ಸುದ್ದಿಗಳು

ಕಿಚ್ಚನ ಬಗ್ಗೆ ಹೇಳಿ ಎಂದು ಅಭಿಮಾನಿ ಪ್ರಶ್ನೆಗೆ ರಶ್ಮಿಕಾ ಟ್ವೀಟ್ ಏನು?

ಬೆಂಗಳೂರು,ಫೆ.20: ನಿನ್ನೆ, ರಶ್ಮಿಕ ಮಂದಣ್ಣ ಅವರ ಟ್ವಿಟರ್ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ಮಾಡಲು ನಿರ್ಧರಿಸಿದರು. ತನ್ನ ಅಭಿಮಾನಿಗಳೊಂದಿಗೆ ಕೊಂಚ  ಸಮಯ ಕಳೆಯಲು ಬಯಸುತ್ತೇನೆ  ಎಂದು ಹೇಳುತ್ತಾ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ತಾವು ಬೇಕಾಗಿರುವುದನ್ನು ಕೇಳಬಹುದು ಮತ್ತು ಸಾಧ್ಯವಾದಷ್ಟು ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಳು…

ತುಂಬಾ ಕಾಳಜಿಯುಳ್ಳವರು”

ರಶ್ಮಿಕಾ ಹೀಗೆ ಹೇಳಿದ್ದೇ ತಡ, @ ಕಿಚ್ಚಾ ಸುದೀಪ್ ಎಸೋಸಿಯೇಶನ್ ಅವರು ಸುದೀಪ್ ಬಗ್ಗೆ ಎರಡು ಮಾತು ಹೇಳಿ ಎಂದು ಕಾಮೆಂಟ್ ಮಾಡಿದರು… ಇದಕ್ಕೆ, ರಶ್ಮಿಕಾ ಉತ್ತರಿಸುತ್ತಾ, “ತುಂಬಾ ಕಾಳಜಿಯುಳ್ಳವರು .. ಹಾಗೂ ಪ್ರಾಮಾಣಿಕತೆಯುಳ್ಳ ವ್ಯಕ್ತಿ.” ಎಂದು ರಶ್ಮಿಕಾ ಸುದೀಪ್ ಬಗ್ಗೆ ಹಾಡಿ ಹೊಗಳಿದ್ದಾಳೆ.. ಇನ್ನು ರಶ್ಮಿಕಾಳ ಈ ಟ್ವೀಟ್ ಸುದೀಪ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಇದಲ್ಲದೆ, ಕಿಚ್ಚಾ ಸಹ ಇದನ್ನು ಗಮನಿಸಿ ನಗು ಮತ್ತು ಮಡಿಸಿದ ಕೈ ಎಮೋಜಿಯೊಂದಿಗೆ ರಶ್ಮಿಕಾಗೆ ಟ್ವೀಟ್ ಮಾಡಿದರು.

ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ.. ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.. ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ರಶ್ಮಿಕಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಶೇಷ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿ ಹೊಸ ಪ್ರಯೋಗ ಮಾಡಿದ್ದಾರೆ. ಸದ್ಯ ರಶ್ಮಿಕಾ ತಮ್ಮ ಶಾರ್ಟ್ ಹೇರ್ ನಿಂದಲ್ಲೂ ಸಾಕಷ್ಟು ಮಿಂಚುತ್ತಿದ್ದಾರೆ