ಸುದ್ದಿಗಳು

ಸಮಾಜ ಸೇವೆಯತ್ತ ಮುಖ ಮಾಡಿ ರಶ್ಮಿಕಾ!!

ಬೆಂಗಳೂರು,ಜ.11: ರಶ್ಮಿಕಾ ಮಂದಣ್ಣ ಈಗ ಚಿತ್ರರಂಗದಲ್ಲಿ ಫುಲ್ ಬ್ಯುಸಿ.. ಟಾಲಿವುಡ್ ನ ವಿಜಯ ದೇವರಕೊಂಡ ಜೊತೆ  ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಫುಲ್ ಬ್ಯುಸಿ…

ರಸ್ತೆಯೊಂದರ ಬದಿ ನಿಂತು ಸಮಾಜ ಸೇವೆ

ಚಿತ್ರರಂಗದ ಬ್ಯುಸಿ ಶೆಡ್ಯೂಲ್ ನಲ್ಲೂ  ರಶ್ಮಿಕಾ ಜನಸೇವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..  ಹೌದು, ರಶ್ಮಿಕಾ ತಾವೇ ಆ ಜನರಿಗೆ ಊಟ ಬಡಿಸಿದ್ದಾರೆ. ರಸ್ತೆಯೊಂದರ ಬದಿ ನಿಂತು ಸಮಾಜ ಸೇವೆ ಮಾಡಿದ್ದಾರೆ. ಎಡಗೈ ಮಾಡಿದ್ದು ಬಲಗೈ ಗೆ ಗೊತ್ತಾಗಬಾರದು.. ಹಾಗೆಯೇ ರಶ್ಮಿಕಾ ಮಾಡಿದ ಕೆಲಸ  ಯಾರಿಗೂ ಗೊತ್ತಾಗಬಾರದು ಅಂತ ಈ ವಿಷಯವನ್ನು ಎಲ್ಲೂ ಹೇಳಿಕೊಂಡು ಬಂದಿಲ್ಲ… ಆದರೆ, ಈಗ ಫೋಟೋ ವೈರಲ್ ಆಗಿದೆ.. ರಶ್ಮಿಕಾ ಫ್ಯಾನ್ಸ್ ಪೇಜ್ ನವರು ಇದನ್ನು ಹಂಚಿಕೊಂಡಿದ್ದಾರೆ ..

ರಶ್ಮಿಕಾ ಟ್ವೀಟ್

ಇನ್ನು ಈ ಫೋಟೋವನ್ನು ಹಂಚಿಕೊಂಡ ರಶ್ಮಿಕಾ ಇದು ಎಲ್ಲಿ ಸಿಕ್ಕಿತು? ಇರಲಿ..  ಇವರೆಲ್ಲರೂ ಪ್ರತಿ ದಿನ ಬಿಸಿಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.. ನಾನು ಅವರನ್ನು ನೋಡುತ್ತಿದ್ದೆ..ಇಲ್ಲಿರುವ ಪ್ರತಿಯೊಬ್ಬರ ಮನೆಯಲ್ಲಿಯೂ ಒಬ್ಬೊಬ್ಬರು ಕ್ಯಾನ್ಸರ್ ಪೀಡಿತರಿದ್ದಾರೆ. ಅವರಿಗೆ ಏನಾದರೂ ಕಿಂಚಿತು ಉಪಕಾರ ಮಾಡಬೇಕೆನ್ನಿಸಿತು..  ಹಾಗೆ ಇದೊಂದು ನನ್ನ ಪುಟ್ಟ ಸಹಾಯ.. ಎಂದು ಬರೆದುಕೊಂಡಿದ್ದಾರೆ..

Tags

Related Articles