ಸುದ್ದಿಗಳು

ಪ್ರಭಾಸ್ ರಿಂದ , ರಾಣಾದಗ್ಗುಬಾಟಿ ಕಲಿತಿದ್ದೇನು ಗೊತ್ತೆ..?

ಹೈದ್ರಾಬಾದ್, ಮಾ.14:

ನಟ ರಣಾದಗ್ಗುಬಾಟಿ ಹಾಗೂ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬಾಹುಬಲಿ ಚಿತ್ರದ ಬಳಿಕ ಅತ್ಯುತ್ತಮ ಗೆಳೆಯರಾದವರು. ಇವರಿಬ್ಬರು ಆನ್ ಸ್ಕ್ರೀನ್  ಶೇರಿಂಗ್ ಕೂಡ ಪ್ರೇಕ್ಷಕನಿಗೆ ಇಷ್ಟವಾಗಿದ್ದು ಇದೇ ಚಿತ್ರದಲ್ಲಿ. ರಾಜಮೌಳಿ ನಿರ್ದೇಶನದ ಈ ಚಿತ್ರ ಇಬ್ಬರಿಗೂ ಸಿನಿರಂಗದಲ್ಲಿ ಅತ್ಯುತ್ತಮ ಬ್ರೇಕ್ ನೀಡಿದ ಚಿತ್ರ. ಇಡೀ ವಿಶ್ವದಲ್ಲೇ ಈ ಚಿತ್ರ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಲ್ಲದೆ, ದಕ್ಷಿಣ ಭಾರತದ ನಟರನ್ನು ಜಗತ್ತಿಗೆ ಪರಿಚಯಿಸಿತ್ತು.  ಬಾಹುಬಲಿ ಚಿತ್ರಕ್ಕಾಗಿ ಅವರಿಬ್ಬರು ಬರೋಬ್ಬರಿ 5 ವರ್ಷಗಳನ್ನು ಜೊತೆಯಾಗಿ ಕಳೆದಿದ್ದಾರೆ. ಎರಡು ಸರಣಿಗಳಲ್ಲಿ ಮೂಡಿ ಬಂದ ಚಿತ್ರದ ಚಿತ್ರೀಕರಣ ಸಾಗಿದ್ದು ಬರೋಬ್ಬರಿ 5 ವರ್ಷಗಳು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ ಪ್ರಭಾಸ್ , ಬಾಹುಬಲಿ ಚಿತ್ರದ ಸೆಟ್ ನಲ್ಲೇ ನನ್ನ ಮೂರು ನಾಲ್ಕು ಹುಟ್ಟುಹಬ್ಬಗಳು ಕೂಡ ನೆರವೇರಿದ್ದವು ಎಂದಿದ್ದರು.

ಚಿತ್ರೀಕರಣದ ಅವಧಿಯಲ್ಲಿ ಇವರಿಬ್ಬರ ನಡುವೆ ಹೆಚ್ಚಿದ ಬಾಂಧವ್ಯ

ಅಂದಹಾಗೆ ಬಾಹುಬಲಿ ಚಿತ್ರ ಸೂಪರ್ ಹಿಟ್ ಆಗಿದ್ದು ಒಂದೆಡೆಯಾದರೆ ಕೇವಲ ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕನನ್ನು ತೆರೆ ಮೇಲೆರಂಜಿಸುವ ಈ ಚಿತ್ರದ ಚಿತ್ರೀಕರಣ ನಡೆಯಲು ತೆಗೆದುಕೊಂಡಿದ್ದು ಬರೋಬ್ಬರಿ ಐದು ವರ್ಷಗಳು. ಈ  ಐದು ವರ್ಷಗಳಲ್ಲಿ ಇಡೀ ಚಿತ್ರ ತಂಡವೇ ಒಂದು ಕುಟುಂಬದಂತಿತ್ತು. ಅದರಲ್ಲೂ ಪ್ರಭಾಸ್ ಹಾಗೂ ರಾಣಾ ನಡುವಿನ ಬಾಂಧವ್ಯ ಗಟ್ಟಿಯಾಗಿದೆಯಂತೆ.  ಬಾಹುಬಲಿ ಹಾಗೂ ಬಲ್ಲಾಳ ದೇವನ ಪಾತ್ರದಲ್ಲಿ ಮಿಂಚಿದ ಈ ಜೋಡಿ ದಿನದಿಂದ ದಿನಕ್ಕೆ ಹೆಚ್ಚು ಆತ್ಮೀಯರಾಗುತ್ತಿದ್ದಾರಂತೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಾಣಾದಗ್ಗುಬಾಟಿ, ರೆಬೆಲ್ ಸ್ಟಾರ್ ಅವರನ್ನು ಹೊಗಳಿದ್ದಾರೆ. ನಾನು ಪ್ರಭಾಸ್ ಅವರಿಂದ ಕಲಿತಿದ್ದು ಹೆಚ್ಚಾಗಿಯೇ ಇದೆ. ಅದರಲ್ಲೂ ಪ್ರಭಾಸ್ ಅವರ ತಾಳ್ಮೆ ನಿಜಕ್ಕೂ ಅದ್ಬುತ. ನಾನು ಪ್ರಭಾಸ್ ಅವರಿಂದ ತಾಳ್ಮೆಯನ್ನ ಕಲಿತ್ತಿದ್ದೇನೆ.  ಬಾಹುಬಲಿ ಚಿತ್ರಕ್ಕಾಗಿ ಅವರು ಬರೋಬ್ಬರಿ 5 ವರ್ಷ ವ್ಯಯಿಸಿದ್ದಾರೆ. ಅವರ ತಾಳ್ಮೆಗೆ ಇದು ಅತ್ಯಂತ ದೊಡ್ಡ ಉದಾಹರಣೆ. ಆ ಐದು ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಇನ್ನಷ್ಟು ದುಡ್ಡು ಮಾಡುವ ಅವಕಾಶ ಪ್ರಭಾಸ್ ಗಿತ್ತು. ಆದರೆ ಅವರು ಆಯ್ಕೆ ಮಾಡಿದ್ದು ಕ್ವಾಲಿಟಿ ಮತ್ತು ಕ್ವಾಂಟಿಟಿ. ಎಂದು ತನ್ನ ಗೆಳೆಯನನ್ನು ಹಾಡಿಹೊಗಳಿದ್ದಾರೆ ರಾಣಾ.

ಮಾಧ್ಯಮಗೋಷ್ಠಿಯಲ್ಲಿ ಆರ್ ಆರ್ ಆರ್ ಬಗ್ಗೆ ಮಾಹಿತಿ ಬಿಟ್ಟಿಕೊಟ್ಟ ರಾಜಮೌಳಿ!!

#balkaninews #ranadaggubatti #bahubali #prabhas #prabhasandranadaggubatti

Tags

Related Articles