ಸುದ್ದಿಗಳು

ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡ ‘ರಣರಣಕ’

ಕುತೂಹಲ ಮೂಡಿಸಿರುವ ಸಿನಿಮಾ

ಬೆಂಗಳೂರು.ಜ.11: ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಕುತೂಹಲ ಮೂಡಿಸಿರುವ ‘ರಣರಣಕ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣವನ್ನು ನೀಡಿದೆ.

ಚಿತ್ರದ ಬಗ್ಗೆ

ಸುಧಾಕರ್ ಬನ್ನಂಜೆ ನಿರ್ದೇಶನ ಮಾಡಿರುವ ಈ ಚಿತ್ರದ ಕಥೆಯನ್ನು ದಿವಾಕರ್ ಎನ್ ಬರೆದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್ , ಅನುರಾಧ ಭಟ್, ಅಜಯ್ ವಾರಿಯರ್ , ರಾಜೇಶ್ ರಾಮನಾಥ್ ದಿವಾಕರ್ ಎನ್ ಹಾಡಿದ್ದಾರೆ.

ತಾರಾಬಳಗ

ಚಿತ್ರದಲ್ಲಿ ಶಶಿರಾಜ್, ಸಂಭ್ರಮ ಗೌಡ, ಶೋಭರಾಜ್, ಟೆನಿಸ್ ಕೃಷ್ಣ, ಬಿರಾದಾರ್ ಸಿದ್ದು, ಮೂಲಿಮನಿ, ಐಶ್ವರ್ಯ, ಶಿಲ್ಪಾ, ಮೇಘನಾ, ಶೃತಿ ನಾಯಕ್, ಮೂರ್ತಿ ಕಾರ್ಕಳ, ಶೇಖರ್ ಭಂಡಾರಿ, ರಾಜಾರಾಂ ಶೆಟ್ಟಿ ಉಪ್ಪಳ, ಮೈಕೋ ಮಂಜು, ಪ್ರದೀಪ್ ಭಟ್, ಮಾಸ್ಟರ್ ಪ್ರೇರಣ್ , ಮಾಸ್ಟರ್ ದೀಪಕ್ , ಸುದೇಶ್ ತಾರಾನಾಥ್, ದುರ್ಗಾ ಪ್ರಶಾಂತ್, ಸುಧಾಕರ್ , ಶ್ರೀನಿವಾಸ ಗೌಡ, ನವೀದ್, ಪುಷ್ಪ, ನಾರಾಯಣ, ಕಿಶನ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಹೆಸರಿನ ಬಗ್ಗೆ

ಚಿತ್ರಕ್ಕೆ ‘ರಣರಣಕ’ ಎಂಬ  ಶೀರ್ಷಿಕೆ ಇಟ್ಟಿದ್ದಕ್ಕೆ ನಿರ್ದೇಶಕರು ಹೀಗೆ ಹೇಳುತ್ತಾರೆ, “ ರಣರಣಕ  ಎಂಬ ಪದಕ್ಕೆ ನಿಘಂಟಿನಲ್ಲಿ ವಿಶೇಷ ಅರ್ಥವಿದೆ. ಅತಿಯಾದ ಕಾತುರವನ್ನು ಹೀಗೆ ಕರೆಯುತ್ತಾರೆ. ಅಲ್ಲದೇ, ಪ್ರೀತಿಸಿದವಳು ಕೈಕೊಟ್ಟಾಗ ಆ ಪ್ರೇಮಿಗಳು ಅನುಭವಿಸುವ ವೇದನೆಗೂ ಕೂಡ ಇದೇ ಹೆಸರಿನಲ್ಲಿ ಕರೆಯುತ್ತಾರೆ. ಸಿನಿಮಾದ ಕಥೆಯಲ್ಲೂ ಈ ವೇದನೆಯಿದೆ. ಹಾಗಾಗಿ ಇಂಥದ್ದೊಂದು ಶೀರ್ಷಿಕೆ ಇಡಬೇಕಾಯಿತು’

#ranakanaka #balkaninews #filmnews, #kannadasuddigalu,

Tags