ಸುದ್ದಿಗಳು

ನಟಿ ರಮ್ಯಾಗೆ ಬಂದಿರೋ ಕಾಯಿಲೆ ಯಾವುದು..?

ಅಪರೂಪದ ಕಾಯಿಲೆಯಿಂದ ಪಾರಾದ ರಮ್ಯಾ

ಬೆಂಗಳೂರು, ನ.27: ನಟಿ ರಮ್ಯಾ ಸಿನಿಮಾ ರಂಗ ಪ್ರವೇಶ ಪಡೆದು ಬಹಳಷ್ಟು ಸಿನಿಮಾಗಳನ್ನು ಮಾಡಿ ನಂತರ ರಾಜಕೀಯಕ್ಕೂ ಪ್ರವೇಶ ಪಡೆದವರು. ಈಗಾಗಲೇ ರಾಜಕೀಯದಲ್ಲೂ ತಮ್ಮದೇ ಆದ ಸ್ಥಾನ ಉಳಿಸಿಕೊಂಡ ಇವರು ಸದ್ಯ ಸಿನಿಮಾದಿಂದ ಕೊಂಚ ದೂರ ಉಳಿದಿದ್ದಾರೆ. ಅದ್ಯಾಕೋ ರಮ್ಯಾ ಎಲ್ಲಿಯೂ ಕಾಣದಾಗಿದ್ದರು. ರಮ್ಯಾ ಕಾಣೆಯ ಹಿಂದೆ ಒಂದು ರೋಗದ ಕಥೆಯಿದೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಅಂಬಿಯ ಅಂತಿಮ ದರ್ಶನ ಪಡೆಯಲಿಲ್ಲ ರಮ್ಯಾ

ಮೊನ್ನೆಯಷ್ಟೆ ಕನ್ನಡ ಸಿನಿಮಾ ರಂಗದ ರೆಬಲ್, ಕನ್ವರ್, ಜಲೀಲ ಅಂಬಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ನಟ, ರಾಜಕೀಯ ಮುಖಂಡನ ಅಗಲಿಕೆ ತುಂಬಲಾರದ ನಷ್ಟವಾಗಿದೆ‌. ಇಡೀ ಸಿನಿಮಾ ರಂಗ, ರಾಜಕೀಯ ಮುಖಂಡರು ಬಂದು ಅಂತಿಮ ದರ್ಶನ ಪಡೆದರು. ಆದರೆ ಸಿನಿಮಾ ಮತ್ತು  ರಾಜಕೀಯಕ್ಕೆ ಪರಿಚಯಿಸಿದ ಅಂಬಿಯನ್ನು ರಮ್ಯಾ ಮರೆತುಬಿಟ್ಟರಾ ಎಂಬ ಮಾತು ಅಭಿಮಾನಿಗಳಲ್ಲಿ ಓಡಾಡಿತ್ತು. ಅಲ್ಲದೆ ಯಾಕೆ ಬರಲಿಲ್ಲ ಎಂದು ಹಲವಾರು ಮಂದಿ ರಮ್ಯಾಗೆ ತರಾಟೆಗೆ ತೆಗೆದುಕೊಂಡಿದ್ದರು. ಅದಾದ ನಂತರ ರಮ್ಯಾ ತಮಗಾದ ನೋವು ಜೊತೆಗೆ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದರು.ರಮ್ಯಾಗೆ ಬಂದಿರುವ ಕಾಯಿಲೆ ಇದೆ

ಇದೀಗ ರಮ್ಯಾನಿಗೆ ಇಂಥಹ ಕಾಯಿಲೆ ಯಾಕೆ ಬಂತು ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು, ರಮ್ಯಾಗೆ  ಅಪರೂಪದ ಖಾಯಿಲೆಯೊಂದಕ್ಕೆ ತುತ್ತಾಗಿದ್ದಾರೆ. ಹತ್ತು ಲಕ್ಷ ಮಂದಿ ಮಹಿಳೆಯರ ಪೈಕಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಯಿಂದ ಬಳಲುತ್ತಿದ್ದಾರಂತೆ ನಟಿ, ಮಾಜಿ ಸಂಸದೆ.  ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಖಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ‘ಆಸ್ಟಿಯೋಕ್ಲ್ಯಾಟೋಮಾ’ (Osteoclastoma ) ಖಾಯಿಲೆಯಿಂದ ಬಳಲುತ್ತಿದ್ದಾರಂತೆ ರಮ್ಯಾ.

‘ಆಸ್ಟಿಯೋಕ್ಲ್ಯಾಟೋಮಾ’  ಮೂಳೆಗಳಿಗೆ ಸಂಬಂಧಿಸಿದ ರೋಗ. ರಮ್ಯಾ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ. ಚಿಕಿತ್ಸೆ ಪಡೆದು ಅಕ್ಟೋಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ ರಮ್ಯಾ. ತಮ್ಮ ಸಮಸ್ಯೆ ಕುರಿತು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರೋ ರಮ್ಯಾ,  ದೇಹದಲ್ಲಿ ಸಮಸ್ಯೆಗಳಾದ್ರೆ ವ್ಯತಾಸ ಕಂಡು ಬಂದ್ರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತೆ ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ. ಕಾಲಿನ ಚಿತ್ರ ಹಾಕಿ ಇನ್ಸ್ಟಾಗ್ರಾಂ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ರಮ್ಯಾ.

Tags