ಸುದ್ದಿಗಳು

ತಮಿಳು ಚಿತ್ರದ ಹಾಡನ್ನು ಹೊಗಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

ಬೆಂಗಳೂರು, ಜ.22:

ನಟಿ ರಮ್ಯಾ ಸದ್ಯ ಸಿನಿಮಾದಿಂದ ಕೊಂಚ ದೂರ ಸರಿದು ರಾಜಕೀಯದಲ್ಲಿಯೇ ಮುಂದುವರೆದಿದ್ದಾರೆ.‌ ಅದೆಷ್ಟೋ ಮಂದಿ ಕರ್ನಾಟಕವನ್ನು ರಮ್ಯಾ ಮರೆತಿದ್ದಾರೆ ಅನ್ನೋ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಲೇ ಇವೆ. ಅಷ್ಟೆ ಅಲ್ಲ ಈ ನಟಿಗೆ ಕನ್ನಡದ ಮೇಲಿನ ಪ್ರೀತಿ ಕಡಿಮೆಯೇ ಅನ್ನೋ ಮಾತುಗಳು ಕೂಡ ಕಾಮನ್ ಆಗಿ ಬಿಟ್ಟಿವೆ. ಇದೀಗ ಈ ನಟಿ ಮತ್ತೆ ಟ್ರೋಲ್ ಗೆ ಒಳಗಾಗಿದ್ದಾರೆ.

ಪರಭಾಷೆ ಹಾಡು ಹೊಗಳಿದ ರಮ್ಯಾ

ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ನಟಿ ರಮ್ಯಾ ಟ್ವಿಟ್ ಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಆರೋಗ್ಯ ಚೇತರಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಇದೀಗ ತಮಿಳು ಸಿನಿಮಾದ ಹಾಡನ್ನು ಹೊಗಳಿದ್ದಾರೆ. ಇದೀಗ ಇವರ ಹೊಗಳಿಕೆಗೆ ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.

ರಮ್ಯಾಗೆ ನೆಟ್ಟಿಗರು ಕ್ಲಾಸ್

ಹೌದು, ಇತ್ತೀಚೆಗೆ ತಮಿಳು ನಟ ಧನುಷ್ ಅಭಿನಯದ ‘ಮಾರಿ 2’ ಸಿನಿಮಾದ ರೌಡಿ ಬೇಬಿ ಹಾಡು ಬಿಡುಗಡೆಯಾಗಿ ಸಕ್ಕತ್ ಸದ್ದು ಮಾಡ್ತಿದೆ. ಯೂಟ್ಯೂಬ್ ನಲ್ಲಿ ಈ ಹಾಡು 100 ಮಿಲಿಯನ್ ಗೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಹಾಡಿಗೆ ನಟಿ ರಮ್ಯಾ, ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ. ಯುವನ್ ಶಂಕರ್ ರಾಜ್ ನಿಮ್ಮ ಬಗ್ಗೆ ಬಹಳ ಖುಷಿ ಆಗುತ್ತಿದೆ. ಎಂದು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ಇದೀಗ ಈ ಟ್ವಿಟ್ ಗೆ ನೆಟ್ಟಿಗರು ಸಿಟ್ಟಿಗೆದ್ದಿದ್ದು, ಸಕ್ಕತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕನ್ನಡದ ಹಿಟ್ ಸಿನಿಮಾಗಳು ಕಣ್ಣಿಗೆ ಕಂಡಿಲ್ಲ ಬೇರೆ ಸಿನಿಮಾಗಳನ್ನು ಹಾಡಿ ಹೊಗಳಿದ್ದೀರಾ ಅಂತಾ ಹೇಳಿದ್ದಾರೆ.

#ramya #ramyamovies #ramyadivyaspandana #sandalwood #kannadamovies #balkaninews

Tags