ಸುದ್ದಿಗಳು

ಟಿಕ್ ಟಾಕ್ ಮೂಲಕ ಮೋದಿ ಸರ್ಕಾರವನ್ನು ಕಾಲೆಳೆದ ಮೋಹಕ ತಾರೆ ರಮ್ಯಾ…!!!

ಸದಾ ಒಂದಿಲ್ಲೊಂದು ಸುದ್ದಿಯಿಂದ ಸದ್ದು ಮಾಡುತ್ತಿರುವ ರಮ್ಯಾ ಮೇಡಮ್

ಬೆಂಗಳೂರು.ಫೆ.15

ಕೆಲವು ದಿನಗಳ ಹಿಂದೆಯಷ್ಟೇ ಟಿಕ್ ಟಾಕ್ ಬ್ಯಾನ್ ಆಗುತ್ತದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡಿತ್ತು. ಈ ಆ್ಯಪ್ ಉಪಯೋಗಿಸಿಕೊಂಡು ದೊಡ್ಡವರಿಂದ ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಾರೆ. ಇದೇ ವೇಳೆ ಸ್ಯಾಂಡಲ್ ವುಡ್ ನ ಮೋಹಕ ತಾರೆ, ರಮ್ಯಾ ಮೇಡಮ್ ಮೋದಿ ಸರ್ಕಾರವನ್ನು ಕಾಲೆಳೆದಿದ್ದಾರೆ.

ವ್ಯಂಗ ಮಾಡಿದ ರಮ್ಯಾ

ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗ ಮುಖ್ಯಸ್ಥೆ ರಮ್ಯಾ ಕೂಡ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಚೀನಾದ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.

ಹೌದು, ಕೇಂದ್ರ ಸರಕಾರವನ್ನು ‘ಭಾರತೀಯ ಜೂಟಿ ಪಾರ್ಟಿ’(ಭಾರತೀಯ ಸುಳ್ಳಿನ ಪಕ್ಷ) ಎಂದು ಕಾಳೆಲೆದಿದ್ದು, ‘ಭಾರತೀಯ ಸುಳ್ಳಿನ ಪಕ್ಷ’ದ ಭರವಸೆಗಳು ಇದೇ ರೀತಿಯದ್ದಾಗಿವೆ ಎಂದು ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಸದಾ ಟ್ರೋಲ್ ಆಗುವ ರಮ್ಯಾ

ಕೆಲವು ದಿನಗಳ ಹಿಂದೆಯಷ್ಟೇ ಮೋದಿ ಸರ್ಕಾರವನ್ನು ಕಾಲು ಎಳೆದು ಜನರಿಂದ ಟ್ರೋಲ್ ಗೆ ಒಳಗಾಗಿದ್ದರು. ಸದ್ಯ ಸಿನಿಮಾ ಬಿಟ್ಟು ಬರೀ ರಾಜಕೀಯದಲ್ಲಿಯೇ ಬ್ಯೂಸಿಯಾಗಿರುವ ರಮ್ಯಾ ಈ ವಿಡಿಯೋವನ್ನು ಫೆಬ್ರವರಿ 13ರಂದು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಇದೊಂದು ತಮಾಷೆ ವಿಡಿಯೋ ಆಗಿದ್ದು. ಇದರಲ್ಲಿ ತರುಣಿಯೊಬ್ಬಳು ಪ್ಲಾಸ್ಟಿಕ್ ಸ್ಟೂಲ್ ಒಂದನ್ನು ತನ್ನ ತಲೆ ಮೇಲಿರಿಸಿಕೊಂಡಿರುತ್ತಾಳೆ. ಕೆಮರಾ ಕ್ಲೋಸಪ್ ನಲ್ಲಿ ನೋಡಿದಾಗ ಆಕೆ ವಿಮಾನದ ಕಿಟಕಿಯಿಂದ ಹೊರಭಾಗವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಬಳಿಕ ನಿಧಾನವಾಗಿ ಕೆಮರಾ ಲಾಂಗ್ ಶಾಟ್ ಗೆ ಹೋಗುತ್ತಿದ್ದಂತೆ ಆಕೆ ಹಿಡಿದಿರುವುದು ಪ್ಲಾಸ್ಟಿಕ್ ಸ್ಟೂಲು ಎಂಬುದು ನೋಡುಗರಿಗೆ ತಿಳಿಯುತ್ತದೆ.

ಇದೇ ಸನ್ನಿವೇಶವನ್ನು ರಮ್ಯಾ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನರಿಗೆ ನೀಡಿರುವ ಭರವಸೆಗಳಿಗೆ ಹೋಲಿಕೆ ಮಾಡಿ ಆ ಮೂಲಕ ಈ ಕೇಂದ್ರ ಸರಕಾರವು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.

ಮಿಸ್ ಆದ ಸ್ಟಾನ್ ಲೀ: ಸ್ಯಾಮ್ಯುಯೆಲ್ ಎಲ್ ಜಾಕ್ಸನ್

#ramya, #balkaninews #narendramodi, #bjp, #filmnews, #political, #kanadasuddigalu, #ramyamadam #tictok

Tags