ಸುದ್ದಿಗಳು

ರಂಗಾಯಣ ರಘು ಹಾಡಿರುವ ‘ಕಲರ್ ಕಲರ್ ಕನಸು’ ಹಾಡು ಕೇಳಿ

ಪೂರ್ವಿ ಪ್ರೋಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರುವ ‘ಭಾನು ವೆಡ್ಸ್ ಭೂಮಿ’ ಚಿತ್ರದ ‘ಕಲರ್ ಕಲರ್ ಕನಸು’ ಎಂಬ ಸಾಲಿನ ಹಾಡು ರಿಲೀಸ್ ಆಗಿದ್ದು, ನೋಡುಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುತ್ತಿದೆ.

ವಿಶೇಷವೆಂದರೆ, ಗೌಸ್ ಫೀರ್ ರಚಿಸಿರುವ ಈ ಹಾಡಿಗೆ ನಟ ರಂಗಾಯಣ ರಘು ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ವಿಡಿಯೋದಲ್ಲಿ ಶೋಭರಾಜ್ ನರ್ತಿಸಿದ್ದು, ನೋಡಲು ಮನಮೋಹಕವಾಗಿದ್ದು, ಅಷ್ಟೇ ಕಲರ್ ಪುಲ್ ಆಗಿ ಮೂಡಿ ಬಂದಿದೆ. ಇನ್ನು ಚಿತ್ರಕ್ಕೆ ಎ ಎಮ್ ನೀಲ್ ಸಂಗೀತ ನೀಡಿದ್ದಾರೆ.

ಸದ್ಯ ಹಾಡಿನಿಂದ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ರಂಗಾಯಣ ರಘು ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹಾಗೆಯೇ ಇದೇ ಮೊದಲ ಬಾರಿಗೆ ಅವರು ಹಾಡಿಗೆ ಧ್ವನಿಯಾಗಿದ್ದು, ಚಿತ್ರದಲ್ಲಿ ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಸೇರಿದಂತೆ ಅನೇಕರಿದ್ದಾರೆ.

ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದ್ದು ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ಭಾನು ಮತ್ತು ಭೂಮಿ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ. ಈ ಚಿತ್ರವನ್ನು ಜಿ.ಕೆ.ಆದಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಫೇಮಸ್ ಆಯ್ತು ಕರೀನಾ ಕಪೂರ್ ಸ್ಲಿಂಗ್ ಬ್ಯಾಗ್!

#rangayanaraghu #singning #bhanuwedsbhoomi #movie #balkaninews #kannadasuddigalu

Tags