ಸುದ್ದಿಗಳು

ರಣವೀರ್ ಫೋಟೋಗೆ ದೀಪಿಕಾ ಫಿದಾ!!

ಮುಂಬೈ,ಆ.07: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಬಿ ಟೌನ್ ನ ಪ್ರಣಯ ಪಕ್ಷಿಗಳು. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಮೆಂಟ್ ,ಮಾಡುತ್ತಿರುತ್ತಾರೆ. ಇವರ ಕಮೆಂಟ್ ಎಲ್ಲರ ಗಮನ ಸೆಳೆಯುತ್ತಿರುತ್ತದೆ.

ಸೋಮವಾರ ರಣಬೀರ್ ಕಪೂರ್ ನೀಲಿ ಬಣ್ಣದ ಸೂಟ್ ನಲ್ಲಿರುವ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೋಕ್ಕೆ ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದರಲ್ಲಿ ದೀಪಿಕಾ ಕೂಡ ಹಿಂದೆ ಬಿದ್ದಿಲ್ಲ. ರಣವೀರ್ ಫೋಟೋಕ್ಕೆ “ ಮಂಡೆ ಬ್ಲೂಸ್?” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದಕ್ಕೆ ದೀಪಿಕಾ ಉಫ್!! ನೆವರ್!!!?” ಎಂದು ಕಮೆಂಟ್ ಮಾಡಿದ್ದಾಳೆ.

ಕೆಲ ದಿನಗಳ ಹಿಂದಷ್ಟೇ ಫ್ಲೋರಿಡಾಕ್ಕೆ ತೆರಳಿ ರಜೆ ಎಂಜಾಯ್ ಮಾಡಿ ಬಂದಿದ್ದಾರೆ. ಸದ್ಯ ರಣವೀರ್ ಗಲ್ಲಿ ಭಾಯ್, ಸಿಂಬಾ ಹಾಗೂ 83 ಚಿತ್ರಗಳಲ್ಲಿ ನಟಿಸುತ್ತಿದ್ದಾನೆ. ದೀಪಿಕಾ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ಇವರಿಬ್ಬರೂ ಇದೇ ನವೆಂಬರ್ ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇದೆ.

Monday Blues? ????

A post shared by Ranveer Singh (@ranveersingh) on

Tags