ಸುದ್ದಿಗಳು

ರಶ್ಮಿಕಾ ನೀರಿಗೆ ಧುಮುಕಲೇ ಇಲ್ಲ, ಈ ಫೋಟೋಶೂಟ್ ಫೇಕ್!!?!!

ಉಳಿದ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇತರವು ಫೋಟೋಶಾಪ್ ನಲ್ಲಿ ಬಳಕೆ

ಬೆಂಗಳೂರು,ಡಿ.15: ರಶ್ಮಿಕ ಮಂದಣ್ಣ  ಇತ್ತೀಚೆಗೆ ಬೆಂಗಳೂರಿನ  ಬೆಳ್ಳಂದೂರ್ ಸರೋವರದ ವಿಷಕಾರಿ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ನೀರೊಳಗೆ ಸರ್ಕಸ್ ಮಾಡಿ  ಫೋಟೋಶೂಟ್ ಮಾಡಿಸಿಕೊಂಡಿದ್ದರು.. ಎಲ್ಲರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಯಿತು.. ಸಮಾಜದ ಉತ್ತಮ ಕಾರ್ಯಕ್ಕೆ  ನಾವೂ ಸಾಥ್ ನೀಡುತ್ತೇವೆ ಎಂದರು…

ವಿಷಯುಕ್ತ ನೀರಿನಲ್ಲಿ  ಚರ್ಮ, ಅಲರ್ಜಿಯಾಗುತ್ತದೆ

ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ಕೆಲವರಂತೂ ಏಕೆ ಅಂತ ಮಾಲಿನ್ಯವಿರುವ ಸರೋವರಕ್ಕಿಳಿದು ಆರೋಗ್ಯ ಹಾಳು ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತ ಪಡಿಸಿದರು. ಇನ್ನು ಕೆಲವರಿಗೆ ಅವಳ ಸೌ0ದರ್ಯದ ಬಗ್ಗೆ ಚಿಂತೆ,, ವಿಷಯುಕ್ತ ನೀರಿನಲ್ಲಿ  ಚರ್ಮ, ಅಲರ್ಜಿಯಾಗುತ್ತದೆ ಮತ್ತು ಚರ್ಮದ ಮೇಲೆ ಇತರ ರೋಗಗಳನ್ನು ಸೃಷ್ಟಿಯಾಗಬಹುದು. ಆದರೆ ಇದರ ಸತ್ಯ ಹೊರ ಬಿದ್ದಿದೆ.. .

ಈಜು ಕೊಳದಲ್ಲಿ ಫೋಟೋಶೂಟ್

ವಾಸ್ತವವಾಗಿ, ನೀರೊಳಗಿನ ಶಾಟ್ ಅನ್ನು ನಿರ್ದಿಷ್ಟ ಸರೋವರದಲ್ಲಿ ತೆಗೆಯಲಿಲ್ಲ..ಬದಲಾಗಿ  ನೀರಿನ ಗುಣಮಟ್ಟವು pH ಮಟ್ಟವನ್ನು ಒಳಗೊಂಡಿರುವ ಒಂದು ಈಜು ಕೊಳದಲ್ಲಿ ಫಟೋಶೂಟ್ ಮಾಡಿಸಲಾಯಿತು. ಉಳಿದ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇತರವು ಫೋಟೋಶಾಪ್ ನಲ್ಲಿ ಬಳಕೆ ಮಾಡಲಾಗಿದೆ.. . ಇದರ ಬಗ್ಗೆ ತಿಳಿದುಬಂದ ನಂತರ, ರಶ್ಮಿಕಾ ಏಕೆ ಈ ರೀತಿ ಪ್ರಚಾರ ಪಡೆಯಲು ಸುಳ್ಳು ಹೇಳಿದರು? ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ..

ಹೇಗಾದರೂ ಸರಿ, ಜಾಗೃತಿ ಮೂಡಿಸಲು ಸೆಲೆಬ್ರೆಟಿಗಳು ಕೆಲವು ವಿಷಯಗಳನ್ನು ಸೃಷ್ಟಿಸಬಹುದು ಆದರೆ ಅವರೂ ಕೂಡ ನಮ್ಮಂತೆಯೇ ಸಾಮಾನ್ಯರು ಕೂಡ ಹೌದು ಎಲ್ಲಾ ಸಮಯದಲ್ಲೂ ಅಂತಹ ರಿಸ್ಕಿ ಕೆಲಸಕ್ಕೆ ಕೈ ಹಾಕಲಾಗುವುದಿಲ್ಲ..!!

Tags

Related Articles