ಸುದ್ದಿಗಳು

ಸಲಿಂಗ ಕಾಮಿಗಳು ಇವರೇನಲ್ಲ…, ಅಭಿಮಾನದಿಂದ ಮುತ್ತಿಟ್ಟರಷ್ಟೆ!?!

ಕರಣ್ ಕೆನ್ನೆಗೆ ರಣವೀರ್ ಮುತ್ತು.. 377ಕ್ಕೆ ಇದಕ್ಕಿಂತ ಬೇಕೆ ಸಾಕ್ಷಿ?

ಮುಂಬೈ,ಸೆ.10: ಬಾಲಿವುಡ್​ ನಟ ರಣವೀರ್ ಸಿಂಗ್, ಈಗ ಸಿಂಬಾ ಚಿತ್ರದಲ್ಲಿ ಸಕ್ರಿಯರಾಗಿದ್ದಾರೆ, ಸಿಂಬಾ ಚಿತ್ರದ ಶೂಟಿಂಗ್ ಸೆಟ್ ಗೆ ಕರಣ್ ಜೋಹರ್ ಭೇಟಿ ನೀಡಿದ್ದರು.

ಹೌದಲ್ವಾ, ಭಾನುವಾರ ‘ಸಿಂಬಾ’ ಚಿತ್ರದ ಶೂಟಿಂಗ್​ ಸೆಟ್​ಗೆ ಕರಣ್​ ಭೇಟಿ ನೀಡಿದ್ದರು. ಸೆಟ್​ಗೆ ಆಗಮಿಸಿದ ಕರಣ್ ಗೆ ರಣವೀರ್​ ಜೋರಾಗಿ ಬಲ​ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ವೇಳೆ ಚಿತ್ರತಂಡದ ಇತರರು ಹಾಜರಿದ್ದರು. ರಣವೀರ್ ಮುತ್ತಿಕ್ಕಿದ್ದೇ ಈಗ ದೊಡ್ಡ ಸುದ್ದಿಯಾಗಿದೆ.

ಮುತ್ತಿಕ್ಕಿದ ರಣವೀರ್

ಈ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ರಣವೀರ್. ಫೋಟೋ ಹಾಕಿದ್ದೇ ತಡ, ಕಮೆಂಟ್​ಗಳ ಸುರಿಮಳೆಯೇ ಹರಿದು ಬಂದಿದೆ. ಈ ಫೋಟೋ ನೋಡಿದ ತಕ್ಷಣ ನೆನಪಾಗುವುದು  377 ಸೆಕ್ಷನ್. ‘377 ಸೆಕ್ಷನ್ ರದ್ದು ಪಡಿಸಿರುವುದು  ಎಲ್ಲರಿಗೂ ಸಂತೋಷ ತಂದಿದೆ. ಇದರಿಂದ ನಿಮಗೂ ಸಂತೋಷ ತಂದಿದೆ ಎಂದು ಗೊತ್ತಾಗುತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ..

Image result for ranveer kissing karan johar

ಸಲಿಂಗಕಾಮಕ್ಕೆ ಸೆಕ್ಷನ್ 377 ಅನ್ವಯವಾಗುವುದಿಲ್ಲ. ಸಮಾಜದಲ್ಲಿ ಎಲ್ಲರಂತೆ ಸಮಾನ ರೀತಿಯ ಹಕ್ಕನ್ನು ಸಲಿಂಗಕಾಮಿಗಳು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಹಲವು ನಟ-ನಟಿಯರು ಸೆಕ್ಷನ್ 377 ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ..

Tags