ಸುದ್ದಿಗಳು

ವೈ ಎಸ್ ಆರ್ ಪತ್ನಿಯಾಗಲು ಒಪ್ಪಿದ ರಮ್ಯಾ ಕೃಷ್ಣ

ಬಾಹುಬಲಿ ಚಿತ್ರದಲ್ಲಿ ಖಡಕ್​ ವಾಯ್ಸ್​ ಹಾಗೂ ನಟನೆ ಮೂಲಕ ಗಮನ ಸೆಳೆದ ನಟಿ ರಮ್ಯಾಕೃಷ್ಣ, ಶಿವಗಾಮಿಯಾಗಿ ಪ್ರಸಿದ್ಧಿಯಾದರು. ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಬಾಹುಬಲಿ 2 ಚಿತ್ರದಲ್ಲಿ ರಾಜಮಾತೆಯಾಗಿ ಗಮನ ಸೆಳೆದ ರಮ್ಯಾಕೃಷ್ಣ, ತಾನು ಐತಿಹಾಸಿಕ ಪಾತ್ರಕ್ಕೂ ಸೈ ಎಂದು ಸಾಬೀತು ಪಡಿಸಿದರು. ಇದೀಗ ಶಿವಗಾಮಿ, ವೈಎಸ್ ಆರ್ ಪತ್ನಿಯಾಗಲು ಹೊರಟಿದ್ದಾರೆ.

ಹೌದು ಬಹುನಿರೀಕ್ಷಿತ ವೈ ಎಸ್ ಆರ್ ಅವರ ಜೀವನಚರಿತ್ರೆಯನ್ನು ಒಳಗೊಂಡ ಯಾತ್ರಾದಲ್ಲಿ ವೈ ಎಸ್ ಆರ್ ಪತ್ನಿಯಾಗಿ ರಮ್ಯಾ ಕೃಷ್ಣ ಅಭಿನಯಿಸುವುದು ಬಹುತೇಕ ಖಚಿತವಾಗಿದೆ. ಆರಂಭದಲ್ಲಿ ವೈ ಎಸ್ ಆರ್ ಪತ್ನಿಯಾಗಿ ನಯನತಾರ ಅಭಿನಯಿಸುವುದು ಎನ್ನಲಾಗಿತ್ತು. ಆದರೆ ಇದೀಗ ಆ ಸ್ಥಾನಕ್ಕೆ ರಮ್ಯಾ ಕೃಷ್ಣ ತುಂಬಿದ್ದಾರೆ. ನಯನತಾರ ಪಾತ್ರವನ್ನು ತಿರಸ್ಕರಿಸಿದ ಕಾರಣಕ್ಕಾಗಿ  ಇದೀಗ ರಮ್ಯಾ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ. ರಮ್ಯಾ ಕೃಷ್ಣ ಅವರಿಗೆ ಮಲೆಯಾಲಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸಾಥ್ ನೀಡಲಿದ್ದಾರೆ. ವೈ ಎಸ್ ರಾಜಶೇಕರ್ ರೆಡ್ಡಿ ಅವರ ಪಾತ್ರವನ್ನು ಮಮ್ಮುಟ್ಟಿ ನಿರ್ವಹಿಸಲಿದ್ದು, ಅವರ ಪತ್ನಿಯ ಪಾತ್ರವನ್ನು ರಮ್ಯಾ ಕೃಷ್ಣ ನಿರ್ವಹಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಹುತೇಕ ಖಚಿತಪಡಿಸಿದೆ.

ಬಾಹುಬಲಿ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ರಮ್ಯಾಕೃಷ್ಣ ಮತ್ತೊಂದು ದೊಡ್ಡ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ  ಅಭಿನಯಿಸುತ್ತಿದ್ದಾರೆ. ಆರಂಭದಿಂದಲೂ ಕೇವಲ ಗ್ಲಾಮರ್ ಮಾತ್ರವಲ್ಲದೆ ಅಭಿನಯ ಹಾಗೂ ಪ್ರತಿಭೆಯಿಂದಲೇ ಗಮನ ಸೆಳೆದಿದ್ದ ರಮ್ಯಾಕೃಷ್ಣ, ಇತ್ತೀಚೆಗೆ ಹಲವು ಪೋಷಕ ಪಾತ್ರದಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.

ಈ ಹಿಂದೆ ವೈ ಎಸ್ ಆರ್ ಪಾತ್ರವನ್ನು ಸೂರ್ಯ ನಿರ್ವಹಿಸಲಿದ್ದಾರೆ  ಎಂಬ ಗಾಪಿಸ್ ಹರಡಿತ್ತು, ಆದರೆ ಇದಕ್ಕೆಲ್ಲಾ ಪೂರ್ಣ ವಿರಾಮ ನೀಡಿರುವ ಚಿತ್ರತಂಡ ಇದೀಗ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಗೊಳಿಸಿದ್ದು, ಚಿತ್ರದಲ್ಲಿ ವೈ ಎಸ್ ಆರ್ ಅವರ ಪತ್ನಿ ವಿಜಯಮ್ಮರ ಪಾತ್ರವನ್ನು ರಮ್ಯಾಕೃಷ್ಣ ನಟಿಸಲಿದ್ದು, ಮಮ್ಮುಟ್ಟಿ ವೈ ಎಸ್ ಆರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ಖಡಕ್​ ವಾಯ್ಸ್​ ಹಾಗೂ ನಟನೆ ಮೂಲಕ ಗಮನ ಸೆಳೆದ ನಟಿ ರಮ್ಯಾಕೃಷ್ಣ, ಶಿವಗಾಮಿಯಾಗಿ ಪ್ರಸಿದ್ಧಿಯಾದರು. ರಾಜಮೌಳಿ ನಿರ್ದೇಶನದ ಬಾಹಬಲಿ ಹಾಗೂ ಬಾಹುಬಲಿ 2 ಚಿತ್ರದಲ್ಲಿ ರಾಜಮಾತೆಯಾಗಿ ಗಮನ ಸೆಳೆದ ರಮ್ಯಾಕೃಷ್ಣ, ತಾನು ಐತಿಹಾಸಿಕ ಪಾತ್ರಕ್ಕೂ ಸೈ ಎಂದು ಸಾಬೀತು ಪಡಿಸಿದರು. ಇದೀಗ ಶಿವಗಾಮಿ, ವೈಎಸ್ ಆರ್ ಪತ್ನಿಯಾಗಲು ಹೊರಟಿದ್ದಾರೆ.

ಹೌದು ಬಹುನಿರೀಕ್ಷಿತ ವೈ ಎಸ್ ಆರ್ ಅವರ ಜೀವನಚರಿತ್ರೆಯನ್ನು ಒಳಗೊಂಡ ಯಾತ್ರಾದಲ್ಲಿ ವೈ ಎಸ್ ಆರ್ ಪತ್ನಿಯಾಗಿ ರಮ್ಯಾ ಕೃಷ್ಣ ಅಭಿನಯಿಸುವುದು ಬಹುತೇಕ ಖಚಿತವಾಗಿದೆ. ಆರಂಭದಲ್ಲಿ ವೈ ಎಸ್ ಆರ್ ಪತ್ನಿಯಾಗಿ ನಯನತಾರ ಅಭಿನಯಿಸುವುದು ಎನ್ನಲಾಗಿತ್ತು. ಆದರೆ ಇದೀಗ ಆ ಸ್ಥಾನಕ್ಕೆ ರಮ್ಯಾ ಕೃಷ್ಣ ತುಂಬಿದ್ದಾರೆ. ನಯನತಾರ ಪಾತ್ರವನ್ನು ತಿರಸ್ಕರಿಸಿದ ಕಾರಣಕ್ಕಾಗಿ  ಇದೀಗ ರಮ್ಯಾ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ. ರಮ್ಯಾ ಕೃಷ್ಣ ಅವರಿಗೆ ಮಲೆಯಾಲಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸಾಥ್ ನೀಡಲಿದ್ದಾರೆ. ವೈ ಎಸ್ ರಾಜಶೇಕರ್ ರೆಡ್ಡಿ ಅವರ ಪಾತ್ರವನ್ನು ಮಮ್ಮುಟ್ಟಿ ನಿರ್ವಹಿಸಲಿದ್ದು, ಅವರ ಪತ್ನಿಯ ಪಾತ್ರವನ್ನು ರಮ್ಯಾ ಕೃಷ್ಣ ನಿರ್ವಹಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಹುತೇಕ ಖಚಿತಪಡಿಸಿದೆ.

ಬಾಹುಬಲಿ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ರಮ್ಯಾಕೃಷ್ಣ ಮತ್ತೊಂದು ದೊಡ್ಡ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ  ಅಭಿನಯಿಸುತ್ತಿದ್ದಾರೆ. ಆರಂಭದಿಂದಲೂ ಕೇವಲ ಗ್ಲಾಮರ್ ಮಾತ್ರವಲ್ಲದೆ ಅಭಿನಯ ಹಾಗೂ ಪ್ರತಿಭೆಯಿಂದಲೇ ಗಮನ ಸೆಳೆದಿದ್ದ ರಮ್ಯಾಕೃಷ್ಣ, ಇತ್ತೀಚೆಗೆ ಹಲವು ಪೋಷಕ ಪಾತ್ರದಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.

ಈ ಹಿಂದೆ ವೈ ಎಸ್ ಆರ್ ಪಾತ್ರವನ್ನು ಸೂರ್ಯ ನಿರ್ವಹಿಸಲಿದ್ದಾರೆ  ಎಂಬ ಗಾಪಿಸ್ ಹರಡಿತ್ತು, ಆದರೆ ಇದಕ್ಕೆಲ್ಲಾ ಪೂರ್ಣ ವಿರಾಮ ನೀಡಿರುವ ಚಿತ್ರತಂಡ ಇದೀಗ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಗೊಳಿಸಿದ್ದು, ಚಿತ್ರದಲ್ಲಿ ವೈ ಎಸ್ ಆರ್ ಅವರ ಪತ್ನಿ ವಿಜಯಮ್ಮರ ಪಾತ್ರವನ್ನು ರಮ್ಯಾಕೃಷ್ಣ ನಟಿಸಲಿದ್ದು, ಮಮ್ಮುಟ್ಟಿ ವೈ ಎಸ್ ಆರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *