ಸುದ್ದಿಗಳು

ಸುಳ್ಳು ಹೇಳಿದ್ರಾ ರಮ್ಯಾ…?

ಮನೆ ಖಾಲಿ ಮಾಡಿ ಎಂದಿದ್ದರಾ ಮಾಲೀಕರು...!?!

ಬೆಂಗಳೂರು, ಡಿ.04: ಮೊನ್ನೆ ಮೊನ್ನೆಯಷ್ಟೆ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿರುವ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿರುವುದರಿಂದ ಜನರ ಆಕ್ರೋಶಕ್ಕೂ ಕಾರಣರಾಗಿದ್ದಾರೆ. ಇದರಿಂದ ಎಚ್ಚೆತ್ತ ರಮ್ಯಾ ಟ್ವಿಟರ್ ಮೂಲಕ ಸಮರ್ಥನೆ ನೀಡುವ ಯತ್ನ ಮಾಡಿದ್ದಾರೆ. ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ ಎಂದಿರುವ ರಮ್ಯಾ, ಅದಕ್ಕಾಗಿ ಮಂಡ್ಯದಲ್ಲಿರುವ ಮನೆಯನ್ನು ಖಾಲಿ ಮಾಡಿದೆ ಎನ್ನುವ ಉತ್ತರ ನೀಡಿದ್ದಾರೆ.

ರಮ್ಯಾ ಮನೆ ಖಾಲಿ ಮಾಡುವ ಬಗ್ಗೆ ತಿಳಿದೇ ಇಲ್ಲ ಎಂದ ಮಾಲೀಕ

ಇದೀಗ ರಮ್ಯಾ ಅವರ ಮಾತು ಸುಳ್ಳಾ ಎನ್ನುವ ಅನುಮಾನ ಕಾಡ ತೊಡಗಿದೆ. ಯಾಕೆಂದರೆ ರಮ್ಯಾ ಹೇಳಿಕೆ ಸುಳ್ಳು ಎಂದಿದ್ದಾರೆ ಮನೆ ಮಾಲೀಕ ಸಾದತ್ ಅಲಿಖಾನ್.. ಮನೆ ಖಾಲಿ ಮಾಡಿರುವ ಬಗ್ಗೆ ಗೊತ್ತೇ ಇಲ್ಲ.. ಎರಡು ತಿಂಗಳ ಹಿಂದೆ ಅವರ ಪಿಎ ನನಗೆ ಕಾಲ್ ಮಾಡಿದ್ದರು ಎಂದಿದ್ದಾರೆ.. ಇನ್ನು, ಮಂಡ್ಯ ಮನೆಗೆ ಬಂದ ಮೇಲೆ ಸಾದಿಕ್ ಅಲಿಖಾನ್ ತಮ್ಮ ಬಳಿ ಬಾಡಿಗೆ ಪಡೆಯುತ್ತಿಲ್ಲ.. ಹೀಗಾಗಿ, ನನಗೆ ಇಲ್ಲಿರಲು ಇಷ್ಟವಿಲ್ಲ ಎಂದಿದ್ದರು. ಹೀಗಾಗಿ, ರೊಚ್ಚಿಗೆದ್ದಿರುವ ಜನ ರಮ್ಯಾ ತುಂಬಾ ಚೆನ್ನಾಗಿ ನಾಟಕವಾಡುತ್ತಾರೆ ಎಂದು ದೂರುತ್ತಿದ್ದಾರೆ.ಸಕ್ಕರೆ ನಾಡಿನ ಮಂದಿಗೆ ಮೋಸ ಮಾಡಿದ್ರಾ ರಮ್ಯಾ

ಒಟ್ಟಿನಲ್ಲಿ ಸಿನಿಮಾಗಳಲ್ಲಿ ನಟಿಸಿ, ರಾಜಕೀಯದಲ್ಲಿ ಉತ್ತಮ ಡ್ರಾಮ ಮಾಡುತ್ತಿರುವ ರಮ್ಯಾ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ತಿಳಿದಿರುವ ಸಕ್ಕರೆ ಮನಸಿನ ಮಂಡ್ಯ ಜನತೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಮಾಡಲು ಕಾದು ಕೂತಿದ್ದಾರೆ..

Tags