ಸುದ್ದಿಗಳು

ರಮ್ಯಾಗೆ ಜಗ್ಗೇಶ್ ಟಾಂಗ್

ನಟಿ ರಮ್ಯಾ ಪತ್ರಕರ್ತರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಿದ ಪ್ರಕರಣ

ಬೆಂಗಳೂರು, ಸೆ.29: ‘ನೀರ್ ದೋಸೆ’ ಸಿನಿಮಾ ಸಂಬಂಧಿಸಿದಂತೆ ರಮ್ಯಾ ಮೂವರು ಪತ್ರಕರ್ತರ ಮೇಲೆ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಇದನ್ನು  ಖುಲಾಸೆಗೊಳಿಸಿದೆ.

ರಮ್ಯಾಗೆ ಮುಖಭಂಗ

ಹೌದು, ‘ನೀರ್ ದೋಸೆ’ ಸಿನಿಮಾಗೆ ಸಂಬಂಧಪಟ್ಟಂತೆ ಅನುಮತಿಯಿಲ್ಲದೆ ನನ್ನ ಪೋಟೋ ತೆಗೆದಿದ್ದಾರೆಂದು ಆರೋಪಿಸಿ ನಟಿ ರಮ್ಯಾ ಮೂವರು ಪತ್ರಕರ್ತರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಆ ತೀರ್ಪು ಬಂದಿದ್ದು, ರಮ್ಯಾಗೇ ಸೋಲಾಗಿದೆ. ಮೂವರು ಪತ್ರಕರ್ತರ ಮೇಲಿದ್ದ ಆರೋಪವನ್ನು ಒಂದನೇ ಎಸಿಎಂಎಂ ಕೋರ್ಟ್ ಖುಲಾಸೆಗೊಳಿಸಿದೆ.ರಮ್ಯಾ ದೂರಿನಲ್ಲೇನಿದೆ?

ಇನ್ನು ರಮ್ಯಾ ಮೊದಲು ‘ನೀರ್ ದೋಸೆ’ ಸಿನಿಮಾಗೆ ನಾಯಕಿಯಾಗಿದ್ದಂತೆ. ಇದಾದ ನಂತರ ಆ ಸಿನಿಮಾದಿಂದ ಹೊರ ಹೋದರು, ೨೦೧೩ರಲ್ಲಿ ‘ನೀರ್ ದೋಸೆ’ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಈ ವೇಳೆ ಮೂರು ಜನ ಪತ್ರಕರ್ತರು ತಮ್ಮ ಅನುಮತಿ ಇಲ್ಲದೆ ತಮ್ಮ ಫೋಟೋ ತೆಗೆದು ಅದನ್ನು ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿದ್ದಾರೆಂದು ರಮ್ಯಾ ದೂರಿದ್ದರು.

ರಮ್ಯಾಗೇ ಜಗ್ಗೇಶ್ ತಿರುಗೇಟು

ಇದೀಗ ಈ ವಿಚಾರಕ್ಕೆ ನಟ ಜಗ್ಗೇಶ್ ಟ್ವಿಟ್ ಮಾಡಿದ್ದಾರೆ. ”ಮಾಧ್ಯಮ ಹಾಗೂ ಸಿನಿಮಾರಂಗ ಒಂದೇ ನಾಣ್ಯದ ಎರಡು ಮುಖ. ಇವು ಕಲೆಯ ಎರಡು ಕಣ್ಣು. ಮಾಧ್ಯಮ ಇದ್ದರೇನೆ ಕಲಾವಿದರಿಗೆ ಪ್ರಚಾರ. ಮಾಧ್ಯಮ ಇಲ್ಲದೆ ಬೆಳೆಯಬಹುದು ಅಂದುಕೊಂಡರೆ ಕಲಾಬಂಧುಗಳು! ತಾಯಿಲ್ಲದ ತಬ್ಬಲಿಯಂತೆ! ಬಣ್ಣದ ಬದುಕು ಕಲಾವಿದರಿಗೆ ಶಾಶ್ವತವಲ್ಲ! ಆದರೆ, ಎಲ್ಲಾ ಕಾಲದಲ್ಲೂ ಮಾಧ್ಯಮ ಶಾಶ್ವತ. ಚಪ್ಪಾಳೆ ಇರುವವರೆಗೂ ಕಲಾವಿದ! ಆಮೇಲೆ ನೆನಪು ಮಾತ್ರ ಕಲೆಬದುಕು” ಅಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags