ಸುದ್ದಿಗಳು

Rapper ಶೈಲಿಯ ‘ರಾಕಿಭಾಯ್’ ಹಾಡನ್ನು ರಿಲೀಸ್ ಮಾಡಲಿರುವ ರಾಕಿಂಗ್ ಸ್ಟಾರ್

ಸ್ಯಾಂಡಲ್ ವುಡ್ ನಲ್ಲೂ Rapper ಸಿಂಗರ್ ಗಳ ಸಂಖ್ಯೆ ಏನೂ ಕಡಿಮೆಯಿಲ್ಲ, ಚಂದನ ಶೆಟ್ಟಿ, ಅಲೋಕ್, ರಾಹುಲ್ ಡಿಟ್ಟೊ ಹೀಗೆ ಅನೇಕರು ನಮ್ಮ ಚಂದನವನದಲ್ಲಿದ್ದಾರೆ.. ರಾಹುಲ್ ಡಿಟ್ಟೊ ಎಂಬ Rapper ಈ ಹಿಂದೆ ಈಗ ‘ನಂಗನ್ಸಿದ್’ ಎಂಬ ಹಾಡೊಂದನ್ನು ಬಿಟ್ಟಿದ್ದು, ಅದರಲ್ಲಿ ಯಾರಿಗೋ ಟಾಂಗ್ ಕೊಡುವ ಪ್ರಯತ್ನ ಮಾಡಿದ್ದರು ಎಂದು ಗುಲ್ಲು ಹಬ್ಬಿ ಮುಂದೆ ಆ ಗಾಸಿಪ್ ಗೆ ಫುಲ್ ಸ್ಟಾಪ್ ಆಗಿತ್ತು..

ಈಗ ರಾಹುಲ್ ಡಿಟ್ಟೊ, ಭಾರತದಾದ್ಯಂತ ಹಿಟ್ ಕೊಟ್ಟ ‘ಕೆಜಿಎಫ್’ ಚಿತ್ರದ ‘ರಾಕಿ ಬಾಯ್’ ಹಾಡನ್ನು Rapper ಸ್ಟೈಲ್ ನಲ್ಲಿ ಹಾಡಿದ್ದು, ಈ ವಿಡಿಯೋವನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ..

ಇಂದು ಸಂಜೆ 7:30ಕ್ಕೆ ಫೇಸ್ ಬುಕ್ ನಲ್ಲಿ ಸ್ವತಃ ರಾಕಿ ಭಾಯ್ ಬಿಡುಗಡೆ ಮಾಡಲಿದ್ದಾರೆ ಎಂದು ರಾಹುಲ್ ಡಿಟ್ಟೊ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ..

 

View this post on Instagram

 

Rocky Bhai @ 7:30PM #ಇವತ್ತೇ 😈

A post shared by Rahul Dit-O (@rahul_dito) on

ನಮಗೂ ನೀರು ಸಿಕ್ಕಿ, ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆಯಾಗುವಂತೆ ಪ್ರಾರ್ಥಿಸಿ: ಡಾಲಿ ಧನಂಜಯ್

#rapper #rahuldito #rappersongs #yash #rockingstaryash

Tags