ಸುದ್ದಿಗಳು

‘ರಣಂ’ ಚಿತ್ರದಲ್ಲಿ ಬಾಲಿವುಡ್ ಹೀರೋ

ಬಾಲಿವುಡ್ ನ ಅರ್ಬಾಜ್ ಖಾನ್ ಈಗ ಕನ್ನಡಕ್ಕೆ

ಬೆಂಗಳೂರು, ಅ.25: ಚಂದನವನದ ಮಾರುಕಟ್ಟೆ ಹಿರಿದಾಗುತ್ತಿದೆ. ಬಾಲಿವುಡ್ ನ ಖ್ಯಾತ ಕಲಾವಿದರು ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಸುನೀಲ್ ಶೆಟ್ಟಿ, ವಿವೇಕ್ ಓಬೆರಾಯ್ ರಂತೆ ಖ್ಯಾತ ಹಿಂದಿ ನಟರೊಬ್ಬರು ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ವಿ. ಸಮುದ್ರ ನಿರ್ದೇಶನ ಮಾಡುತ್ತಿರುವ ಮಲ್ಟಿ ಸ್ಟಾರರ್ ಚಿತ್ರ ‘ರಣಂ’. ಸದ್ಯ ಈ ಚಿತ್ರವು ಸದ್ಯ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಚೇತನ್ ಮತ್ತು ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ನ ಅರ್ಬಾಜ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್ ನ ಯಶಸ್ವಿ ನಟ

ಅರ್ಬಾಜ್ ಖಾನ್ ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರೆಡಿ’, ‘ದಬಂಗ್’, ‘ದಬಂಗ್ 2’ ಸೇರಿ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಒಂದೊಮ್ಮೆ ಅರ್ಬಾಜ್ ‘ರಣಂ’ ಚಿತ್ರದಲ್ಲಿ ನಟಿಸುವುದು ಖಚಿತ ಎಂದಾದರೆ, ಇದು ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ.

ದ್ವಿ ಭಾಷೆಯ ಸಿನಿಮಾ

ಅಂದ ಹಾಗೆ ಈ ಚಿತ್ರವು ಕನ್ನಡದ ಜೊತೆಗೆ ತೆಲುಗಿನಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ. ಕೆ,ಆರ್ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ಆರ್ ಎಸ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚೇತನ್ ಕ್ರಾಂತಿಕಾರಿ ಪಾತ್ರ ಮಾಡುತ್ತಿದ್ದಾರೆ. ಚಿರಂಜೀವಿ ಅವರದ್ದು ಪೊಲೀಸ್ ಅವತಾರ ತಾಳಿದ್ದಾರೆ. ನೀತು ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪೋಲೀಸ್ ಪಾತ್ರದಲ್ಲಿ ಚಿರು ಸರ್ಜಾ

ಇನ್ನು ನಟ ಚಿರಂಜೀವಿ ಸರ್ಜಾ ಈ ಹಿಂದೆ ‘ದಂಡಂ ದಶಗುಣಂ’ ನಲ್ಲಿಯೂ ಪೋಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಚಿತ್ರದಲ್ಲೂ ಸಹ ಅವರು ಪೋಲೀಸ್ ಅಧಿಕಾರಿಯಾಗಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿದೆ.

Tags

Related Articles