ಸುದ್ದಿಗಳು

ಡಿ-ಬಾಸ್ ಗೆ ರಶ್ಮಿಕಾ ಹೇಳಿದ್ದೇನು …..?

ದರ್ಶನ್ ಅವರು ಒಬ್ಬ ಸ್ವೀಟೆಸ್ಟ್ ನಟ

 ಬೆಂಗಳೂರು,ಡಿ,23: ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವೀಟೆಸ್ಟ್ ನಟ ಅಂತ ಕಿರಿಕ್ ಬೆಡಗಿ ಕರ್ನಾಟಕ ಕಶ್ರ್ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹೌದು, ದರ್ಶನ್ ಅವರು ಒಬ್ಬ ಸ್ವೀಟೆಸ್ಟ್ ನಟ ಅವರ ಜೊತೆ ಯಜಮಾನ ಸಿನಿಮಾದಲ್ಲಿ ನಟಿಸೊಕ್ಕೊ ನನಗೆ ಸಿಕ್ಕ ಪುಣ್ಯ ಅಂತ ಹೇಳಿದ್ದಾರೆ.

‘ಯಜಮಾನ’ ಸಿನಿಮಾದಲ್ಲಿ ರಶ್ಮಿಕಾ …!

ಎಸ್, ‘ಯಜಮಾನ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ. ಈ ಸಿನಿಮಾ ಈಗಾಗಲೇ ಪೋಸ್ಟರ್ ಗಳಿಂದ ಸಖತ್ ಸದ್ದು ಮಾಡ್ತಿದೆ. ಜೊತೆಗೆ ಈ ಚಿತ್ರ ಮುಂದಿನ ವರ್ಷ ರಿಲೀಸ್ ಆಗಲಿದ್ದು, ದಚ್ಚು ಈ ಚಿತ್ರಕ್ಕೆ ತುಂಬಾ ಪರಿಶ್ರಮ ಪಡ್ತಿದ್ದಾರೆ. ದರ್ಶನ್ ಅಂದ್ರೆ ಕೇಳ್ಬೇಕಾ ದಚ್ಚು ಜೊತೆ ಸಿನಿಮಾ ಮಾಡುವುದಕ್ಕೆ ಸಾಕಷ್ಟು ಹೀರೋಯಿನ್ ಗಳು ಕಾಯ್ತಾನೆ ಇರ್ತಾರೆ. ಅದರಲ್ಲೂ ದರ್ಶನ್ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡ್ರೆ ಆ ಚಿತ್ರ ಹಿಟ್.

Image result for darshan and rashmika mandanna

ದಚ್ಚುಗೆ ಫಿದಾ ಆದ್ರಾ ಕರ್ನಾಟಕ ಕ್ರಶ್ ….!

ಸದ್ಯ ರಶ್ಮಿಕಾ ಮಂದಣ್ಣ ದಚ್ಚು ಗೆ ಫಿದಾ ಆಗಿದ್ದಾರೆ. ದಚ್ಚು ಸ್ವೀಟೇಸ್ಟ್ ನಟ. ಅವರ ಜೊತೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಯಜಮಾನ ಸಿನಿಮಾ ಈ ವರ್ಷ ರಿಲೀಸ್ ಆಗ್ಬೇಕಿತ್ತು. ಕಾರಾಣಾಂತರಗಳಿಂದ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ನಿಮ್ಮ ಮುಂದೆ ಯಜಮಾನ ಸಿನಿಮಾ ಬರಲಿದೆ. ನಿಮ್ಮ ಪ್ರೀತಿ ಹೀಗೆ ಇರಲಿ. ಮತ್ತೆ ನನ್ನ  ಮತ್ತೊಂದು ಸಿನಿಮಾ ಪೊಗರು ಕೂಡ ಬರಲಿದೆ ಎಂದಿದ್ದಾರೆ.

Tags

Related Articles