎಂದು ಟ್ವೀಟ್ ಮಾಡಿದ ಈ ನಟಿ!!

ರಮ್ಯಾ ಮತ್ತು ರಾಗಿಣಿ ಯ ನಡುವೆ ಕೆಲವು ವಿಷಯಕ್ಕೆ ಮನಸ್ತಾಪ

ಬೆಂಗಳೂರು,ನ.29: ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಹಲವಾರು ಕಡೆಯಿಂದ ಅನೇಕ ಶುಭಾಶಯಗಳು ಹರಿದು ಬರುತ್ತಿವೆ.. ರಮ್ಯಾಗೆ ಹುಟ್ಟು ಹಬ್ಬದ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಕಾಲು ನೋವಿನಿಂದ ಬಳಲುತ್ತಿದ್ದಾರೆ.ಹಾಗಾಗಿ ಈ ಬಾರಿ ನೋ ಬರ್ತಡೇ ಸೆಲಬ್ರೇಷನ್.. ಸದ್ಯ ರಮ್ಯಾ ಸಿನಿಮಾದಿಂದ ದೂರ ಉಳಿದುಕೊಂಡು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

Image result for ragini dwivedi

ರಮ್ಯಾ 37

ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ 37ನೇ ವಸಂತಕ್ಕೆ ವಸಂತಕ್ಕೆ ಕಾಲಿಟ್ಟಿದ್ದಾರೆ.. ಹಲವಾರು ತಾರೆಗಳು ರಮ್ಯಾಗೆ ಶುಭ ಕೋರಿದ್ದ ರಾಗಿಣಿ ದ್ವಿವೇದಿ ಟ್ವೀಟ್ ಕೊಂಚ ಸ್ಪೆಷಲ್ ಆಗಿತ್ತು.. ಕೆಲ ವರ್ಷಗಳ ಹಿಂದೆ ರಮ್ಯಾ ಮತ್ತು ರಾಗಿಣಿ ಯ ನಡುವೆ ಕೆಲವು ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಆದರೆ ಅದನ್ನೆಲ್ಲಾ ಪಕ್ಕಕ್ಕಿಟ್ಟು ರಾಗಿಣಿ ರಮ್ಯಾಗೆ ಈ ರೀತಿ ಟ್ವೀಟ್ ಮಾಡಿದ್ದಾರೆ..

ಟ್ವೀಟ್

“ಹ್ಯಾಪಿ ಬರ್ತಡೇ ಬ್ಯೂಟಿಫುಲ್ ಯಾವತ್ತೂ ರಾಕಿಂಗ್ ಆಂಡ್ ಶೈನಿಂಗ್ ಆಗಿರು ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಮ್ಯಾ ಧನ್ಯವಾದ ರಾಗಿಣಿ ಎಂದು ತಿಳಿಸಿದ್ದಾರೆ.. ಇದಕ್ಕೆ ಮರು ಟ್ವೀಟ್ ಮಾಡಿದ ರಾಗಿಣಿ ಬೆಂಗಳೂರಿಗೆ ಬಂದು ಡಿನ್ನರ್ ಪಾರ್ಟಿ ಕೊಡು, ಬೆಂಗಳೂರು ನಿನ್ನನ್ನು ತುಂಬಾ ಮಿಸ್ ಮಾಡುತ್ತಿದೆ” ಎಂದು ಬರೆದಿದ್ದಾರೆ..

Tags

Related Articles