ಸುದ್ದಿಗಳು

ರಾಶಿ ಖನ್ನಾ ಜೊತೆ ಮಾಸ್‌ ಮಹಾರಾಜ ರವಿ ತೇಜ ರೋಮ್ಯಾನ್ಸ್?

ಒಂದಾದ ನಂತರ ಒಂದು ಫ್ಲಾಪ್ ಚಿತ್ರಗಳಲ್ಲಿ ನಟಿಸಿದ ನಂತರ ಮಾಸ್‌ ಮಹಾರಾಜ ರವಿ ತೇಜ ಅವರು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ‘ಡಿಸ್ಕೋ ರಾಜಾ’ ಚಿತ್ರದ ಚಿತ್ರೀಕರಣದಲ್ಲಿ ಕಾರ್ಯನಿರತರಾಗಿದ್ದಾರೆ.

ಅಂದಹಾಗೆ ರವಿ ತೇಜ ಈಗಾಗಲೇ ‘ಮಹಾ ಸಮುದ್ರಂ’ ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಸಹಿ ಹಾಕಿದ್ದು, ಅಜಯ್ ಭೂಪತಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ನಲ್ಲಿ ಸಿದ್ಧಾರ್ಥ್ ಮತ್ತೊಂದು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Image result for ravi teja rashi khanna

ಆರಂಭದಲ್ಲಿ ಅದಿತಿ ರಾವ್ ಹೈದರಿ ‘ಮಹಾ ಸಮುದ್ರಂ’ ನಾಯಕಿ ಎಂದು ಹೇಳಲಾಗುತ್ತಿತ್ತು. ಆದರೆ ನಂತರ ಅವರಿಗೆ ಡೇಟ್ಸ್ ಸಮಸ್ಯೆಯುಂಟಾಗಿದ್ದರಿಂದ ಈ ಯೋಜನೆಯಿಂದ ಹೊರನಡೆದಿದ್ದಾರಂತೆ. ಆದರೆ ನಿರ್ಮಾಪಕರು ಈಗ ನಾಯಕಿ ಪಾತ್ರಕ್ಕಾಗಿ ರಾಶಿ ಖನ್ನಾ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲಿಗೆ ಸ್ಕ್ರೀನ್ ಮೇಲೆ ರವಿ ತೇಜ ಜೊತೆ ರಾಶಿ ಖನ್ನಾ ರೋಮ್ಯಾನ್ಸ್ ಮಾಡುವುದು ಪಕ್ಕಾ ಆಗಿದೆ.

ಆದರೆ ಸಿದ್ಧಾರ್ಥ್ ಗೆ ನಾಯಕಿ ಯಾರೆಂದು ಇನ್ನೂ ಅಂತಿಮಗೊಳಿಸಿಲ್ಲ. ಜೆಮಿನಿ ಕಿರಣ್ ಅವರ ಆನಂದಿ ಆರ್ಟ್ಸ್ ‘ಮಹಾ ಸಮುದ್ರಂ’ ನಿರ್ಮಿಸಲಿದ್ದು, 2020 ರ ದ್ವಿತೀಯಾರ್ಧದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

‘ಜೆರ್ಸಿ’ ತಮಿಳು ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ ಈ ಟ್ಯಾಲೆಂಟೆಂಡ್ ನಟಿ

#balkaninews #rashikhanna #raviteja #mahasamudram

Tags