ಸುದ್ದಿಗಳು

ಸಖತ್ ವರ್ಕೌಟ್ ಮೂಡಿನಲ್ಲಿ ರಣವೀರ್ ಸಿಂಗ್..

ಮುಂಬೈ,ಆ.21: ಸಿನಿಮಾ ನಟರು ಚಿತ್ರೀಕರಣದಲ್ಲಿ ಎಷ್ಟೇ ನಿರತರಾಗಿದ್ದರೂ ಸರಿ, ಅವರು ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ.  ಸಿನಿಮಾ ಪಾತ್ರಗಳಿಗೆ ಬೇಕಂತೆ ಸಣ್ಣ – ದಪ್ಪ ಆಗುವುದು ಸರ್ವೇ ಸಾಮಾನ್ಯ.

ಫಿಟ್ ರಣವೀರ್

ಆ ಸಾಲಿನಲ್ಲಿ ರಣವೀರ್ ಸಿಂಗ್ ಕೂಡ ಒಬ್ಬರು. ರಣ್​ವೀರ್ ಸಿಂಗ್ ನಿನ್ನೆ ತಮ್ಮ ಟ್ವಿಟ್ಟರ್​​​ನಲ್ಲಿ ತಮ್ಮ ವರ್ಕೌಟ್ ಫೊಟೋವೊಂದನ್ನು ಶೇರ್ ಮಾಡಿದ್ದಾರೆ. ಆ ಫೋಟೋ ನೋಡಿದ  ಹುಡುಗಿಯರಂತೂ ವಾಹ್! ನನ್ನ ಮದುವೆ ಆಗುವ ಹುಡುಗ ಅಂದರೆ ಹೀಗಿರಬೇಕೆಂದು ತಮ್ಮ ಮನದಲ್ಲೇ ಲೆಕ್ಕಚಾರ ಹಾಕಲು ಶುರು ಮಾಡಿದ್ದಾರೆ. ಈಗ ರಣವೀರ್ ಫಿಟ್ ಇರಬೇಕು ಎಂಬ ಕಾರಣಕ್ಕೋ ಅಥವಾ ಮುಂದಿನ ಸಿನಿಮಾಗೋ ಗೊತ್ತಿಲ್ಲ, ಸಖತ್ ವರ್ಕೌಟ್ ಮಾಡಿ ಬಾಡಿ ಬಿಲ್ಡ್ ಮಾಡಿದ್ದಾರೆ. ಭಾರಿ ಮಸಲ್ಸ್ ಬಿಲ್ಡ್​ ಮಾಡಿರುವ ರಣ್​ವೀರ್ ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

‘ಟೆಂಪರ್’ ರಿಮೇಕ್

2015 ರಲ್ಲಿ ಬಿಡುಗಡೆಯಾದ ತೆಲುಗು ಬ್ಲಾಕ್​​ಬಸ್ಟರ್ ಸಿನಿಮಾ ‘ಟೆಂಪರ್’ ಈಗ ಹಿಂದಿಗೆ ‘ಸಿಂಬಾ’ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. ಈ ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಣ್​ವೀರ್ ಖಡಕ್ ಎಸಿಪಿ ಆಗಿ ನಟಿಸುತ್ತಿದ್ದಾರೆ. ರಣ್​ವೀರ್ ಜೊತೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಅಶುತೋಷ್ ರಾಣಾ, ಸುರೇಶ್ ಓಬೆರಾಯ್, ಸೋನುಸೂದ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.

Tags