ಸುದ್ದಿಗಳು

ರಮ್ಯಾಗೆ ತರಾಟೆ ತೆಗೆದುಕೊಂಡ ಬಾಲಕಿ

ಚಂದನವನದ ಮೋಹಕ ತಾರೆ ರಮ್ಯಾ

ಬೆಂಗಳೂರು, ನ.03: ಯಾಕೋ ರಮ್ಯಾ ಟೈಮ್ ಸರಿ ಇಲ್ಲ ಅನ್ನಿಸುತ್ತೆ. ಯಾಕೆಂದರೆ ಅವರು ಮಾಡಿರುವ ಕೆಲಸಕ್ಕೆ ಇದೀಗ ಚಿಕ್ಕ ಮಕ್ಕಳು ಬುದ್ದಿವಾದ ಹೇಳುವಂತಾಗಿದೆ.

ಹೌದು, ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ನಟಿ ಹಾಗೂ ರಾಜಕಾರಣಿ ರಮ್ಯಾ ಸದ್ಯ ಮೋದಿ ಬಗ್ಗೆ ಮಾಡಿದ್ದ ಟ್ವಿಟ್ ವೊಂದಕ್ಕೆ ಪ್ರತಿಕ್ರಿಯೆಗಾಗಿ  ಟ್ರೋಲ್‌ಗಳು ಬಂದಿದ್ದವು. ಬುಧವಾರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನರೇಂದ್ರ ಮೋದಿಯವರು ಪ್ರತಿಮೆ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಪುತ್ಥಳಿಯ ಬಳಿ ಮೋದಿ ನಿಂತಿರುವ ಚಿತ್ರವನ್ನು ಹಾಕಿ, ಹಕ್ಕಿ ಗಲೀಜು ಮಾಡಿದೆಯೇ? ಎಂಬ ಅಡಿಬರಹವನ್ನು ಹಾಕಿದ್ದರು. ಇದಕ್ಕೆ ಬಹಳಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಬಾಲಕಿಯೊಬ್ಬಳು ರಮ್ಯಾಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾಳೆ.

ರಮ್ಯಾಗೆ ಪುಟ್ಟ ಬಾಲಕಿಯಿಂದ ಕ್ಲಾಸ್

ವಿಡಿಯೋ ಒಂದನ್ನು ಮಾಡಿರುವ ಈ ಬಾಲಕಿ, ಯಾವ ಸ್ಟ್ಯಾಚ್ಯು ಆಫ್ ಯೂನಿಟಿ ಎಂಬ ಎತ್ತರವಾದ ಪ್ರತಿಮೆಯನ್ನ ಕಟ್ಟಿಸಿದಂತಹ ವ್ಯಕ್ತಿಯೇ ಆ ಪ್ರತಿಮೆಯ ಕೆಳಗಡೆ ನಿಂತುಕೊಂಡಾಗ ಒಂದು ಹಕ್ಕಿಯ ಹಿಕ್ಕೆಯ ರೀತಿಯಲ್ಲಿ ನಿಮಗೆ ಕಾಣಿಸೋದಾದ್ರೆ ಆ ಪ್ರತಿಮೆ ಇನ್ನಷ್ಟು ಎತ್ತರವಾಗಿದೆ ಎಂಬುದನ್ನು ನೀವು ಯೋಚಿಸಬೇಕಾಗುತ್ತದೆ. ಅದು ಬಿಡಿ ಆ ಪ್ರತಿಮೆಯನ್ನು ಕಟ್ಟಿಸಿದಂತಹ ವ್ಯಕ್ತಿಯ ವ್ಯಕ್ತಿತ್ವ ಇನ್ನಷ್ಟು ಎತ್ತರವಾದುದಂತ ನೀವೇ ಯೋಚಿಸಬೇಕಾಗಿದೆ ಅಂತಾ ಕ್ಲಾಸ್ ತೆಗೆದುಕೊಂಡಿದ್ದಾಳೆ.

ಪ್ರತಿಮೆ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಬಾಲಕಿ

ಆ ವ್ಯಕ್ತಿ ಕಟ್ಟಿರೋದು ತನ್ನ ತಂದೆ ಅಥವಾ ತಾಯಿಯ ಪ್ರತಿಮೆ ಅಲ್ಲ. ಸ್ವತಃ ನಿಮ್ಮ ಕಾಂಗ್ರೆಸ್ ನ ಹಿರಿಯ ನಾಯಕರಾದಂತಹ ಸರ್ದಾರ್ ವಲ್ಲಭಭಾಯ್ ಅವರ ಪ್ರತಿಮೆಯನ್ನು ಅವರು ಕಟ್ಟಿಸಿರೋದು. ಮತ್ತೊಮ್ಮೆ ಹೇಳ್ತಾ ಇದ್ದೀನಿ ಅಂಡರ್ ದಿಸ್ ಪಾಯಿಂಟ್ಸ್, ನೋಟ್ ಮಾಡಿಕೊಳ್ಳಿ, ಕಾಂಗ್ರೆಸ್ ಹಿರಿಯ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರತಿಮೆಯನ್ನು ನರೇಂದ್ರ ಮೋದಿಯವರು ಕಟ್ಟಿಸಿದ್ದಾರೆ. ಅಲ್ಲಕ್ಕ ನಿಮ್ಮ ಕಾಂಗ್ರೆಸ್ ಪಕ್ಷಕಂತೂ ಆ ವ್ಯಕ್ತಿಗೆ ಸಲ್ಲಿಸಬೇಕಾದಂತಹ ನ್ಯಾಯಯುತ ಗೌರವವನ್ನು ಸಲ್ಲಿಸಿಲ್ಲ. ಅದು ಬಿಟ್ಟು ಬೇರೆ ಪಕ್ಷದವರು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಅಂದ್ರೆ ಅದನ್ನು ನೋಡಿ ಆನಂದಿಸಿ. ಸಂತೋಷಪಡಿ , ಇಷ್ಟು ಎತ್ತರವಾದ ಪ್ರತಿಮೆಯನ್ನು ನೋಡಿದ್ರೆನೇ ನೀವು ಈ ರೀತಿ ಕಮೆಂಟ್ ಮಾಡ್ತಿರಂತಾದ್ರೆ ಇನ್ನು ಅದಕ್ಕಿಂತ ಎತ್ತರವಾದ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಅಲ್ವ ಅದಕ್ಕೆ ನೀವು ಯಾವ ರೀತಿ ಕಮೆಂಟ್ ಮಾಡ್ತೀರಾ ಅನ್ನುವುದನ್ನು ನನಗೆ ಊಹಿಸಲೂ ಆಗುತ್ತಿಲ್ಲ ಎಂದು ಆ ಬಾಲಕಿ ರಮ್ಯಾಗೆ ತಿರುಗೇಟು ನೀಡಿದ್ದಾಳೆ.

Tags