ಸುದ್ದಿಗಳು

ಹೆಸರೇಳದೇ ಸಮಯಸಾಧಕಿಗೆ ಟಾಂಗ್ ಕೊಟ್ಟ ಜಗ್ಗೇಶ್

ನಟಿ, ರಾಜಕಾರಣಿ ರಮ್ಯಾ ಬಗ್ಗೆ ಜಗ್ಗೇಶ್ ಮಾತು

ಬೆಂಗಳೂರು.ಫೆ.28: ನಟ ಕಮ್ ರಾಜಕಾರಣಿ ರಮ್ಯಾ ಒಂದಲ್ಲಾ ಒಂದು ವಿಷಯದಿಂದ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯಂತೂ ಅಸಮಾಧಾನ ಹೊರಡಿಸುತ್ತಲೇ ಇರುತ್ತಾರೆ. ಈಗ ನಟ ಜಗ್ಗೇಶ್ ಅವರನ್ನು ಅವರ ಹೆಸರನ್ನು ಉಲ್ಲೇಖಿಸಿದೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮಯಸಾಧಕಿ

ರಮ್ಯಾ ಯಾವಾಗಲೂ ಮೋದಿ ವಿರುದ್ದ ಮಾತನಾಡುತ್ತಾರೆ ಎಂದು ಜಗ್ಗೇಶ್ ಪರೋಕ್ಷವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಟೀಕಿಸಿದ್ದಾರೆ.

“ದೇಶ ಮೆಚ್ಚುವ ನರೇಂದ್ರ ಮೋದಿಯವರ ನಿರ್ಣಯಕ್ಕೆ ಕಂಗಾಲಾಗಿದ್ದ ಸಮಯ ಸಾಧಕರು. ದೇಶದ ಸೈನಿಕ ಪಾಕಿಸ್ತಾನದಲ್ಲಿ ಸೆರೆಸಿಕ್ಕಾಗ ಮಾತು ಶುರು ಮಾಡಿದ್ದಾರೆ. ಸದ್ಯ ವಿಷಯ ಸಿಕ್ಕಿದೆ ಎಂದು ಮೋದಿ ವಿರುದ್ಧವಾಗಿ ಮಾತನಾಡಲು ಎದ್ದು ನಿಂತಿದ್ದಾರೆ. ನಮ್ಮ ನೆಲದ ಅನ್ನ ತಿಂದು, ನಮ್ಮ ಕನ್ನಡ ಜನರ ಚಪ್ಪಾಳೆ ಪಡೆದು ಜೀವನಕಂಡ ಮಹನೀಯಳು. ಮಾತನಾಡಲು ಅವಕಾಶ ಸಿಕ್ಕಿತು ಎಂದು ವ್ಯರ್ಥಮಾತು ಶುರುವಿಟ್ಟಳು, ಸಮಯಸಾಧಕಿ” ಎಂದು ಜಗ್ಗೇಶ್, ರಮ್ಯಾರ ಹೆಸರನ್ನು ಹೇಳದೇ, ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನು ನಿನ್ನೆಯಷ್ಟೇ ಭಾರತ ವಾಯುಪಡೆಯ ಪೈಲಟ್ ಅಭಿನಂದನ್ ರವರು ಪಾಕ್ ಗೆ ಸೆರೆ ಸಿಕ್ಕ ಬಳಿಕ ಟ್ವೀಟ್ ಮಾಡಿದ್ದ ರಮ್ಯಾ, ಮತ್ತೆ ಅದನ್ನೇ ಮಾಡಿದ್ದಾರೆ. ಪಾಕಿಸ್ತಾನ ಪ್ರತೀಕಾರವನ್ನು ತೀರಿಸಿಕೊಳ್ಳುತ್ತದೆ ಎಂಬುದು ನಿಮಗೆ ತಿಳಿದಿರಲಿಲ್ಲವೇ? ತಿಳಿದಿದ್ದರೂ ನೀವು ನಿದ್ದೆ ಮಾಡುತ್ತಿದ್ದೀರಾ? ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟ ಯೋಧನಿಗೆ ಸಂತಾಪ ಸೂಚಿಸಿ ಒಂದು ಟ್ವೀಟ್ ಮಾಡಿಲ್ಲ. ನಮ್ಮನ್ನು ಉದ್ದೇಶಿಸಿ ಮಾತನಾಡದೆಯೇ ಮತ್ತು ಆ್ಯಪ್ ಲಾಂಚಿಂಗ್ ಹೇಗೆ ಮಾಡಿದಿರಿ? ಎಂದು ಪ್ರಧಾನಿ ಮೋದಿ ವಿರುದ್ಧ ರಮ್ಯಾ ಟ್ವೀಟ್ ಮಾಡಿ ಕಿಡಿಕಾರಿದ್ದರು.

ಈ ಬಗ್ಗೆ ಪ್ರತ್ತುತ್ತರ ಕೊಡುವ ಸಲುವಾಗಿ ಜಗ್ಗೇಶ್, ಅವರ ಹೆಸರನ್ನು ಹೇಳದೇ, ಸಮಯಸಾಧಕಿ ಎಂದು ನುಡಿಯುತ್ತಾ, ಅವರಿಗೆ ಟಾಂಗ್ ಕೊಟ್ಟಿದ್ದಾರೆ.. ಇದೊಂದೇ ವಿಷಯಕ್ಕಂತಲ್ಲಾ, ಪ್ರತಿಬಾರಿಯೂ ಅವರು ರಮ್ಯಾರಿಗೆ ಪ್ರತ್ಯುತ್ತರ ಕೊಡುತ್ತಾ ಬಂದಿದ್ದಾರೆ.

‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ನಿರತರಾದ ರಾಕಿಂಗ್ ಸ್ಟಾರ್

#ramya, #jaggesh, #balkaninews #filmnews, #kannadasuddigalu,

Tags