ಸುದ್ದಿಗಳು

ಕೂದಲಿಗೆ ಕತ್ತರಿ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ

'ಡಿಯರ್ ಕಾಮ್ರೆಡ್' ಚಿತ್ರಕ್ಕಾಗಿ ರಶ್ಮಿಕಾ ಹೊಸ ವೇಷ

ಬೆಂಗಳೂರು.ಜ.08: ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿ ರಶ್ಮಿಕಾ ಮಂದಣ್ಣ, ಇದೀಗ ಪಕ್ಕದ ರಾಜ್ಯದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರೊಂದಿಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಡಿಯರ್ ಕಾಮ್ರೆಡ್

‘ಗೀತ ಗೋವಿಂದಂ’ ಚಿತ್ರದ ಯಶಸ್ಸಿನ ನಂತರ ವಿಜಯ್ ದೇವರಕೊಂಡ ಜೊತೆಗೆ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆಯಾಗಿದ್ದಾರೆ. ಈ ಸಿನಿಮಾ, ಕ್ರಿಕೆಟ್ ಗೆ ಸಂಬಂಧಿಸಿದ ಕಥೆ ಸಿನಿಮಾದಲ್ಲಿರುವುದರಿಂದ ಹೈದರಾಬಾದ್ ನಲ್ಲಿ ತರಬೇತಿಯಲ್ಲಿಯೂ ಭಾಗವಹಿಸಿದ್ದರು.

ಬದಲಾದ ಕೇಶ ರಾಶಿ

ಈ ಹೊಸ ಚಿತ್ರದಲ್ಲಿ ರಶ್ಮಿಕಾ ತಮ್ಮ ಉದ್ದದ ತಲೆಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕ್ರಿಕೆಟರ್ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಈ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಭರತ್ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಕನ್ನಡದ ಸಿನಿಮಾಗಳು

ಇನ್ನು ಕನ್ನಡದಲ್ಲಿ ‘ಯಜಮಾನ’ ಚಿತ್ರದಲ್ಲಿ ನಟಿಸಿದ್ದು, ‘ಪೊಗರು’ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಹೀಗಾಗಿ ಸಿನಿಮಾದಿಂದ ಸಿನಿಮಾಗೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Tags

Related Articles