ಸುದ್ದಿಗಳು

‘ರಂಗಮಂದಿರ’ದಲ್ಲಿ ಮೂವರು ನಾಯಕಿಯರು…!!!

ನಿರ್ಮಾಪಕ ಆಶು ಬೇದ್ರ ನಟನೆಯ ಸಿನಿಮಾ

ಬೆಂಗಳೂರು,ಸ.12: ಡಿ. ಬಾಸ್ ದರ್ಶನ್ ಅವರ ‘ ಸ್ನೇಹಾನಾ ಪ್ರೀತಿನಾ’ ಹಾಗೂ ‘ಅರ್ಜುನ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶಾಹುರಾಜ್ ಶಿಂಧೆ ‘ರಂಗಮಂದಿರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಇನ್ನು ಈ ಚಿತ್ರಕ್ಕೆ ನಾಯಕನಾಗಿ ‘ರಾಧಾ ಕಲ್ಯಾಣ’, ‘ಸರ್ಪ ಸಂಪದ’ ಸೇರಿದಂತೆ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ ಆಶು ಬೆದ್ರ ನಟಿಸುತ್ತಿದ್ದಾರೆ.

ಚಿತ್ರದ ಬಗ್ಗೆ

‘ರಂಗಮಂದಿರ’ ಎಂಬ ಹೆಸರಿನ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಶೃತಿ ಪ್ರಕಾಶ್, ಅನುಪಮಗೌಡ ನಟಿಸುತ್ತಿದ್ದು ಮತ್ತೊಬ್ಬ ನಾಯಕಿಯ ಹುಡುಕಾಟ ನಡೆಸಿದೆ ಚಿತ್ರತಂಡ. ಇನ್ನು ನಾಯಕನಾಗಿರುವ ಆಶು ಬೇದ್ರ ಈ ಹಿಂದೆ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಸೆಪ್ಟೆಂಬರ್ 14 ರಿಂದ ಚಿತ್ರೀಕರಣ

ಇನ್ನು ಈ ಚಿತ್ರವು ಗಣೇಶ ಹಬ್ಬದ ನಂತರ ನಂತರ ಅಂದರೆ ಸೆಪ್ಟೆಂಬರ್ 14 ರಿಂದ ಚಿತ್ರೀಕರಣ ಆರಂಭವಾಗಲಿದೆ. ಇನ್ನು ‘ಚೂರಿಕಟ್ಟೆ’ ಖ್ಯಾತಿಯ ಪ್ರವೀಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಉಳಿದಂತೆ ತೆಲಗು ನಟ ಸುಮನ್, ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್ ಅಭಿನಯಿಸುತ್ತಿದ್ದು, ಜೆಸ್ಸಿ ಗಿಪ್ಟ್ ಸಂಗೀತ ಸಂಯೋಜನೆ ಕಾರ್ಯ ನಿರ್ವಹಿಸುತ್ತಿದ್ದಾರೆ.

Tags

Related Articles