ಸುದ್ದಿಗಳು

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಮುಖಭಂಗ ಮಾಡಿದ ಅಭಿಮಾನಿಗಳು

ಬೆಂಗಳೂರು, ಜ.29:

ಚಂದನವನದ ಮೋಹಕ ತಾರೆ ರಮ್ಯಾ ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ದೂರ ಉಳಿದು ರಾಜಕೀಯದಲ್ಲಿ ಸಕ್ರಿಯರಾದ ಮೇಲಂತೂ ಈ ನಟಿ ಸಿಗೋದು ಸಾಮಾಜಿಕ ಜಾಲತಾಣದಲ್ಲಿಯೇ ಅನ್ನೋದು ಹಲವರ ಮಾತು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಮಾಡುತ್ತಲೇ ಸುದ್ದಿಯಾಗುತ್ತಾರೆ ಈ ನಟಿ. ಇದೀಗ ಮತ್ತೊಂದು ವಿವಾದಾತ್ಮಕ ಟ್ವಿಟ್ ಮಾಡಿವ ಮೂಲಕ ನೆಟ್ಟಿಗರನ್ನು ಕೆರಳಿಸಿದ್ದಾರೆ.

ಮೋದಿ ಅಣಕಿಸುವ ವಿಡಿಯೋ

ಹೌದು, ಸದಾ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯನ್ನು ವಿರೋಧಿಸಿ ಟ್ವಿಟ್ ಮಾಡುವ ಮೂಲಕ  ಸದಾ ಅನೇಕರ ಕೆಂಗಣ್ಣಿಗೆ ಗುರಿಯಾಗುವ ಈ ನಟಿ ಇದೀಗ ಮತ್ತೊಂದು ಟ್ವಿಟ್ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಮೋದಿ ಅಣಕಿಸಿ ಟ್ವೀಟ್ ಮಾಡಿರುವ ರಮ್ಯಾ, ಅಚ್ಚೇ ದಿನ್​ ವಿಚಾರ ಮುಂದಿಟ್ಟುಕೊಂಡು ಮೋದಿಗೆ ತಿರುಗೇಟು ನೀಡಿದ್ದಾರೆ. ವಿಮಾನ ಪ್ರಯಾಣಿಕರು ಸಡನ್ನಾಗಿ ಭಯಭೀತಗೊಳ್ಳುವ ವಿಡಿಯೋ ಪೋಸ್ಟ್​ ಮಾಡಿರುವ ಅವರು, ಅಚ್ಚೇ ದಿನ ಅಂತಾ ಕೇಳಿದಾಗ ಜನರ ಪ್ರತಿಕ್ರಿಯೆ ಎಂದು ಕಾಮೆಂಟ್ ಮಾಡಿದ್ದಾರೆ.

ಮುಜುಗರಕ್ಕೀಡಾದ ರಮ್ಯಾ

ಇನ್ನು, ಈ ವಿಡಿಯೋ ಹಾಗೂ ಟ್ವಿಟ್ ನೋಡಿದ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.  ಯಾವಾಗಲೂ ಮೋದಿಯವರ ಬಗ್ಗೆ ಮಾತನಾಡುವುದನ್ನು ಬಿಟ್ಟು ನೀವು ಏನಾದರೂ ಸಾಧನೆ ಮಾಡು ಇಲ್ಲಾ ಸುಮ್ಮನೆ ಮುಚ್ಕೊಂಡು ಇರು ಎಂದರೆ, ಮತ್ತೊಬ್ಬರು, ದೇಶಕ್ಕೆ ಒಳ್ಳೆಯ ದಿನ ಬಂದಿವೆ. ಆದರೆ, ಕಾಂಗ್ರೆಸ್ ​ಗೆ ಮಾತ್ರ ಬಂದಿಲ್ಲ ಎಂದು ಕೆಲವರು ರೀ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಗೆ ತಿವಿಯಲು ಹೋಗಿ ರಮ್ಯಾ ಮುಜುಗರಕ್ಕೀಡಾಗಿದಂತೂ ಸತ್ಯ.

ಬೆಂಗಳೂರಿಗೆ ಬಂದು ಪಾರ್ಟಿ ಕೊಡು ರಮ್ಯಾ !! ಎಂದು ಟ್ವೀಟ್ ಮಾಡಿದ ಈ ನಟಿ!!

#ramya #ramyadivyaspandana #ramyatwitter #ramyamovies #ramyatamilmovies #balkaninews #ramyainpolitics

Tags