ಸುದ್ದಿಗಳು

ಸ್ಯಾಂಡಲ್ ವುಡ್ ‘ರಾಂಧವ’ನಿಗೆ ಜೊತೆಯಾದ ‘ಟೈಟಾನಿಕ್’ ಸುಂದರಿ

ಚಿತ್ರದಲ್ಲಿನ ಬ್ರಿಟಿಷ್ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಕೇಟ್ ವಿನ್ಸ್ ಲೆಟ್

ಬೆಂಗಳೂರು.ಫೆ.16

ಕನ್ನಡ ‘ಬಿಗ್ ಬಾಸ್’ ಖ್ಯಾತಿಯ ಭುವನ್ ನಾಯಕನಟರಾಗಿ ನಟಿಸುತ್ತಿರುವ ‘ರಾಂಧವ’ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈಗ ಮತ್ತೊಂದು ವಿಷಯಕ್ಕಾಗಿ ಸದ್ದು ಮಾಡುತ್ತಿದೆ.

ಬ್ರಿಟಿಷ್ ಮಹಿಳೆ

ಚಿತ್ರದಲ್ಲಿ ನಾಯಕ ಭುವನ್ ಗೆ ಮೂರು ಗೆಟಪ್ ಗಳು ಇರಲಿವೆ. ಅದರಲ್ಲಿ ರಾಜನ ಪಾತ್ರವೂ ಒಂದು. ಜೊತೆಗೆ ಚಿತ್ರದಲ್ಲಿ ಬ್ರಿಟಿಷ್ ಮಹಿಳೆಯ ಪಾತ್ರವೂ ಮುಖ್ಯವಾಗಿರುತ್ತದೆ. ಹಾಗಾದರೆ ಈ ಪಾತ್ರವನ್ನು ಯಾರು ಮಾಡಲಿದ್ದಾರೆ.? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಎದುರಾದಾಗ ಅವರಿಗೆ ಹೊಳೆದಿದ್ದು, ‘ಟೈಟಾನಿಕ್’ ನಾಯಕಿ ಕೇಟ್ ವಿನ್ಸ್ ಲೆಟ್.

‘ಟೈಟಾನಿಕ್’ ನಾಯಕಿ

ಹೌದು, 1997ರಲ್ಲಿ ತೆರೆಕಂಡಿದ್ದ ಹಾಲಿವುಡ್ನ ‘ಟೈಟಾನಿಕ್’ ಚಿತ್ರದಲ್ಲಿ ರೋಸ್ ಪಾತ್ರ ಮಾಡುವ ಮೂಲಕ ಜಗದ್ವಿಖ್ಯಾತಿ ಪಡೆದುಕೊಂಡರು ನಟಿ ಕೇಟ್ ವಿನ್ಸ್ ಲೆಟ್. ಇವರಿಗೆ ಈಗಲೂ ಸಿಕ್ಕಾಪಟ್ಟೆ ಬೇಡಿಕೆಯಿದೆ. ಈ ಸಿನಿಮಾ ತೆರೆ ಕಂಡು 22 ವರ್ಷಗಳಾದರೂ ಸಹ ಇಂದಿಗೂ ಮನೆ ಮಾತಾಗಿದೆ. ಸದ್ಯ ಜೇಮ್ಸ್ ಕೆಮರಾನ್ ನಿರ್ದೇಶನದ ‘ಅವತಾರ್ 2’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಅವರು ಬಿಜಿ ಇದ್ದಾರೆ. ಹೀಗಿರುವಾಗ ಕನ್ನಡದ ‘ರಾಂಧವ’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಭುವನ್ ಮಾಡಿದ ಕೋರಿಕೆ

ಅಷ್ಟಕ್ಕೂ ಅವರು ಚಂದನವನದಲ್ಲಿ ನಟಿಸಲು ಕಾರಣ ಭುವನ್. ಹೌದು, ಭುವನ್ ಈ ಮೊದಲು ಸ್ಟೆಲ್ಲಾ ಆ್ಯಡ್ಲರ್ ಆ್ಯಕ್ಟಿಂಗ್ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ನಟನೆ ಕಲಿತಿದ್ದರು. ಈ ವೇಳೆ ಕೇಟ್ ಮೆಂಟರ್ ಆಗಿದ್ದರಂತೆ. ಹಾಗಾಗಿ, ‘ರಾಂಧವ’ ಚಿತ್ರದಲ್ಲಿ ಬುರವ ಬ್ರಿಟಿಷ್ ಮಹಿಳೆಯ ಪಾತ್ರ ನಿರ್ವಹಿಸುವಂತೆ ಅವರ ಬಳಿ ಕೋರಲಾಗಿತ್ತು. ಇದಕ್ಕೆ ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ.

‘ಯುವರತ್ನ’ ದಲ್ಲಿ ಮತ್ತೆ ಒಂದಾದ ‘ಡಾಲಿ-ಚಿಟ್ಟೆ’!!

#randhava, #balkaninews #filmnews, #kannadasuddigalu, #bhuvan, #katewinslate, #titanic

Tags

Related Articles