ಸುದ್ದಿಗಳು

ರಣಬೀರ್-ಆಲಿಯಾ ಫೇಕ್ ವೆಡ್ಡಿಂಗ್ ಕಾರ್ಡ್ ವೈರಲ್: ಕಿಡಿಗೇಡಿಗಳ ಕೃತ್ಯ ಶಂಕೆ

ಕಳೆದ ವರ್ಷ ಮೇ ತಿಂಗಳು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪ್ರೀತಿಸುತ್ತಿರುವುದನ್ನು ಅಧಿಕೃತಗೊಳಿಸಿದ ನಂತರ ಅವರ ವಿವಾಹ ಕುರಿತಾದ ಉಹಾಪೋಹಗಳು ಹೆಚ್ಚಾಗುತ್ತಿವೆ.

ಈಗ ಮದುವೆಯ ಕಾರ್ಡ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಆಹ್ವಾನ ಪತ್ರಿಕೆಯಲ್ಲಿ ಹೀಗಿದೆ…“ಶ್ರೀಮತಿ ನೀತು ಮತ್ತು ಶ್ರೀ ರಿಷಿ ಕಪೂರ್ ಅವರ ಮಗ ರಣಬೀರ್ ಹಾಗೂ ಶ್ರೀಮತಿ ಸೋನಿ ಮತ್ತು ಮುಖೇಶ್ ಭಟ್ ಅವರ ಪುತ್ರಿ  ಅಲಿಯಾ ಜನವರಿ 22, 2020, ಬುಧವಾರ ಸಂಜೆ 5:00 ರಂದು ನಡೆಯುವ ಮದುವೆ ಸಮಾರಂಭಕ್ಕೆ ನಿಮ್ಮನ್ನು ಸೌಹಾರ್ದಯುತವಾಗಿ ಆಹ್ವಾನಿಸುತ್ತಾರೆ” ಜೋಧ್ ಪುರದ ಉಮೈದ್ ಭವನ ಅರಮನೆಯಲ್ಲಿ ಸಮಾರಂಭ ನಡೆಯಲಿದೆ.

ಈ ಕಾರ್ಡ್ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ನಂತರ ಸರಿಯಾಗಿ ಪರಿಶೀಲಿಸಿದಾಗ ಇದು ಫೇಕ್ ಕಾರ್ಡ್ ಎಂದು ತಿಳಿದುಬಂದಿದೆ.

Image result for ranbir alia fake wedding card

ಮೊದಲನೆಯದಾಗಿ, ಆಲಿಯಾಳನ್ನು ‘ಅಲಿಯಾ’ ಎಂದು ಉಚ್ಚರಿಸಲಾಗಿದೆ. ಅಷ್ಟೇ ಅಲ್ಲ ಇದು ಕಿಡಿಗೇಡಿಗಳ ಕೃತ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.  ಎರಡನೆಯದಾಗಿ, ಆಲಿಯಾಳ ತಂದೆಯ ಹೆಸರನ್ನು ಮಹೇಶ್ ಭಟ್ ಬದಲಿಗೆ ‘ಮುಖೇಶ್ ಭಟ್’ ಎಂದು ಬರೆಯಲಾಗಿದೆ. ಇಲ್ಲಿ ವ್ಯಾಕರಣ ದೋಷ ಸ್ಪಷ್ಟವಾಗಿ ಕಂಡುಬರುತ್ತದೆ.

ಅದೇನೇ ಇದ್ದರೂ, ಕಾರ್ಡ್ ರಣಬೀರ್ ಮತ್ತು ಆಲಿಯಾ ಅವರ ಹಲವಾರು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿರುವುದಂತೂ ಸುಳ್ಳಲ್ಲ.

ನಾನು ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿದ್ದೆ ಎಂದ ಪಾಕಿಸ್ತಾನಿ ಫಿಲ್ಮ್ ಮೇಕರ್

#balkaninews #ranbir kapoor  #aliabhatt #weddingcard  #viral

Tags