ಸುದ್ದಿಗಳು

ನ್ಯೂಯಾರ್ಕ್ ನಲ್ಲಿ ಹೊಸ ವರ್ಷ ಆಚರಿಸಲಿರುವ ರಣ್ಬೀರ್ – ಆಲಿಯಾ ….?

'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಿರತರಾದ ಬಾಲಿವುಡ್ ಕ್ಯೂಟ್ ಜೋಡಿ

ಮುಂಬೈ, ಡಿ.5: ಸಿನಿಮಾ ವೃತ್ತಿಯಲ್ಲಿ ಹಿಟ್ ಚಿತ್ರಗಳ ಮೂಲಕ ಬಾಲಿವುಡ್ ಕ್ಯೂಟ್ ನಟಿ ಆಲಿಯಾ ಭಟ್ ಸುದ್ದಿ ಮಾಡಿದ್ದಾಳೆ. ಅದೇ ರೀತಿ ಯಶಸ್ವಿ ನಟ ರಣ್ಬೀರ್ ಕಪೂರ್ ಜೊತೆ ಈಕೆಯ ಪ್ರೇಮ ಸಂಬಂಧದ ಬಗ್ಗೆಯೂ ಬಹಳಷ್ಟು ಗುಸುಗುಸು ಸುದ್ದಿ ಬಿಟೌನ್ ನಲ್ಲಿ ಹಬ್ಬಿದೆ. ಇವೆಲ್ಲದರ ನಡುವೆ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ತಮ್ಮ ಮುಂಬರುವ ಚಿತ್ರ ‘ಬ್ರಹ್ಮಾಸ್ತ್ರ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಬ್ಯುಸಿ …!

‘ಬ್ರಹ್ಮಾಸ್ತ್ರ’ ಚಿತ್ರವನ್ನು ಆಯನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಆಲಿಯಾ ಜೊತೆಗೆ ರಣ್ಬೀರ್ ಕಪೂರ್ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ರಣ್ಬೀರ್ ಚಿತ್ರದಲ್ಲಿ ಆಲಿಯಾ ಅಭಿನಯಿಸುತ್ತಿದ್ದಾರೆ. ‘ಬ್ರಹ್ಮಾಸ್ತ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ರಣ್ಬೀರ್ ಮತ್ತು ಅಲಿಯಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸುಳಿವುಗಳನ್ನು ನೀಡದೆ ರಹಸ್ಯವಾಗಿ ಕಾಪಾಡಿಕೊಳ್ಳುತ್ತ ಬಂದಿದ್ದಾರೆ.ಹೊಸವರ್ಷಕ್ಕೆ ಈ ಜೋಡಿಯ ಪ್ಲಾನ್ …!

ಕ್ರಿಸ್ ಮಸ್ ಮತ್ತು ಹೊಸವರ್ಷದ ಸಂಭ್ರಮಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಇದಕ್ಕಾಗಿ ರಣ್ವೀರ್ ಮತ್ತು ಆಲಿಯಾ ಜೊತೆಗೂಡಿ ಸಂಭ್ರಮಾಚರಣೆ ಮಾಡುತ್ತಾರೆ ಎನ್ನಲಾಗಿದೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಕ್ರಿಸ್ಮಸ್  ರಜೆಗಾಗಿ ಈ ಜೋಡಿ ನ್ಯೂಯಾರ್ಕ್ ಗೆ ಹಾರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ರಣ್ಬೀರ್ ಅವರ ತಂದೆ ರಿಷಿ ಕಪೂರ್ ಕೂಡ ಅಲ್ಲೇ ಇದ್ದು, ಆರೋಗ್ಯದ ಸಲುವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags