ಸುದ್ದಿಗಳು

ಪುನರ್ವಸತಿ ಕೇಂದ್ರಕ್ಕೆ ತೆರಳಲಿರುವ ರ್ಯಾಪರ್ ಲಿಲ್ ಝಾನ್

ಅಮೇರಿಕನ್ ಗಾಯಕ ಮತ್ತು ರ್ಯಾಪರ್ ಲಿಲ್ ಝಾನ್

ನವೆಂಬರ್, 19: ರ್ಯಾಪರ್ ಲಿಲ್ ಝಾನ್ ಅವರು ದೀರ್ಘಕಾಲದ ಮಾದಕ ವಸ್ತು ಸೇವನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪುನರ್ವಸತಿ ಕೇಂದ್ರಕ್ಕೆ ತೆರಳಲು ನಿರ್ಧರಿಸಿದ್ದಾರೆ ಎಂದು ಯೋಜಿಸಿದ್ದಾರೆ ಎನ್ನಲಾಗಿದೆ.

ಲಿಲ್ ಝಾನ್ ಎ.ಕೆ.ಎ. ಡಿಯಾಗೋ ಲೀನೋಸ್ ಅವರು ಮುಂದಿನ ವಾರದಿಂದ ಪುನರ್ವಸತಿ ಕೇಂದ್ರಕ್ಕೆ ಹೋಗಲು ನಿರ್ಧರಿಸಿದ್ದಾರೆ. ಹಾಗಾಗಿ ಗುರುವಾರದಂದು ತಮ್ಮ ಹೊಸ ಹಾಡು ‘ಕ್ಸಾನಾರ್ಕಿ ಮಿಲಿಷಿಯಾ’ ವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಮುಂದಿನ ಮೂರು ದಿನಗಳ ನಂತರ ನಾನು ಪುನರ್ವಸತಿ ಕೇಂದ್ರಕ್ಕೆ ತೆರಳಲಿದ್ದೇನೆ. ಹಾಗಾಗಿ ಅಭಿಮಾನಿಗಳಿಗಾಗಿ ನನ್ನ ಹೊಸ ಹಾಡನ್ನು ಕೇಳಿಸಲು ಮುಂದಾಗಿದ್ದು, ಬಿಡುಗಡೆ ಮಾಡುತ್ತಿದ್ಧೇನೆ.  ಐ ಲವ್ ಯೂ ಫ್ಯಾನ್ಸ್” ಎಂದು ಬರೆದಿದ್ದಾರೆ.

‘ಕ್ಸಾನಾರ್ಕಿ ಮಿಲಿಷಿಯಾ’ ಹಾಡನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವ ರ್ಯಾಪರ್ ಲಿಲ್

ಈ ಹಿಂದೆ ರ್ಯಾಪರ್ ಸ್ನೇಹಿತ ಮ್ಯಾಕ್ ಮಿಲ್ಲರ್ ಅವರು ಅತಿಯಾದ ಮಾದಕ ವಸ್ತು ಸೇವನೆ ಚಟಕ್ಕೆ ಬಲಿಯಾಗಿ ದುರಂತ ಸಾವನ್ನಪ್ಪಿದ್ದರ ಪರಿಣಾಮವಾಗಿ ನವೆಂಬರ್ ನಲ್ಲಿ ಡ್ರಗ್ ಸಮಸ್ಯೆಯನ್ನು ಕೊನೆಗೊಳಿಸುವ ಬಗ್ಗೆ ಕ್ಸಾನ್ ಯೋಚಿಸಿದ್ದಾರೆ ಎಂದು ಟಿಎಂಜಡ್ ಗೆ ತಿಳಿಸಿರುವುದಾಗಿ ವರದಿ ಮಾಡಿದೆ. ಅವರು ಹೈಡ್ರೋಕೊಡೋನ್ ಎಂಬ ಮಾದಕ ದ್ರವ್ಯ ವ್ಯಸನವನ್ನು ತೊಡೆದು ಹಾಕಲು ಬಯಸಿರುವುದಾಗಿ ಹೇಳಿದ್ದಾರೆ.

ಗಮನಾರ್ಹವಾಗಿ, ಅವರು ತಮ್ಮ ಪ್ರಸ್ತುತ ಹಂತದಿಂದ ಹಿಂದೆ ಸರಿಯಲು ಯೋಜಿಸಿದ್ದಾರೆ. ಪುನರ್ವಸತಿ ಕೇಂದ್ರಕ್ಕೆ ತೆರಳಿದ ನಂತರ ನಿಜನಾಮಧೇಯ ಡಿಯಾಗೋಗೆ ಬದಲಾಯಿಸಲು ಚಿಂತಿಸಿದ್ದಾರೆ.

ಇದಕ್ಕೂ ಮುನ್ನಾ,  ಅವರು “ಬಿ ಸೇಫ್” ಎಂಬ ಆಲ್ಬಂ ಅನ್ನು ರೆಕಾರ್ಡಿಂಗ್ ಮಾಡುವಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಇದಾದ ನಂತರ ಪ್ರದರ್ಶನದಿಂದ ಒಂದು ವಿರಾಮ ಪಡೆದುಕೊಂಡರು. ಈ ಆಲ್ಬಂ ಅನ್ನು ತನ್ನ ಸ್ನೇಹಿತ ದಿವಂಗತ ಮ್ಯಾಕ್ ಮಿಲ್ಲರ್ ಸ್ಮರಣಾರ್ಥ ಗೌರವ ಸಮರ್ಪಣೆ ಮಾಡುವ ಸಲುವಾಗಿ ತಯಾರಿಸಿದ್ದಾರೆ.

Tags

Related Articles