ಸುದ್ದಿಗಳು

ಇಂದು ಬಿಗ್ ಬಾಸ್ ಜೋಡಿಯ ವಿವಾಹ

ಅದ್ದೂರಿಯಾಗಿ ಮದುವೆ ಮಾಡಿಕೊಂಡ ನವಜೋಡಿ.

ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಗೌಡ ಅವರ ಪರಿಚಯ ಕನ್ನಡದ ರಿಯಾಲಿಟಿ ಶೋ “ಬಿಗ್ ಬಾಸ್ 5” ನಲ್ಲಿ ಪ್ರಾರಂಭವಾಗಿ, ಪರಿಚಯ ಪ್ರೀತಿಗೆ ತಿರುಗಿ, ಇಂದು ಅವರಿಬ್ಬರ ವಿವಾಹ ನಡೆದಿದೆ. ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ ನಡೆಯಿತು. ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಂಡ ನವಜೋಡಿ.

 ನೂತನ ದಂಪತಿಗೆ ಬಂಧುಗಳು ಹಾಗೂ ಸ್ನೇಹಿತರು ಧಾರೆ ಎರೆದು ಹಾರೈಸಿದ್ದಾರೆ.

ಬಹಳ ಕಡಿಮೆ ಸಮಯದಲ್ಲೇ ಸಂಗೀತದ ಅಲೆಯಿಂದ ಕನ್ನಡಿಗರ ಮನದಲ್ಲಿ ರ‍್ಯಾಪರ್ ಆಗಿ ನೆಲೆ ನಿಂತ ಚಂದನ್ ಹಾಗು ತನ್ನ ಮುಗ್ದತೆಯಿಂದಲೇ ಎಲ್ಲರನ್ನು ಸೆಳೆದು ಗೊಂಬೆ ಎಂದೇ ಕರೆಸಿಕೊ0ಡರು ನಿವೇದಿತಾ ಗೌಡ. ಯಾರ ಸಹಾಯವು ಇಲ್ಲದೆ ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡ ಅಪರೂಪದ ಜೋಡಿ ಇವರದ್ದು. ಇಂದು ಬೆಳಗ್ಗೆ ಶುಭಮುಹೂರ್ತದಲ್ಲಿ ಸಂಪ್ರದಾಯವಾಗಿ ಹಿರಿಯರ ಮುಂದೆ ಚಂದನ್ ಶೆಟ್ಟಿ, ನಿವೇದಿತಾಗೆ ತಾಳಿಯನ್ನು ಕಟ್ಟಿದ್ದಾರೆ.

 ಸಂಬಂಧಿಕರೊಡನೆ ನಿವೇದಿತ ಹಾಗೂ ಚಂದನ್​

ನೆನ್ನೆಯಷ್ಟೇ ಭರ್ಜರಿಯಾಗಿ ಅರತಕ್ಷತೆಯನ್ನು ನಡೆಸಿಕೊಂಡ ಜೋಡಿಗೆ , ಸಿನಿಮಾರಂಗದ ಹಲವು ಗಣ್ಯರು ಬಂದು ಆಶೀರ್ವದಿಸಿದ್ದಾರೆ. ಜಾತಿಯನ್ನುಮುರಿದು ಪ್ರೀತಿಯನ್ನು ಉಳಿಸಿಕೊಂಡ ಜೋಡಿ ಇವರಿಬ್ಬರದ್ದು, “ಜಾತಿ -ಮತ-ಧರ್ಮಗಳಿಗೆ ಪ್ರೀತಿಯನ್ನು ಬಲಿಕೊಡಬಾರದು” ಎಂಬ ಅಮೂಲ್ಯವಾದ ಸಂದೇಶದೊಂದಿಗೆ, ಈ ಜೋಡಿ ನಿಜವಾದ ಪ್ರೀತಿಗೆ ಉದಾಹರಣೆಯಾಗಿದೆ.

ವೇಣು ವಾಣಿ

#chandanshetty #niveditagowda #kanandasongs #balkaninews #rapperchandanshetty #gombeniveditagowda #sandalwood

Tags